ಉಡುಪಿ ಜಿಲ್ಲೆಯಲ್ಲಿ ರಜೆ ಸುಳ್ಳು ಸುದ್ದಿ ವೈರಲ್ ; ಹೆಬ್ರಿಯಲ್ಲಿ ಮಾತ್ರ ರಜೆ
Team Udayavani, Jul 4, 2022, 10:12 PM IST
ಉಡುಪಿ : ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಮಂಗಳವಾರ (ಜುಲೈ 5) ರಂದು ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಲಾಗಿದೆ ಎಂಬ ನಕಲಿ ಸುತ್ತೋಲೆಯೊಂದು ವೈರಲ್ ಆಗುತ್ತಿದೆ.
ನಾಳೆ ಜಿಲ್ಲೆಯಲ್ಲಿ ಯಾವುದೇ ರಜೆಯನ್ನು ಜಿಲ್ಲಾಡಳಿತ ಘೋಷಿಸಿಲ್ಲ. ಕೆಲ ಕಿಡಿಗೇಡಿಗಳು ಸಾಮಾನ್ಯ ಜನರಲ್ಲಿ ಗೊಂದಲ ಮೂಡಿಸಲು ಈ ರೀತಿ ತಿರುಚಿದ ಸುತ್ತೋಲೆಯನ್ನು ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.
ಹೆಬ್ರಿ ತಾಲೂಕಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಲಾಗಿದೆ.