ಕೋಡಿ ಸೀವಾಕ್‌ ಸ್ವತ್ಛತೆಗೆ ಕೈ ಜೋಡಿಸಿದ ಪೊಲೀಸರು

Team Udayavani, Nov 26, 2019, 5:43 AM IST

kodi-sea-walk

ಕುಂದಾಪುರ: ಕಳೆದ 40 ವಾರ ಗಳಿಂದ ಸಮಾನ ಮನಸ್ಕ 70-80 ಮಂದಿ ತಂಡದಿಂದ ಕಾರ್ಯಾಚರಿಸಲ್ಪಡುತ್ತಿರುವ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಇವರ ಸ್ವತ್ಛತಾ ಅಭಿಯಾನಕ್ಕೆ ಈ ಬಾರಿ ಪೊಲೀಸರೂ ಕೈ ಜೋಡಿಸಿದ್ದಾರೆ. ಲಾಠಿ ಹಿಡಿದು ಕಳ್ಳರ ಸದೆಬಡಿಯುವ ಮೂಲಕ ಸಮಾಜದ ರಕ್ಷಣೆ ಮಾಡುವ ಪೊಲೀಸರು ಇಲ್ಲಿ ಕೈಗವಸು ಧರಿಸಿ ತ್ಯಾಜ್ಯ ಹೆಕ್ಕಿ ಪರಿಸರ ರಕ್ಷಣೆಗೂ ಮುಂದಾಗಿದ್ದಾರೆ. ಎಎಸ್‌ಪಿ ಹರಿರಾಮ್‌ ಶಂಕರ್‌ ಅವರ ನೇತೃತ್ವದಲ್ಲಿ ಪೊಲೀಸರು ಸ್ವತ್ಛತೆ ನಡೆಸಿದರೆ ಎಎಸ್‌ಪಿ ಅವರ ಪತ್ನಿಯೂ ಸೇವಾಕಾರ್ಯದಲ್ಲಿ ಭಾಗಿಯಾದರು.

ಪ್ರತಿ ರವಿವಾರದಂದು ವಿವಿಧೆಡೆ ಸ್ವತ್ಛತಾ ಕಾರ್ಯ ಮಾಡುತ್ತ ಬಂದಿರುವ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸದಸ್ಯರ ಜತೆಗೆ ಕುಂದಾಪುರ ಎಎಸ್ಪಿ ಕಚೇರಿ, ವೃತ್ತ ನಿರೀಕ್ಷಕರ ಕಚೇರಿ, ಕುಂದಾಪುರ ನಗರ ಠಾಣೆ, ಸಂಚಾರಿ ಠಾಣೆ, ಕುಂದಾಪುರ ಗ್ರಾಮಾಂತರ, ಅಮಾಸೆಬೈಲು, ಕೊಲ್ಲೂರು ಹಾಗೂ ಗಂಗೊಳ್ಳಿ ಪೊಲೀಸ್‌ ಠಾಣೆಯ ಅಧಿ ಕಾರಿಗಳು, 30ಕ್ಕೂ ಅಧಿ ಕ ಸಿಬಂದಿ ಜತೆಗೂಡಿದ್ದು 100ಕ್ಕೂ ಅ ಧಿಕ ಜನರಿಂದ ಬೀಚ್‌ ಬಳಿ ಸ್ವತ್ಛತಾ ಕೆಲಸ ನಡೆಯಿತು.

ಸ್ವತ್ಛತಾ ಕಾರ್ಯ ನಡೆಸಿದ ಸ್ವಯಂ ಸೇವಕರಿಗೆ ಸಿಕ್ಕಿದ್ದು ಒಂದೂವರೆ ಲೋಡಿಗೂ ಅಧಿ ಕ ತ್ಯಾಜ್ಯ. ಅದರಲ್ಲೂ ಸಿಂಹಪಾಲು ಬೀರ್‌ ಬಾಟಲಿ, ಚಪ್ಪಲಿ, ಪ್ಲಾಸ್ಟಿಕ್‌ ತ್ಯಾಜ್ಯ. ಅದನ್ನು ಪುರಸಭೆಗೆ ಹಸ್ತಾಂತರಿಸಲಾಯಿತು.

ವಕೀಲರು, ವೈದ್ಯರು, ವಿವಿಧ ಕಂಪೆನಿಗಳ ಉದ್ಯೋಗಿಗಳು ಪ್ರತಿ ವಾರ ಭಾಗವಹಿಸುವ ಈ ಸ್ವತ್ಛತಾ ಕಾರ್ಯದಲ್ಲಿ ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್‌, ಎಎಸ್ಪಿ ಅವರ ಪತ್ನಿ ಅನಂತಾ, ಸಿಪಿಐ ಮಂಜಪ್ಪ ಡಿ.ಆರ್‌., ನೇತೃತ್ವದಲ್ಲಿ ವಿವಿಧ ಪೊಲೀಸ್‌ ಠಾಣೆ ಸಿಬಂದಿ, ಕೊಲ್ಲೂರು ಠಾಣೆ ಪಿಎಸ್‌ಐ ಶಿವಕುಮಾರ್‌, ಎಎಸ್‌ಐ ಗೋವಿಂದ ರಾಜು, ರೆಡ್‌ ಕ್ರಾಸ್‌ ಸಂಸ್ಥೆಯ ವೈ. ಶಿವರಾಮ ಶೆಟ್ಟಿ, ಐಎಂಎ ಮಂಗಳೂರಿನ ಕಾರ್ಯದರ್ಶಿ ಡಾ| ರಶ್ಮೀ ಕುಂದಾಪುರ, ಗೋಪಾಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್‌, ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್‌, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸಂಚಾಲಕ ಭರತ್‌ ಬಂಗೇರ, ಸಮಾಜ ಸೇವಕ ಗಣೇಶ್‌ ಪುತ್ರನ್‌, ಕೋಟ ಗೀತಾನಂದ ಫೌಂಡೇಶನ್‌ನ ರವಿಕಿರಣ್‌, ಎಫ್‌ಎಸ್‌ಎಲ್‌ ಸಂಸ್ಥೆಯ ದಿನೇಶ ಸಾರಂಗ, ಅಡಿಟರ್‌ ಅರುಣ್‌ ಕುಮಾರ್‌, ಬ್ಯಾಂಕ್‌ ಮೆನೇಜರ್‌ ಶಶಿಧರ್‌ ಎಚ್‌.ಎಸ್‌., ಎಂಜಿನಿಯರ್‌ ಕೌಶಿಕ್‌ ಯಡಿಯಾಳ, ನಿಸರ್ಗ ಗೆಳೆಯರು ಸಿದ್ದಾಪುರದ ಪದಾಧಿ ಕಾರಿಗಳು, ರೀಪ್‌ ವಾಚ್‌ ಸಂಸ್ಥೆಯವರು, ಅಮಲ ಭಾರತ ಅಭಿಯಾನದ ಸದಸ್ಯರು ಕುಂದಾಪುರ ಕೋಡಿಯ ಸೀ ವಾಕ್‌ ಬಳಿಯ ಸಮುದ್ರ ಕಿನಾರೆ ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಮಾದರಿಯಾದರು.

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ
ಸದಾ ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿರೋ ಪೊಲೀಸರು ವಾರಕ್ಕೊಮ್ಮೆ ಇಂತಹ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಕೆಲಸದ ಮೇಲೆ ಇನ್ನಷ್ಟು ಏಕಾಗ್ರತೆ ಹೆಚ್ಚಲಿದೆ. ಮಾತ್ರವಲ್ಲದೆ ಸಾರ್ವಜನಿಕರೊಂದಿಗೆ ಕೆಲಸ ಮಾಡಿದಾಗ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಇನ್ನಷ್ಟು ಬಲ ಬರುತ್ತದೆ.
– ಹರಿರಾಮ್‌ ಶಂಕರ್‌ , ಎಎಸ್ಪಿ , ಕುಂದಾಪುರ

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.