ಮತದಾರರಿಂದ ಭರವಸೆ,ಗೆಲುವು ಖಚಿತ: ಅಮೃತ್‌ ಶೆಣೈ


Team Udayavani, Apr 4, 2019, 6:30 AM IST

amruth-shenoy

ಉಡುಪಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಅವರ ಪಿಪಿಸಿ ಬಳಿಯಲ್ಲಿರುವ ಸಂಕೀರ್ಣದಲ್ಲಿ ಚುನಾವಣಾ ಕಚೇರಿಯನ್ನು ತೆಂಗಿನ ಸಸಿಗೆ ನೀರೆರೆಯುವ ಮೂಲಕ ಅತಿಥಿಗಳು ಶನಿವಾರ ಉದ್ಘಾಟಿಸಿದರು.

ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಮಾತನಾಡಿ, ಸೋಲು-ಗೆಲುವು ಮುಖ್ಯವಲ್ಲ. ಹೋರಾಟದ ದೃಷ್ಟಿಯಿಂದ ಕಣಕ್ಕಿಳಿದಿದ್ದು ದೂರವಾಣಿ ಕರೆ ಮೂಲಕ ಮತ ನೀಡುವುದಾಗಿ ಸಾವಿರಾರು ಮಂದಿ ಭರವಸೆ ನೀಡಿದ್ದಾರೆ. ನಾನು ಇದುವರೆಗೆ ಮಾಡಿದ ಸಮಾಜಮುಖೀ ಕಾರ್ಯಕ್ಕೆ ಭರವಸೆ ಮಾತುಗಳು ಕೇಳಿ ಬರುತ್ತಿದೆ ಎಂದರು.

ಕ್ಷೇತ್ರದಲ್ಲಿ 2.15 ಲಕ್ಷ ಮನೆಗಳಿಗೆ ಪ್ರತಿ ಮನೆಗೂ ತೆರಳಲು ಸಾಧ್ಯವಿಲ್ಲದ ನೆಲೆಯಲ್ಲಿ ಪತ್ರಿಕಾ ಗೋಷ್ಠಿ, ಪ್ರಚಾರ ಸಭೆ, ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ತಲುಪಿ ಮನವಿ ಮಾಡುತ್ತೇನೆ. ಗೌಪ್ಯ ಮತದಾನವಾದ
ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲುವ ಭರವಸೆ ಇದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಟ್ಟು ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕ್ಷೇತ್ರದ ಯಾವುದೇ ಸಮಸ್ಯೆಗೆ ಸ್ಪಂದಿಸದ ನಿಷ್ಕ್ರಿಯ ಸಂಸದೆ, ಕೇಂದ್ರ ಸರಕಾರದ ನೀತಿಯ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿದ್ದೇನೆ. ಕೋಟಿಗಟ್ಟಲೆ ಹಣದ ಆಮಿಷ ಬಂದಿದೆ. ಆದರೂ ಜಗ್ಗದೆ ಚುನಾವಣೆ ಎದುರಿಸುತ್ತೇನೆ ಎಂದರು.

ಸಂಸದನಾಗಿ ಗೆದ್ದ ಬಳಿಕ
ಸಂಸದನಾಗಿ ಗೆದ್ದ ಅನಂತರ ಮರಳಿನ ಸಮಸ್ಯೆಗೆ ಪರಿಹಾರ, ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಫ್ಟ್ವೇರ್‌ ಪಾರ್ಕ್‌ ನಿರ್ಮಿಸಿ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವುದು, ಸುವರ್ಣ ತ್ರಿಭುಜ ಬೋಟ್‌ ಮತ್ತು ಮೀನುಗಾರರ ಪತ್ತೆ ಕಾರ್ಯಕ್ಕೆ ನ್ಯಾಯೋಚಿತ ಹೋರಾಟ, ಚಿಕ್ಕಮಗಳೂರು ಜಿಲ್ಲೆಯ ಅಡಿಕೆ, ಕಾಫಿ ಬೆಳೆಗಾರರ, ಕುದುರೆಮುಖ ಕಾರ್ಮಿಕರ ಸಮಸ್ಯೆಗೆ ಪರಿಹಾರ, ಉಭಯ ಜಿಲ್ಲೆಗಳಲ್ಲಿ ಸಾಮಾಜಿಕ ಸಾಮರಸ್ಯ, ಶಾಂತಿ ಕೆಡಿಸುವ ಶಕ್ತಿಗಳ ವಿರುದ್ಧ ಹೋರಾಟ, ರಾ.ಹೆ., ಟೋಲ್‌ಗೇಟ್‌, ಸಿಆರ್‌ಝಡ್‌ ಮತ್ತು ಕೇಂದ್ರ ವ್ಯಾಪ್ತಿಯ ಇನ್ನಿತರ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಹೋರಾಟ, ಉಭಯ ಜಿಲ್ಲೆಗಳ ಜನಾಭಿಪ್ರಾಯದಂತೆ ಸಂಸತ್ತಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದವರು ಭರವಸೆ ನೀಡಿದರು.

ಮನೋವೈದ್ಯ ಡಾ| ಪಿ.ವಿ. ಭಂಡಾರಿ ಮಾತನಾಡಿ, ಅಮೃತ್‌ ಶೆಣೈ ಅವರಿಗೆ ಕಾಂಗ್ರೆಸ್‌ನಿಂದ ಹೊರಗೆ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪರಿಸ್ಥಿತಿ ಅನಿವಾರ್ಯವಾಗಿ ಒದಗಿ ಬಂದಿದೆ. ಸಭ್ಯತೆ, ಸರಳತೆ, ವಿದ್ಯಾವಂತ ಯುವಕ ಅಮೃತ್‌ ಶೆಣೈ ಅವರಿಗೆ ಮತ ನೀಡಿದರೆ ಅಭಿವೃದ್ಧಿ ಕಾರ್ಯ ನಡೆಯಲಿದೆ. ಸದಾ ಜನರೊಂದಿಗೆ ಬೆರೆಯುವ ಯುವ ನಾಯಕನನ್ನು ಗೆಲ್ಲಿಸುವಲ್ಲಿ ಯುವಜನತೆ ಶೆಣೈಗೆ ಮತ ನೀಡಬೇಕಾಗಿದೆ ಎಂದರು.

ಅಮೃತ್‌ ಶೆಣೈ ಅಭಿಮಾನಿಗಳಾದ ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು, ಚುನಾವಣಾ ಏಜೆಂಟ್‌ ಯಜ್ಞೆàಶ್‌ ಆಚಾರ್ಯ, ಅಂಗನವಾಡಿ ಶಿಕ್ಷಕಿ ಸರೋಜಾ, ಶಾಹಿದ್‌ ಅಲಿ, ವರದರಾಜ್‌ ಚಿಕ್ಕಮಗಳೂರು, ಎಲನ್‌ ರೋಹನ್‌ ವಾಜ್‌, ಯೋಗೀಶ್‌ ಭಟ್‌, ಅನ್ಸರ್‌ ಅಹಮ್ಮದ್‌ ಉಪಸ್ಥಿತರಿದ್ದರು.
ಮನಃಶಾಸ್ತ್ರಜ್ಞೆ ಜಯಶ್ರೀ ಭಟ್‌ ಸ್ವಾಗತಿಸಿ, ಪ್ರಸ್ತಾವನೆಗೈದರು.

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.