Udupi water Crisis; ಅಗ್ನಿ ಶಾಮಕ ದಳಕ್ಕೂ ತಟ್ಟಿದ ಜಲಬಾಧೆ!

ಪ್ರಸ್ತುತ ಬಜೆ ಡ್ಯಾಂನಲ್ಲಿ ಮೇ.15ರವರೆಗೆ ನೀರಿನ ಸಂಗ್ರಹ ಇದೆ

Team Udayavani, Apr 15, 2023, 12:11 PM IST

Udupi water Crisis; ಅಗ್ನಿ ಶಾಮಕ ದಳಕ್ಕೂ ತಟ್ಟಿದ ಜಲಬಾಧೆ!

ಉಡುಪಿ: ಎಲ್ಲೆಡೆ ನೀರಿನ ಅಭಾವ ತಟ್ಟುತ್ತಿದ್ದು ಅಗ್ನಿ ಶಾಮಕ ದಳಕ್ಕೂ ಜಲಬಾಧೆ ಕಾಡಿದೆ. ಉಡುಪಿ ನಗರದ ಅಗ್ನಿ ಶಾಮಕ ದಳದ ಠಾಣೆಗೆ ಹೆಚ್ಚು ಸಮಸ್ಯೆಯಾಗಿದೆ. ಬೇಸಗೆಯಾದ್ದರಿಂದ ಬೆಂಕಿ ಅವಘಡಗಳು ಹೆಚ್ಚಿದ್ದು, ನಿತ್ಯ ಐದಾರು ಕರೆಗಳು ಬರುತ್ತಿದೆ. ಈ ನಡುವೆ ಸಿಬಂದಿ ನೀರಿನ ಸಮಸ್ಯೆ ನಡುವೆ ತುರ್ತು ಕಾರ್ಯಾಚರಣೆ ನಡೆಸಬೇಕಿದೆ.

ನಗರಸಭೆಯಿಂದ ಹಿಂದೆ 24ಗಂಟೆ ನೀರು ಪೂರೈಕೆಯಾಗುತ್ತಿತ್ತು. ಅದೇ ರೀತಿ ಕಾರ್ಕಳ, ಕುಂದಾಪುರ, ಬೈಂದೂರು, ಮಲ್ಪೆ ಭಾಗದ ಠಾಣೆಗಳಿಗೂ ಸ್ಥಳೀಯಡಳಿತ ಸಂಸ್ಥೆಗಳಿಂದ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಉಡುಪಿ ಅಗ್ನಿ ಶಾಮಕ ದಳ ಠಾಣೆಗೆ ನಿತ್ಯ20ರಿಂದ 25 ಸಾವಿರ ಲೀ. ಅಗತ್ಯವಿದೆ. ಠಾಣೆಯಲ್ಲಿ 2 ಲಕ್ಷ ಲೀಟರ್‌ ಮಟ್ಟದ ನೆಲಮಹಡಿ ಜಲ ಸಂಗ್ರಹ ಟ್ಯಾಂಕ್‌ ಇದೆ. ನಗರಸಭೆ ಈ ಹಿಂದೆ ನಿರಂತರ ನೀರು ಪೂರೈಕೆ ಮಾಡುತ್ತಿದ್ದಾಗ ಇದು ಯಾವಾಗಲು ಭರ್ತಿ ಇರುತ್ತಿತ್ತು.

ಸದ್ಯಕ್ಕೆ ಇಷ್ಟೊಂದು ಪ್ರಮಾಣದ ನೀರು ನಗರಸಭೆಯಿಂದ ಸಿಗುತ್ತಿಲ್ಲ. ಪ್ರಸ್ತುತ ಕಾರ್ಯಚರಣೆಗೆ ಹೋದ ಸಂದರ್ಭ ಎಲ್ಲಿಯಾದರೂ ನೀರಿನ ಮೂಲ ಇದ್ದರೆ ಅಲ್ಲಿಯೇ ತುಂಬಿಸಿಕೊಂಡು ಬರುತ್ತಾರೆ. ಉಡುಪಿ ಠಾಣೆಯಲ್ಲಿ 5 ಸಾವಿರ ಲೀಟರ್‌ನ 4 ಟ್ಯಾಂಕರ್‌ಗಳಿವೆ. 9 ಸಾವಿರ ಲೀಟರ್‌ನ ಒಂದು ಟ್ಯಾಂಕರ್‌ ಕಾರ್ಯಾಚರಣೆಗೆ ಬಳಕೆ ಮಾಡಲಾಗುತ್ತದೆ. ನಿತ್ಯ ಹುಲ್ಲುಗಾವಲಿಗೆ ಬೆಂಕಿ, ಅರಣ್ಯ, ಮನೆ ಗಳಿಗೆ ಸಂಬಂಧಿಸಿ 4ರಿಂದ 6 ಕರೆಗಳು, ಜನವರಿಯಿಂದ ಇಲ್ಲಿಯವರೆಗೆ ಒಟ್ಟು 210 ಕರೆಗಳು ಉಡುಪಿ ಠಾಣೆಗೆ, ಎಲ್ಲ ಠಾಣೆ ಸೇರಿಸಿದಲ್ಲಿ 700-800 ಕರೆ ಬಂದಿದೆ.

ಮಳೆ ಬಾರದಿದ್ದರೆ ಪರಿಸ್ಥಿತಿ ಕಷ್ಟ
ಪ್ರಸ್ತುತ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ಗಂಭೀರ ಸ್ವರೂಪ ಪಡೆದುಕೊಂಡಿಲ್ಲ. ಹೊಟೇಲ್‌, ಕೆಲವು ವಸತಿ ಸಮುತ್ಛಯಗಳಲ್ಲಿ ನೀರಿನ ಕೊರತೆ ಕಾಡಲಾರಂಭಿಸಿದ್ದು, ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಮಣಿಪಾಲ ಸಹಿತ ನಗರದ ಕೆಲವು ಎತ್ತರದ ಪ್ರದೇಶಗಳಲ್ಲಿ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ನೀರಿನ ಕೊರತೆ ನಡುವೆಯೂ ಎರಡು ದಿನಗಳ ಹಿಂದೆ ಪೈಪ್‌ಲೈನ್‌ಗೆ ಹಾನಿಯಾಗಿ ನಗರದಲ್ಲಿ ಮೂರು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಪ್ರಸ್ತುತ ಬಜೆ ಡ್ಯಾಂನಲ್ಲಿ ಮೇ.15ರವರೆಗೆ ನೀರಿನ ಸಂಗ್ರಹ ಇದೆ. ಮುಂದಿನ 10ದಿನದ ಒಳಗೆ ಮಳೆ ಬಾರದಿದ್ದರೇ ಪರಿಸ್ಥಿತಿ ಕಷ್ಟವಿದ್ದು, ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವ ಸಂದಿಗªತೆ ಎದುರಾಗಬಹುದು.

ಮಳೆ ಬಾರದೆ ಇದ್ದಲ್ಲಿ ಮುಂಜಾಗ್ರತ ಕ್ರಮ
ನೀರಿನ ಪೈಪ್‌ಗೆ ಹಾನಿಯಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಸರಿಪಡಿಸಲಾಗಿದೆ. ಒಂದು ದಿನದಲ್ಲಿ ಎಲ್ಲೆಡೆ ನೀರು ಪೂರೈಕೆ ಮುಂಚಿನಂತೆ ಸರಾಗವಾಗಿರಲಿದೆ. ಬಜೆಯಲ್ಲಿ ನಿತ್ಯ 30 ಎಂಎಲ್‌ಡಿ ನೀರು ಪಂಪ್‌ ಮಾಡಲಾಗುತ್ತಿದ್ದು, ಮೇ ಮೊದಲ ವಾರದವರೆಗೂ ನೀರು ಲಭ್ಯವಿದೆ. ಮಳೆ ಬಾರದೆ ಇದ್ದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ.
ಆರ್‌. ಪಿ. ನಾಯಕ್‌, ಪೌರಾಯುಕ್ತರು, ಉಡುಪಿ ನಗರಸಭೆ.

ನಗರಸಭೆಯಿಂದ ಬೋರ್‌ವೆಲ್‌ ದುರಸ್ತಿ
ಪ್ರತೀ ವರ್ಷ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಬೇಸಗೆಯಲ್ಲಿ ನೀರಿನ ಅಭಾವ ಕಾಡುತ್ತದೆ. ಉಡುಪಿಯಲ್ಲಿ ಕಳೆದ 15, 20 ದಿನಗಳಿಂದ ನೀರಿಗೆ ಸಮಸ್ಯೆಯಾಗಿತ್ತು. ಈ ಬಗ್ಗೆ ನಗರಸಭೆ ಆಯುಕ್ತರ ಜತೆಗೆ ಮಾತುಕತೆ ನಡೆಸಿದ್ದು, ಠಾಣೆ ಸಮೀಪ ಇರುವ ಬೋರ್‌ ವೆಲ್‌ಅನ್ನು ನಗರಸಭೆ ವತಿಯಿಂದ ದುರಸ್ತಿಗೊಳಿಸಿದ್ದಾರೆ. ಈ ಜಲಮೂಲದಲ್ಲಿ ಕಾರ್ಯಚರಣೆಗೆ ಬೇಕಾದಷ್ಟು ನೀರು ಪ್ರಸ್ತುತ ಲಭ್ಯವಾಗುತ್ತಿದೆ.
-ವಸಂತ್‌ಕುಮಾರ್‌, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ.

ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.