ಕಾಂಗ್ರೆಸ್‌ನಲ್ಲಿ ಮನೆಯೊಂದು ಮೂರು ಬಾಗಿಲು

Team Udayavani, May 6, 2018, 6:00 AM IST

ಸಿದ್ದಾಪುರ: ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ| ಜಿ. ಪರಮೇಶ್ವರ ಅವರು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳವುದೇ ಇಲ್ಲ. ಕಾಂಗ್ರೆಸ್‌ ಎನ್ನುವುದು ಒಡೆದ ಮನೆಯಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. 

ಅವರು ಬೈಂದೂರು ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಇಪ್ಪತ್ತೂಂದು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಬಾರಿ ಕಾಂಗ್ರೆಸನ್ನು ಸೋಲಿಸುವ ಮೂಲಕ ರಾಜ್ಯದಲ್ಲಿಯೂ ಕಾಂಗ್ರೆಸ್‌ ಮುಕ್ತವಾಗುವ ಕಾಲ ಕೂಡಿಬಂದಿದೆ. ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆ ಹದಗೆಟ್ಟಿದ್ದು, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಮತದಾರರು ಕಾಂಗ್ರೆಸ್‌ ಸರಕಾರದ ದುರಾಡಳಿತದಿಂದ ಬೇಸತ್ತು, ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದರು. 

ಕ್ಷೇತ್ರದ ಅಭಿವೃದ್ಧಿಗೆ ಶಾಶ್ವತ ಯೋಜನೆ ಬೈಂದೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಇಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದ್ದು, ಶಾಸಕರ ಶಾಸನಬದ್ಧವಾದ ಅನುದಾನಗಳನ್ನು ತಂದ ಮಾತ್ರಕ್ಕೆ ಅಭಿವೃದ್ಧಿಯಲ್ಲ. ಯಾವುದೇ ಶಾಶ್ವತ ಯೋಜನೆ ತರಲಿಲ್ಲ. ನನ್ನನ್ನು ಶಾಸಕನ್ನಾಗಿ ಆಯ್ಕೆ ಮಾಡಿದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶಾಶ್ವತ ಯೋಜನೆ, ಉದ್ಯೋಗ ಸೃಷ್ಟಿಸುವ ಉದ್ಯಮ, ಶಾಲೆ, ಕಾಲೇಜು, ಆರೋಗ್ಯ ಕೇಂದ್ರ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದರು.

ಕುಂದಾಪುರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಭಾರತಿ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ನಂಜುಂಡಿ, ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರ. ಕಾರ್ಯದರ್ಶಿ ನವೀನ ಕುತ್ಯಾರು, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ರಾಘವೇಂದ್ರ ಉಪ್ಪೂರು, ಬಾಬು ಹೆಗ್ಡೆ ತಗ್ಗರ್ಸೆ, ಶಂಕರ ಪೂಜಾರಿ, ಶೋಭಾ ಪುತ್ರನ್‌, ಸುರೇಶ ಬಟಾವಾಡಿ, ಸದಾನಂದ ಉಪ್ಪಿನಕುದ್ರು, ಮುಖಂಡ ರಾದ ಟಿ.ಬಿ. ಶೆಟ್ಟಿ, ಪ್ರವೀಣ ಕುಮಾರ ಶೆಟ್ಟಿ ಕಡೆ, ಕೆ. ಉಮೇಶ ಶೆಟ್ಟಿ, ಪೂರ್ಣಿಮಾ, ದೇವದಾಸ ಶೆಟ್ಟಿ ಆಜ್ರಿ, ರೋಹಿತ್‌ ಕುಮಾರ ಶೆಟ್ಟಿ, ಸರೋಜಿನಿ ಶೆಟ್ಟಿ, ಪ್ರಿಯಾದರ್ಶಿನಿ ದೇವಾಡಿಗ, ಭರತ್‌ ಕಾಮತ್‌, ಮಹೇಶ್‌ ಕಾಮತ್‌ ಐರಬೈಲು, ಜಯರಾಮ ಭಂಡಾರಿ ಉಪಸ್ಥಿತರಿದ್ದರು. ಎ. ಬಾಲಚಂದ್ರ ಭಟ್‌, ದೀಪಕ್‌ ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಭಟ್ಕಳ, ಕುಂದಾಪುರ ಹಾಗೂ
ಹಂಗಾರಕಟ್ಟೆಯ ವರೆಗಿನ ಸಮುದ್ರದ ಹೂಳೆತ್ತುವ ಯೋಜನೆ ರೂಪಿಸಲಾಗಿದೆ. ಕರಾವಳಿ ಮೀನುಗಾರ ಮಹಿಳೆಯರ ಅನು
ಕೂಲಕ್ಕಾಗಿ ಮಾರಾಟ ಮಳಿಗೆ ಸ್ಥಾಪನೆ, ಡೀಮ್ಡ್ ಫಾರೆಸ್ಟ್‌ ಸಡಿಲ ಮಾಡಿ, 94 ಸಿ ಮೂಲಕ ಜಾಗ ಮಂಜೂರು ಮಾಡಲು ಪ್ರಯತ್ನ, ವಾರಾಹಿ ಬಲದಂಡೆ ಯೋಜನೆ ರೂಪಿಸಿ, ಬೈಂದೂರುವರೆಗೆ ಕುಡಿಯುವ ನೀರಿನ ಯೋಜನೆಗೆ ಕ್ರಮ, ಸಿದ್ದಾಪುರದಲ್ಲಿ ಸುಸಜ್ಜಿತ ಆಸ್ಪತ್ರೆ ಹಾಗೂ ಪದವಿ ಕಾಲೇಜು ಸ್ಥಾಪನೆ ಮಾಡಲಾಗುವುದು. 
ಯಡಿಯೂರಪ್ಪ,  ಬಿಜೆಪಿ ರಾಜ್ಯಾಧ್ಯಕ್ಷ 

ಬಿಜೆಪಿಗೆ ಸೇರ್ಪಡೆ
ಬಿಎಸ್‌ವೈ ಸಮ್ಮುಖದಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. 3 ಸಾವಿರಕ್ಕೂ ಹೆಚ್ಚಿನ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ