ಕಾಪು ತಳಮಟ್ಟದಿಂದ ಅಭಿವೃದಿಯಾಗಿದೆ 

Team Udayavani, Mar 17, 2018, 1:17 PM IST

17-March-8.jpg

ಉಡುಪಿ: ಸರ್ವತೋಮುಖ ಅಭಿವೃದ್ಧಿಯಿಂದಾಗಿ ಇತರ ಜಿಲ್ಲೆಗಳು ಕಾಪುವಿನತ್ತ ಕಣ್ಣು ಹಾಯಿಸುವಂತಾಗಿದೆ. ರಾಜ್ಯದಲ್ಲಿ ನೂತನವಾಗಿ ರಚನೆಯಾದ ಸ್ಥಳೀಯ ಸಂಸ್ಥೆಗಳ ಆಡಳಿತ ಕಾರ್ಯದಲ್ಲಿ ಕಾಪು ಪುರಸಭೆ ಪ್ರಥಮ, ಸ್ವಚ್ಚತೆಯಲ್ಲಿ ದ್ವಿತೀಯ ಸ್ಥಾನವನ್ನು ಕಾಪು ಪಡೆದಿದೆ. ನಾಲ್ಕೂವರೆ ವರ್ಷದ
ಹಿಂದೆ ಯಾರ ದೃಷ್ಟಿಗೂ ಬೀಳದಂತೆ ಇದ್ದ ಕಾಪು ಎನ್ನುವ ಹೆಸರು ಈಗ ರಾಜ್ಯದ ಹೆಗ್ಗುರುತಾಗಿದೆ.

ಇದು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರ ಅಭಿಪ್ರಾಯ. ಕಾಪು ತಾಲೂಕು, ಕಾಪು ಪುರಸಭೆ ಮಾಡಿರುವುದರ ಜತೆಗೆ ತನ್ನ ಕ್ಷೇತ್ರದ ಇನ್ನಿತರ ಸಾಧನೆ, ಮುಂದಿನ ಅವಧಿಗೆ ಶಾಸಕನಾದರೆ ಕಾಪು ಕ್ಷೇತ್ರವನ್ನು ಹೇಗೆ ಮಾದರಿ ಕ್ಷೇತ್ರವನ್ನಾಗಿಸುವುದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮಾಡುವುದು ಇತ್ಯಾದಿ ಚಿಂತನೆಗಳ ಕುರಿತು ಅವರು ‘ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಾಪುವಿಗೆ 1,700 ಕೋ.ರೂ. ಅನುದಾನವನ್ನು ವಿವಿಧ ಇಲಾಖೆಗಳ ಮೂಲಕ ತರಲಾಗಿದೆ ಎಂದಿದ್ದಾರೆ. ಕಾಪುವಿಗೆ ‘ಐಡೆಂಟಿಟಿ’ ಎನ್ನುವುದೇ ಇರಲಿಲ್ಲ. ಹುಂಡೇಕರ್‌, ಗದ್ದೀಗೌಡರ್‌, ವಾಸುದೇವ ರಾವ್‌ ಸಮಿತಿ ವರದಿಯಲ್ಲಿ ಕಾಪುವನ್ನು ತಾಲೂಕು ಮಾಡುವ ಯಾವುದೇ ಶಿಫಾರಸಾಗಲಿ, ಪ್ರಸ್ತಾವ ಆಗಲಿ ಇರಲಿಲ್ಲ. ಆದರೆ ನಾನು ಜನರಿಗಾಗಿ ಕಾಪು ತಾಲೂಕು ಆಗಲೇಬೇಕು ಎಂದು ಹೇಳಿದೆ. ಆಗ ಕೆಲವರು ಅಪಹಾಸ್ಯ ಮಾಡಿದರು. ಶಾಸಕರು ನಾಟಕ ಮಾಡುತ್ತಿದ್ದಾರೆ, ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದೆಲ್ಲ ಅಪಪ್ರಚಾರ ಮಾಡಿದರು. ಆದರೆ ನಾನು ಎದೆ ಗುಂದದೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಖುದ್ದಾಗಿ ತೆರಳಿ ವಿಷಯ ತಿಳಿಸಿದೆ. ಕಂದಾಯ ಸಚಿವರಿಗೂ ಮನವರಿಕೆ ಮಾಡಿದೆ. ತಾಲೂಕು ಘೋಷಣೆ ಆಗುವಲ್ಲಿ ಯಶಸ್ಸು ಸಿಕ್ಕಿತು ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಟೂರಿಸಂ- ವಿಶೇಷ ಒತ್ತು
ಟೂರಿಸಂಗೆ ವಿಶೇಷ ಒತ್ತು ಕೊಡಲಾಗುತ್ತಿದೆ. ಪಡುಬಿದ್ರಿ, ಕಾಪು ಬೀಚ್‌ ಅಭಿವೃದ್ಧಿ ಪಡಿಸಲಾಗಿದೆ. ಶಿರ್ವದಿಂದ ಮಲ್ಪೆಯವರೆಗೆ ಟೂರಿಸಂ ಕಾರಿಡಾರ್‌ ಮಾಡಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದರು.

ವಸತಿ ನಿವೇಶನ-ರಾಜ್ಯಕ್ಕೆ ಪ್ರಥಮ
ವಸತಿ ನಿವೇಶನದಲ್ಲಿಯೂ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ಹಕ್ಕುಪತ್ರ ವಿತರಣೆಯಲ್ಲಿ ಕುಮ್ಕಿ, ಗೋಚರಾವು, ಪರಂಬೋಕು, ಡೀಮ್ಡ್ ಫಾರೆಸ್ಟ್‌ ಭೂಮಿಗಳ ಅಡೆತಡೆಗಳು ಇದ್ದವು. ಸಮಸ್ಯೆ ನಿವಾರಿಸಿಕೊಂಡು ಆ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೂ ಹಕ್ಕುಪತ್ರ ನೀಡಲಾಗುವುದು ಎಂದರು.

ಕಸ ವಿಲೇವಾರಿ
10 ವರ್ಷದಿಂದ ಕಸ ವಿಲೇವಾರಿ ಸಮಸ್ಯೆ ಇತ್ತು. ಕೊಳಚೆ ನೀರು ರಸ್ತೆ, ಗದ್ದೆಗಳಿಗೆ ಹೋಗುತ್ತಿತ್ತು. ಈಗ ವ್ಯವಸ್ಥಿತ ಒಳಚರಂಡಿ, ಕಸ ವಿಲೇವಾರಿಗೆ ಹಲವಾರು ಕಾರ್ಯಕ್ರಮಗಳು ಆಗುತ್ತಲಿವೆ. ಹಾಗಾಗಿ ಸ್ವಚ್ಚತೆಯಲ್ಲಿ ಕಾಪು ದ್ವಿತೀಯ ಸ್ಥಾನದಲ್ಲಿದೆ. ಎಲ್ಲೂರಿನಲ್ಲಿ 10 ಎಕರೆ ಜಾಗದಲ್ಲಿ ಕಸ ವಿಲೇವಾರಿಯ ಅತಿ ದೊಡ್ಡ ಘಟಕಕ್ಕೆ ಮಂಜೂರಾತಿ ಆಗಿದೆ. 5.50 ಕೋ.ರೂ. ಅನುದಾನ ಸಿಕ್ಕಿದೆ. ಗ್ರಾ.ಪಂ. ತಡೆ ತೆರವಾದ ಬಳಿಕ ಕಾಮಗಾರಿ ನಡೆಯಲಿದೆ ಎಂದರು.

ಶಾಶ್ವತ ಸಮುದ್ರ ತಡೆಗೋಡೆ
ಸಮುದ್ರ ತೀರದಲ್ಲಿ ಕಡಲ್ಕೊರೆತದಿಂದ ರಕ್ಷಿಸಲು ಶಾಶ್ವತ ತಡೆಗೋಡೆಗೆ ಪಡುಕರೆಯಲ್ಲಿ ಎಡಿಬಿ ಮೂಲಕ 88 ಕೋ.ರೂ. ಅನುದಾನ ಲಭಿಸಿ ಕಾಮಗಾರಿ ಪ್ರಗತಿಯಲ್ಲಿದೆ. ಎರ್ಮಾಳು ಭಾಗದಲ್ಲಿ 99 ಕೋ.ರೂ. ಅನುದಾನ ಲಭಿಸಿದ್ದು, ಟೆಂಡರ್‌ ಹಂತದಲ್ಲಿದೆ ಎಂದು ಹೇಳಿದರು.

ಮುಂದಿರುವ ಯೋಜನೆಗಳು
ಶಿರ್ವ, ಪಡುಬಿದ್ರಿ ಮತ್ತು ಹಿರಿಯಡಕಗಳಲ್ಲಿ ನಾಡಕಚೇರಿಗೆ ಪ್ರಸ್ತಾವನೆ, ಪಡುಬಿದ್ರಿ ಮತ್ತು ಹಿರಿಯಡಕ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಪ್ರಸ್ತಾವನೆ, 400 ಕೋ.ರೂ. ವೆಚ್ಚದಲ್ಲಿ ಬೆಳಪುವಿನಲ್ಲಿ ವಿಶ್ವದರ್ಜೆಯ ವಿಜ್ಞಾನ ಕೇಂದ್ರ, ತಾಂತ್ರಿಕ ಶಿಕ್ಷಣಕ್ಕಾಗಿ ಎಲ್ಲೂರು, ಪ್ರಗತಿನಗರ ಮತ್ತು ಪೆರ್ಡೂರಿನಲ್ಲಿ ಐಟಿಐ ಕಾಲೇಜು, ಮಲ್ಲಾರಿಗೆ ಮೌಲಾನಾ ಆಜಾದ್‌ ವಸತಿ ಶಾಲೆ ಮಂಜೂರಾತಿ, ಕಾಪುವಿನಲ್ಲಿ 500 ಮನೆಗಳನ್ನು ಫ್ಲ್ಯಾಟ್ ಮಾದರಿಯಲ್ಲಿ ನಿರ್ಮಿಸಿ ಹಂಚಿಕೆ ಯೋಜನೆ, ಭವಿಷ್ಯದಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಸ್ತಾವ ಸರಕಾರದ ಮುಂದಿಡಲಾಗಿದೆ. ಎಲ್ಲ ಅಭಿವೃದ್ಧಿ ಕಾರ್ಯ ಗಳನ್ನೂ ಫಾಲೋ ಅಪ್‌ ಮಾಡಲಾಗುತ್ತಿದೆ ಎನ್ನುತ್ತಾರೆ ಶಾಸಕರು.

ಕುಡಿಯುವ ನೀರು:160 ಕೋ.ರೂ. ಯೋಜನೆ
ಬೋರ್‌ವೆಲ್‌, ಬಾವಿ, ಕೆರೆಗಳನ್ನು ಆಶ್ರಯಿಸಿ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿದ್ದವು. ಈಗ ನದಿ ನೀರನ್ನು ಬಳಸಿಕೊಂಡು ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 160 ಕೋ.ರೂ. ಕ್ರಿಯಾಯೋಜನೆ ಮಾಡಲಾಗಿದೆ. 61 ಕೋ.ರೂ. ಅನುದಾನದಲ್ಲಿ 10 ಗ್ರಾಮಗಳಿಗೆ ಶಾಂಭವಿ ನದಿ ನೀರು ಬಳಕೆ ಯೋಜನೆ, ಮಣಿಪುರದಲ್ಲಿ 57 ಕೋ.ರೂ. ಮತ್ತು 26 ಕೋ.ರೂ. ಯೋಜನೆ, ಪೆರ್ಡೂರು ಸುತ್ತಮುತ್ತಲ ಭಾಗಕ್ಕೆ 16 ಕೋ.ರೂ. ಬಹುಗ್ರಾಮ ಕ್ರಿಯಾಯೋಜನೆ ಆಗಿದೆ ಎಂದು ಸೊರಕೆ ಹೇಳಿದರು.

ರಸ್ತೆ, ಸೇತುವೆಗಳ ಅಭಿವೃದ್ಧಿಯಾದರೆ ಮಾತ್ರ ಅಭಿವೃದ್ಧಿಯಲ್ಲ. ಎಲ್ಲರಿಗೂ ಶಿಕ್ಷಣ, ಆರೋಗ್ಯ, ವಸತಿ ಮೊದಲಾದ ಸಾಮಾಜಿಕ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಯಾದರೆ ಮಾತ್ರ ನೈಜ ಅಭಿವೃದ್ಧಿ. ಈ ನಿಟ್ಟಿನಲ್ಲಿ ಪರಿಸರಕ್ಕೆ ಒತ್ತು ಕೊಟ್ಟು ಆಯಾ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿ ಆಗಬೇಕಾದ ಅಭಿವೃದ್ಧಿಯ ನೀಲನಕಾಶೆ ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ. ಮುಂದಿನ ಗುರಿಯೂ ಅದೇ ಆಗಿದೆ. ಗ್ರಾಮ ಮಟ್ಟದಿಂದ ಕಾರ್ಯಯೋಜನೆ ಮಾಡಲಾಗುತ್ತಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗುವುದು.
– ವಿನಯ ಕುಮಾರ್‌ ಸೊರಕೆ, ಶಾಸಕ

ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.