ಅವಶೇಷ ಪತ್ತೆ ಬೆನ್ನಿಗೆ ಆರೋಪ-ಪ್ರತ್ಯಾರೋಪ

Team Udayavani, May 4, 2019, 6:00 AM IST

MISSING-BOAT

ನೌಕಾ ಪಡೆಯಿಂದ ಮೀನುಗಾರರ ಕಗ್ಗೊಲೆ: ಪ್ರಮೋದ್‌ ಆರೋಪ
ಕಾಪು: ಸುವರ್ಣ ತ್ರಿಭುಜ ದಲ್ಲಿದ್ದ 7 ಮಂದಿ ಮೀನುಗಾರರನ್ನು ನೌಕಾ ಪಡೆ ಕಗ್ಗೊಲೆ ಮಾಡಿದೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಗಂಭೀರ ಆರೋಪ ಮಾಡಿದ್ದಾರೆ.

ಮೂಳೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಮೀನುಗಾರರ ಜೀವ ಗಳ ಜತೆಗೆ ಚುನಾವಣೆ ಮುಗಿಯುವ ವರೆಗೆ ನಾಟಕ ಮಾಡಿದ ಬಿಜೆಪಿ, ಈಗ ಮೀನುಗಾರರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ. ಶಾಸಕರು ಈಗ ತಾವೇ ದೋಣಿ ಪತ್ತೆ ಹಚ್ಚಿದ್ದು ಎಂದು ಘೋಷಿಸುವ ಮೂಲಕ ಜನರನ್ನು ನಂಬಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಂದೆಯೇ ಹೇಳಿದ್ದೆ
ನಾನು ಈ ಹಿಂದೆಯೇ ಹೇಳಿದಂತೆ ನೌಕಾಪಡೆ ಹಡಗು ಢಿಕ್ಕಿ ಹೊಡೆದಿದ್ದರಿಂದಲೇ ಮೀನುಗಾರರು ಮೃತಪಟ್ಟಿರಬೇಕು. ಆದರೆ ಕೆಂದ್ರ ಸರಕಾರ ಅದನ್ನು ಮುಚ್ಚಿಟ್ಟಿರುವುದು ಖಂಡನೀಯ ಎಂದಿದ್ದಾರೆ.

ತನಿಖೆಗೆ ಆಗ್ರಹ
ಮಲ್ಪೆ/ಕೊಲ್ಲೂರು: ಸುವರ್ಣ ತ್ರಿಭುಜ ಬೋಟ್‌ ಮುಳುಗಡೆಗೆ ಕಾರಣವೇನು, 7 ಮಂದಿ ಮೀನುಗಾರರು ಏನಾದರು ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಆಗ್ರಹಿಸಿದ್ದಾರೆ. ತಂತ್ರಜ್ಞಾನ ಮುಂದುವರಿದ ಈ ಕಾಲಘಟ್ಟದಲ್ಲಿ ಮೀನುಗಾರ ರನ್ನು ರಕ್ಷಿಸುವಲ್ಲಿ ಸರ ಕಾರ ವಿಫಲ ಆಗಿರುವುದು ಪ್ರಶ್ನಾರ್ಹ ಎಂದು ಕುಂದಾ ಪುರ ತಾ| ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಕೆ.ಕೆ. ಕಾಂಚನ್‌ ಹೇಳಿದ್ದಾರೆ.

ಪ್ರಮೋದರಲ್ಲಿ ಏನು ಸಾಕ್ಷಿ ಇದೆ: ಭಟ್‌ ಪ್ರಶ್ನೆ
ಮಲ್ಪೆ: ಐಎನ್‌ಎಸ್‌ ಕೊಚ್ಚಿ ನೌಕೆಯೇ ಸುವರ್ಣ ತ್ರಿಭುಜ ದೋಣಿಗೆ ಢಿಕ್ಕಿ ಹೊಡೆದು ಅಪಘಾತವಾಗಿದೆ ಎನ್ನುವುದಕ್ಕೆ ಪ್ರಮೋದ್‌ ಮಧ್ವರಾಜ್‌ ಅವರಲ್ಲಿ ಏನು ಸಾಕ್ಷಿ ಇದೆ ಎಂದು ಶಾಸಕ ರಘುಪತಿ ಭಟ್‌ ಪ್ರಶ್ನಿಸಿದ್ದಾರೆ.

ಶುಕ್ರವಾರ ಪ್ರಮೋದ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಐದು ದಿನ ನೌಕಾದಳದ ಜತೆಯಲ್ಲಿ ದೋಣಿ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೆ ಪ್ರಮೋದ್‌ ಈ ಪ್ರಕರಣದಲ್ಲಿ ಮೀನುಗಾರರ ಪರವಾಗಿ ಏನು ಪ್ರಯತ್ನ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ನಾಟಕ ಮಾಡುವುದಿದ್ದರೆ ಚುನಾ ವಣೆ ಸಂದರ್ಭದಲ್ಲಿಯೇ ಲಾಭ ಪಡೆಯುತ್ತಿದ್ದೆವು. ಚುನಾವಣೆ ಘೋಷಣೆಯಾದ ಬಳಿಕವೇ ಮೀನುಗಾರರ ಕುಟುಂಬಿಕರ ಜತೆಗೆ ದಿಲ್ಲಿಯಲ್ಲಿ ರಕ್ಷಣಾ ಸಚಿವೆಯೊಂದಿಗೆ ನೌಕಾಪಡೆ ಎರಡನೇ ಶ್ರೇಯಾಂಕಿತ ಅಧಿಕಾರಿ ಜತೆ ಸಭೆ ನಡೆಸಿದ್ದೇವೆ. ಆಗಲೇ ಇದರ ಬಗ್ಗೆ ತಿಳಿಸಿ ರಾಜಕೀಯ ಲಾಭ ಪಡೆಯಬಹುದಿತ್ತು ಎಂದು ಶಾಸಕ ಭಟ್‌ ಟೀಕಿಸಿದರು.

ಭಾರತೀಯ ನೌಕಾದಳದ ಬಗ್ಗೆ ಹೆಮ್ಮೆ ಇದೆ. ಅವರು ಸಮರ್ಪಣ ಭಾವದಿಂದ ಕರ್ತವ್ಯ ನಿರ್ವಹಿಸು ವುದನ್ನು ಹತ್ತಿರದಿಂದ ನೋಡಿದ್ದೇವೆ. ಆದರೆ ಮಾಜಿ ಸಚಿವರೊಬ್ಬರು ಭಾರತೀಯ ಸೈನ್ಯದ ಬಗ್ಗೆ ಆರೋಪ ಮಾಡಿದ್ದಾರೆ. ನೌಕಾದಳದವರು ಕೊಲೆ ಮಾಡಿದ್ದಾರೆ ಎನ್ನುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಸಿಎಂಗೆ ಕರಾವಳಿಯವರ ಬಗ್ಗೆ ತೀವ್ರ ನಿರ್ಲಕ್ಷ್ಯ. ಸುಖಕ್ಕೆ ಕರಾವಳಿ ಬೇಕು, ಆದರೆ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಶಾಸಕ ಭಟ್‌ ಇದೇವೇಳೆ ಆರೋಪಿಸಿದರು.

ಟಾಪ್ ನ್ಯೂಸ್

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಅಗತ್ಯ: ನ್ಯಾ| ವಿಶ್ವನಾಥ ಶೆಟ್ಟಿ

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಅಗತ್ಯ: ನ್ಯಾ| ವಿಶ್ವನಾಥ ಶೆಟ್ಟಿ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾಡಿ: ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಸಲಹೆ

ಕೇಂದ್ರದಿಂದ ಫೆಬ್ರವರಿ ವರೆಗಿನ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ

ಕೇಂದ್ರದಿಂದ ಫೆಬ್ರವರಿ ವರೆಗಿನ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಕೈ ಕಾಲಿಗೆ ಕೋಳ ಬಿಗಿದು ಈಜಿ ದಾಖಲೆ; 5.34 ಗಂಟೆಗಳಲ್ಲಿ 3.55 ಕಿ.ಮೀ.ಕಡಲಲ್ಲಿ ಈಜಿದ ಗಂಗಾಧರ್‌

ಕೈ ಕಾಲಿಗೆ ಕೋಳ ಬಿಗಿದು ಈಜಿ ದಾಖಲೆ; 3.55 ಕಿ.ಮೀ.ಕಡಲಲ್ಲಿಈಜಿದ ಗಂಗಾಧರ್‌

ಸಾಂಸ್ಕೃತಿಕತೆ ಧಾರ್ಮಿಕತೆಗೆ ಪೂರಕ: ಕೃಷ್ಣಾಪುರಶ್ರೀ

ಸಾಂಸ್ಕೃತಿಕತೆ ಧಾರ್ಮಿಕತೆಗೆ ಪೂರಕ: ಕೃಷ್ಣಾಪುರಶ್ರೀ

1-sasass

ಉಡುಪಿ: ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ :ವೇಳಾಪಟ್ಟಿ ಪ್ರಕಟ

ಉಡುಪಿ -ಮಣಿಪಾಲ ರಸ್ತೆಗಿಲ್ಲ ಬೆಳಕಿನ ಭಾಗ್ಯ

ಉಡುಪಿ -ಮಣಿಪಾಲ ರಸ್ತೆಗಿಲ್ಲ ಬೆಳಕಿನ ಭಾಗ್ಯ

MUST WATCH

udayavani youtube

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

ಹೊಸ ಸೇರ್ಪಡೆ

ಕೇವಲ ಒಂದೂವರೆ ರೂಪಾಯಿಗೆ ಒಂದು ಇಡ್ಲಿ!

ಕೇವಲ ಒಂದೂವರೆ ರೂಪಾಯಿಗೆ ಒಂದು ಇಡ್ಲಿ!

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

 ಮಾ. 10ರ ಬಳಿಕ ಸಂಪುಟ ವಿಸ್ತರಣೆ ವಿಚಾರಣೆ ಪ್ರಕ್ರಿಯೆ?

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

ಬಿಜೆಪಿ-ಶಿವಸೇನೆ ನಡುವೆ ಹಿಂದುತ್ವದ ಜಗಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.