ಶಿರ್ಲಾಲು : 13ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನ ಪತ್ತೆ


Team Udayavani, Dec 5, 2018, 1:30 AM IST

shilashashana-4-12.jpg

ಕಾಪು: ಉಡುಪಿ ಜಿಲ್ಲೆ ಮತ್ತು ಕಾರ್ಕಳ ತಾಲೂಕಿನ ಶಿರ್ಲಾಲು – ಹಾಡಿಯಂಗಡಿ ವ್ಯಾಪ್ತಿಯ ಬ್ರಂದಬೆಟ್ಟು ಹೊಸಮನೆ ರತ್ನವರ್ಮ ಜೈನ್‌ ಅವರ ತೋಟದಲ್ಲಿ ಬ್ರಹ್ಮಾವರ ಕ್ರಾಸ್‌ಲ್ಯಾಂಡ್‌ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಹಾಗೂ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಮುಖ್ಯ ಸಂಶೋಧಕ ಸುಭಾಸ್‌ ನಾಯಕ್‌ ಬಂಟಕಲ್ಲು ಅವರು 13ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನವನ್ನು ಪತ್ತೆ ಮಾಡಿದ್ದಾರೆ.

ಶಿಲಾ ಶಾಸನವು 82 ಸೆಂ.ಮೀ ಅಗಲ, 66 ಸೆಂ.ಮೀ ಎತ್ತರ ಹಾಗೂ 15 ಸೆಂ.ಮೀ ದಪ್ಪವನ್ನು ಹೊಂದಿದ್ದು, ಗ್ರಾನೈಟ್‌ ಶಿಲೆಯಿಂದ ಮಾಡಲ್ಪಟ್ಟಿದೆ. 12 ಸಾಲುಗಳನ್ನು ಹೊಂದಿರುವ ಈ ಶಿಲಾ ಶಾಸನದಲ್ಲಿ ಅಕ್ಷರಗಳು ಅಲ್ಲಲ್ಲಿ ತೃಟಿತವಾಗಿರುವುದು ಕಂಡು ಬರುತ್ತದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಿಲಾ ಶಾಸನದ ಮೇಲ್ಭಾಗದಲ್ಲಿ ಸೂರ್ಯ – ಚಂದ್ರ ಹಾಗೂ ಬಲ ಭಾಗದಿಂದ ಖಡ್ಗ, ದೀಪ, ಶಿವಲಿಂಗ ಮತ್ತು ನಂದಿಯನ್ನು ಕೆತ್ತನೆ ಮಾಡಲಾಗಿದೆ. ನಂತರದಲ್ಲಿ ಶಾಸನದ ಪಾಠವನ್ನು ಕಾಣಬಹುದು. ಸ್ವಸ್ತಿ ಶ್ರೀ ಎಂಬ ವಾಕ್ಯದೊಂದಿಗೆ ಪ್ರಾರಂಭವಾಗುವ ಈ ಶಾಸನದಲ್ಲಿ ಶಕವರುಷ 1211, ವಿರೋಧಿ ಸಂವತ್ಸರದ ಉಲ್ಲೇಖವನ್ನು ಕಾಣಬಹುದು. (ಕ್ರಿಸ್ತ ಶಕೆಗೆ ಪರಿವರ್ತಿಸಿದಾಗ 1289ಕ್ಕೆ ಸರಿ ಹೊಂದುತ್ತದೆ) ಹಾಗೆಯೇ ಅರಿರಾಯ ಗಂಡರ ದಾವಣಿ ಕಾಳಲದೇವಿ ಮತ್ತು ಪಾಂಡ್ಯ ಅರಸ ಎಂಬ ಉಲ್ಲೇಖವು ಕಂಡುಬರುತ್ತದೆ.

ಈ ಶಿಲಾ ಶಾಸನವು ದಾನ ಶಾಸನವಾಗಿದ್ದು, ಭೂಮಿಯನ್ನು ದಾನ ನೀಡಿದ್ದರ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಶಾಸನದ ಅಂತ್ಯದಲ್ಲಿ ಶಾಪಾಶಯ ವಾಕ್ಯವನ್ನು ಹೇಳಲಾಗಿದೆ. ಈ ನಿಟ್ಟಿನಲ್ಲಿ ಈ ಶಿಲಾ ಶಾಸನವು ಕಳಸ – ಕಾರ್ಕಳ ರಾಜ್ಯವನ್ನಾಳಿದ ರಾಣಿ ಕಾಳಲದೇವಿಯ ಕಾಲಕ್ಕೆ ಸೇರಿದ್ದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿರುತ್ತಾರೆ. ಕ್ಷೇತ್ರ ಕಾರ್ಯಕ್ಕೆ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎಸ್‌.ಎ. ಕೃಷ್ಣಯ್ಯ, ಸ್ಥಳೀಯ ನಿವಾಸಿ ಹರೀಶ್‌ ಆಚಾರ್ಯ ಪಡಿಬೆಟ್ಟು, ಶಿರ್ಲಾಲು ಗ್ರಾ.ಪಂ. ಮಾಜಿ ಸದಸ್ಯ ವಿಠಲ ಆಚಾರ್ಯ ಹಾಗೂ ಎಂ.ಪಿ.ಎಂ.ಸಿ ಕಾರ್ಕಳ ಕಾಲೇಜಿನ ವಿದ್ಯಾರ್ಥಿ ಸಿದ್ಧಾರ್ಥ್ ಜೈನ್‌ ಸಹಕಾರ ನೀಡಿದ್ದಾರೆ.

ಟಾಪ್ ನ್ಯೂಸ್

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

ವ್ಯಾಕ್ಸಿನೇಶನ್‌: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೇಂದ್ರ ಪ್ರಥಮ

ವ್ಯಾಕ್ಸಿನೇಶನ್‌: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೇಂದ್ರ ಪ್ರಥಮ

ಜಿಲ್ಲೆಯಾದ್ಯಂತ 1-5ನೇ ತರಗತಿ ಇಂದಿನಿಂದ ಆರಂಭ

ಜಿಲ್ಲೆಯಾದ್ಯಂತ 1-5ನೇ ತರಗತಿ ಇಂದಿನಿಂದ ಆರಂಭ

ಹೊಸ್ಮಾರು ಜಂಕ್ಷನ್‌ನಲ್ಲೆ ಇದೆ ಸಮಸ್ಯೆ ಹತ್ತಾರು!

ಹೊಸ್ಮಾರು ಜಂಕ್ಷನ್‌ನಲ್ಲೆ ಇದೆ ಸಮಸ್ಯೆ ಹತ್ತಾರು!

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

9power

ನಿರಂತರ ವಿದ್ಯುತ್‌ ನೀಡಲು ಮನವಿ

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.