ಮಣಿಪಾಲ: ವಿಪರೀತ ಮದ್ಯಸೇವನೆಯಿಂದ ವ್ಯಕ್ತಿ ಸಾವು
Team Udayavani, Apr 14, 2023, 6:45 AM IST
ಮಣಿಪಾಲ: ವಿಪರೀತ ಮದ್ಯಪಾನ ಮಾಡುತ್ತಿದ್ದ ಪರ್ಕಳದ ವಿನಾಯಕ ಪೈ(35) ಸಾವನ್ನಪ್ಪಿದ್ದಾರೆ.
6 ತಿಂಗಳಿನಿಂದ ಯಾವುದೇ ಕೆಲಸವಿಲ್ಲದ ಕಾರಣ ವಿಪರೀತ ಮದ್ಯಸೇವನೆ ಮಾಡುತ್ತಿದ್ದರು. 2 ವರ್ಷಗಳ ಹಿಂದೆ ಲಿವರ್ ಸಮಸ್ಯೆ ಕಾಣಿಸಿದ್ದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಎ. 13ರಂದು ವಿನಾಯಕ ಅವರು ಮಣಿಪಾಲದ ಲಾಡ್ಜ್ ಒಂದರಲ್ಲಿ ಅಸ್ವಸ್ಥಗೊಂಡು ಬಿದ್ದು ಸಾವನ್ನಪ್ಪಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.