Fraud Case; ಆನ್ಲೈನ್ ಜಾಬ್: 3.83 ಲಕ್ಷ ರೂ. ವಂಚನೆ
Team Udayavani, Feb 1, 2024, 12:57 AM IST
ಪಡುಬಿದ್ರಿ: ಇಲ್ಲಿನ ಪಡುಹಿತ್ಲು ನಿವಾಸಿ ಬೇಬಿ (39) ಅವರು ಫೇಸ್ಬುಕ್ನಲ್ಲಿನ ಆನ್ಲೈನ್ ಜಾಬ್ ಜಾಹೀರಾತಿನಿಂದಾಗಿ ಮೋಸಕ್ಕೊಳಗಾಗಿದ್ದಾರೆ. ಆರೋಪಿಗಳ ವಿವಿಧ ಖಾತೆಗಳಿಗೆ ಗೂಗಲ್ ಪೇ ಮೂಲಕ ಬೇಬಿ ಅವರ ಪಣಂಬೂರಿನ ಎಸ್ಬಿಐ ಖಾತೆಯಿಂದ 3.83 ಲಕ್ಷ ರೂ. ಹಣ ವರ್ಗಾವಣೆಯಾಗಿದೆ. ಈ ವಂಚನೆ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಬಿ ಅವರ ಗ್ಲೋ ಟಚ್ ಟೆಕ್ನೋಲಜೀಸ್ ಕಂಪೆನಿಯಲ್ಲಿ ತಾಂತ್ರಿಕ ಸಹಾಯಕಳಾಗಿ ವರ್ಕ್ ಫÅಮ್ ಹೋಮ್ ಮಾಡಿಕೊಂಡಿದ್ದರು. ಈ ನಡುವೆ 2023ರ ಅ. 26ರಂದು ಫೇಸ್ಬುಕ್ ನೋಡಿದಾಗ ಆನ್ಲೈನ್ ಜಾಬ್ ಜಾಹೀರಾತನ್ನು ಗಮನಿಸಿ ಓಪನ್ ಮಾಡಿ 7081930287ನೇ ನಂಬರ್ನ ವಾಟ್ಸ್ ಆ್ಯಪ್ ಮೂಲಕ ಚಾಟ್ ಮಾಡಿದಾಗ ಪಾರ್ಟ್ ಟೈಂ ಜಾಬ್ ಇದ್ದು, ಮೊಬೈಲ್ ಮುಖೇನ ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ 2,000 ರೂ. ಹಣ ಗಳಿಸಬಹುದು ಎಂಬುದಾಗಿ ಆಮಿಷ ಒಡ್ಡಲಾಗಿತ್ತು. ಬಳಿಕ ಬೇರೆ ಬೇರೆ ಆರೋಪಿತರ ವಿವಿಧ ಖಾತೆಗಳಿಗೆ ಹಂತ, ಹಂತವಾಗಿ ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ