ಪಡುಬಿದ್ರಿ: ಅಂಗಡಿಯ ಬಳಿ ನಿಲ್ಲಿಸಿದ್ದ ಜೆಸಿಬಿ ಕಳವು
Team Udayavani, Aug 4, 2023, 8:15 PM IST
ಪಡುಬಿದ್ರಿ: ಅಂಗಡಿಯ ಬಳಿ ನಿಲ್ಲಿಸಿದ್ದ ಜೆಸಿಬಿಯನ್ನು ಕಳವುಗೈದ ಬಗ್ಗೆ ಪ್ರಕರಣ ದಾಖಲಾಗಿದೆ.
ಪಾದೆಬೆಟ್ಟು ಗ್ರಾಮದ ಮೊಹಮ್ಮದ್ ರಾಝಿಕ್ ಎನ್ನುವವರು ಪಡುಬಿದ್ರಿ- ಕಾರ್ಕಳ ರಸ್ತೆಯಲ್ಲಿ ಎ.ಕೆ. ಎಂಟರ್ಪ್ರೈಸಸ್ ಹೆಸರಿನ ಹಳೆಯ ದ್ವಿಚಕ್ರ ವಾಹನಗಳ ಖರೀದಿ ಮತ್ತು ಮಾರಾಟ ಮಾಡುವ ವ್ಯವಹಾರ ಮಾಡಿಕೊಂಡಿದ್ದು, ಅಂಗಡಿಯ ಬಳಿ ಅವರ ಅಣ್ಣ ಖರೀದಿಸಿದ ಜೆಸಿಬಿಯನ್ನು ಚಾಲಕ ಆ 2 ರಂದು ಸಂಜೆ 7 ಗಂಟೆಯ ವೇಳೆಗೆ ನಿಲ್ಲಿಸಿ ಹೋಗಿದ್ದು, 10 ಗಂಟೆಯ ವೇಳೆಗೆ ರಾಝಿಕ್ ಅಂಗಡಿಗೆ ಬೀಗ ಹಾಕಿ ಹೋಗಿದ್ದಾರೆ.
ಯಾರೋ ಕಳ್ಳರು ಆ 02 ರಂದು ರಾತ್ರಿ 10 ಗಂಟೆಯಿಂದ ಆ 04 ರ ಬೆಳಗ್ಗೆ 07.30ರ ಮಧ್ಯಾವಧಿಯಲ್ಲಿ ಜೆಸಿಬಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಜೆಸಿಬಿಯ ಅಂದಾಜು ಮೌಲ್ಯ ರೂ 12,00,000 ರೂ. ಆಗಿರುತ್ತದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.