ಶ್ರೀಕೃಷ್ಣ ಮಠದಲ್ಲಿ ವೈಭವದ ಮಕರಸಂಕ್ರಾಂತಿ ಉತ್ಸವ

Team Udayavani, Jan 15, 2020, 1:24 AM IST

ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಂಗಳವಾರ ಮಕರ ಸಂಕ್ರಾಂತಿಯಂದು ಬ್ರಹ್ಮರಥ ಸಹಿತ ಮೂರು ತೇರುಗಳ ಉತ್ಸವ ವೈಭವದಿಂದ ಜರಗಿತು.

ಕೃಷ್ಣಾಪುರ, ಅದಮಾರು ಹಿರಿಯ, ಪೇಜಾವರ, ಕಾಣಿಯೂರು, ಸೋದೆ, ಪಲಿಮಾರು ಕಿರಿಯ ಸ್ವಾಮೀಜಿಯವರು ಪಾಲ್ಗೊಂಡಿದ್ದರು. ಮೂರು ರಥಗಳಲ್ಲಿ ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ಉತ್ಸವ ಮೂರ್ತಿಗಳನ್ನು ಪೂಜಿಸಿ ಉತ್ಸವ ನಡೆಸಲಾಯಿತು.

ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆದ ಬಳಿಕ ರಥೋತ್ಸವ ನಡೆಯಿತು. ವಿದ್ಯುದ್ದೀಪಗಳು ಮತ್ತು ಆಕರ್ಷಕ ಸುಡುಮದ್ದುಗಳಿಂದ ಆವೃತಗೊಂಡ ರಥಬೀದಿಯಲ್ಲಿ ಮೂರು ರಥಗಳ ಉತ್ಸವ ಸಂಪನ್ನಗೊಂಡಿತು.

ಪಲಿಮಾರು ಮಠದ ಪರ್ಯಾಯದಲ್ಲಿ ವರ್ಷದಲ್ಲಿ ರಾಮನವಮಿ ಮತ್ತು ಮಕರಸಂಕ್ರಾಂತಿ ಸಂದರ್ಭ ಸಪೊ¤àತ್ಸವ ಆಚರಿಸಲಾಗಿದೆ. ಹೀಗಾಗಿ ವಿವಿಧ ಭಾಗಗಳ 23 ಸೇವಾಕರ್ತರು ಸಪೊ¤àತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಪರ್ಯಾಯದ ಕೊನೆಯ ಸಪೊ¤àತ್ಸವ ಮತ್ತು ಮಕರಸಂಕ್ರಾಂತಿ ಉತ್ಸವವಾಗಿರುವುದರಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಆಚಾರ್ಯ ಮಧ್ವರು ಜನಿಸುವ ಮೊದಲೇ ಅನಂತೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವ ನಡೆಯುತ್ತಿತ್ತು ಎಂಬ ಕುರಿತು ದಾಖಲೆಗಳಿವೆ.
ಬುಧವಾರ ಬೆಳಗ್ಗೆ ಚೂರ್ಣೋತ್ಸವ, ಅವಭೃಥ ಸ್ನಾನ ನಡೆಯಲಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ