Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು


Team Udayavani, Mar 28, 2024, 7:43 PM IST

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

ಉಡುಪಿ: ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಕರೆಮಾಡಿ ಜೀವಬೆದರಿಕೆ ಹಾಕಿರುವುದು ಹಾಗೂ ಹಲ್ಲೆ ನಡೆಸಿದ ಕಾರಣಕ್ಕೆ ಆರೋಪಿಯ ವಿರುದ್ಧ ಉಡುಪಿ ನಗರ ಠಾಣೆ ಹಾಗೂ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಉಡುಪಿ ನಗರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಮರಿಗೌಡ ಮಾ. 24ರಂದು ರಾತ್ರಿ ಠಾಣಾ ಪ್ರಭಾರ ಕರ್ತವ್ಯದಲ್ಲಿರುವಾಗ ಉಡುಪಿ ಸಿಟಿ ಬಸ್‌ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆಗೆ ಹೋಗುವ ಆಮ್ನಿ ಕಾರೊಂದರಲ್ಲಿ ಸುಮಾರು 4 ಜನರು ಸಿಟಿ ಬಸ್‌ ನಿಲ್ದಾಣದ ಬಳಿಯ ಮೆಡಿಕಲ್‌ ಶಾಪ್‌ವೊಂದರ ಎದುರು ರಸ್ತೆ ಬದಿಯಲ್ಲಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಬಿಯರ್‌ ಬಾಟಲಿ ಹಾಗೂ ರಾಡ್‌ಗಳನ್ನು ಎಸೆದು ಹೋಗಿದ್ದಾರೆ. ಅಲ್ಲದೆ ಇದೇ ವಠಾರದಲ್ಲಿ 2-3 ಬಾರೀ ಸುತ್ತಾಡುತ್ತಿದ್ದ ಬಗ್ಗೆ ಲಭಿಸಿದ ಮಾಹಿತಿ ಮೇರೆಗೆ ಆ ವಾಹನ ಮಾಲಕನಲ್ಲಿ ವಿಚಾರಿಸಲಾಗಿತ್ತು. ಬಳಿಕ ಆರೋಪಿ ಆದಮ್‌ ಎಂಬಾತ ಮರಿಗೌಡ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅದೇ ಫೋನ್‌ನಲ್ಲಿ ಮತ್ತೂರ್ವ ಆರೋಪಿ ಕೂಡ ಬೆದರಿಕೆ ಹಾಕಿದ್ದಾನೆ. ಬಳಿಕ ಮಾ. 25ಹಾಗೂ 26ರಂದು ಆರೋಪಿ ಅದಮ್‌ ಪುನಃ ಕರೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಮರಿಗೌಡ ಅವರು ಉಡುಪಿನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನೋಟಿಸ್‌ ನೀಡಲು ಹೋದಾಗ ಹಲ್ಲೆ: 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 27ರಂದು ಆರೋಪಿಗೆ ನೋಟಿಸ್‌ ನೀಡಲು ಹೋದಾಗ ಹಲ್ಲೆ ನಡೆಸಿದ್ದಾನೆ. ಆರೋಪಿಯು ಕೋಟ ಠಾಣೆ ವ್ಯಾಪ್ತಿಯವನಾಗಿದ್ದು, ಸಾಲಿಗ್ರಾಮದ ಬಳಿ ಹೊಟೇಲೊಂದರಲ್ಲಿದ್ದಾನೆ. ಉಡುಪಿ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಮಾಹಿತಿ ತಿಳಿಸಿದಾಗ ಆರೋಪಿಯು ನೋಟಿಸನ್ನು ತಿರಸ್ಕರಿಸಿ ಮರಿಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿ ಒಮ್ಮೆಲೆ ಕೈಯಿಂದ ಹೊಟ್ಟೆಗೆ ಹಾಗೂ ಬಲ ಕೆನ್ನೆಗೆ ಹೊಡೆದು ದೂಡಿದ್ದಾನೆ. ಬಿಡಿಸಲು ಹೋದ ಸಿಬಂದಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಓಡಿಹೋಗಿದ್ದಾನೆ. ಆರೋಪಿಯ ಈ ಕೃತ್ಯಕ್ಕೆ ಹೊಟೇಲ್‌ನಲ್ಲಿದ್ದ ಇಮ್ತಿಯಾಝ್ ಎಂಬಾತನೂ ಸಹಕರಿಸಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗೆ ಡ್ರಗ್ಸ್‌ ನಂಟು?:

ಘಟನೆ ನಡೆದ ದಿನದಂದು ಆತ ಬೇರೊಬ್ಬರ ವಾಹನ ಪಡೆದುಕೊಂಡು ಮಲ್ಪೆಗೆ ಹೋಗುವುದಾಗಿ ತಿಳಿಸಿದ್ದಾನೆ. ಅಲ್ಲಿಂದ ಮದ್ಯ ಹಾಗೂ ಅಮಲು ಪದಾರ್ಥ ಸೇವಿಸಿಕೊಂಡು ನಗರದಲ್ಲಿ ದಾಂಧಲೆ ನಡೆಸಿದ್ದಲ್ಲದೆ ಪೊಲೀಸರಿಗೂ ಬೆದರಿಕೆ ಹಾಕಿದ್ದಾನೆ. ವಾಹನದಲ್ಲಿ ಹಲವಾರು ಮದ್ಯದ ಬಾಟಲಿಗಳೂ ಇತ್ತೆಂದು ಹೇಳಲಾಗುತ್ತಿದೆ. ಅಲ್ಲದೆ ಆರೋಪಿಯು ಮಾದಕ ದ್ರವ್ಯ ಸೇವಿಸಿದ್ದಾನೆಯೇ ಎಂಬ ಬಗ್ಗೆ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ. ಪರಾರಿಯಾಗಿರುವ ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಟಾಪ್ ನ್ಯೂಸ್

CM Siddaramaiah resorting to blackmail strategy is ridiculous: V Sunil Kumar

CM Siddaramaiah ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ: ಸುನೀಲ್ ಕುಮಾರ್

BCCI: ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲು ಅಜಿತ್ ಅಗರ್ಕರ್ ಕಾರಣ!

BCCI: ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲು ಅಜಿತ್ ಅಗರ್ಕರ್ ಕಾರಣ!

7-ptr

Puttur: ನಾಪತ್ತೆಯಾಗಿದ್ದ ಯುವಕನ ಮೃತದೇಹ ಗೌರಿ ಹೊಳೆ ಸೇತುವೆ ಬಳಿ ಪತ್ತೆ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

china

Chinese Influencer; ನೇರಪ್ರಸಾರ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ತಿಂದು ಪ್ರಾಣಬಿಟ್ಟ ಯುವತಿ

Nayakanahatti

Nayakanahatti; ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಕಳ್ಳರ ಗ್ಯಾಂಗ್

IPL 2025; Rishabh Pant will not leave Delhi; Rahul may come back to RCB

IPL 2025; ಡೆಲ್ಲಿ ಬಿಟ್ಟು ಹೋಗಲ್ವಂತೆ ರಿಷಭ್ ಪಂತ್..!; ರಾಹುಲ್ ಬಗ್ಗೆಯೂ ಸಿಕ್ತು ಅಪ್ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Kota-poojary

CM Siddaramaiah; ನನ್ನ ಮೇಲಿನ ಆರೋಪವನ್ನು ಹಿಂಪಡೆಯಬೇಕು: ಕೋಟ

1-sadsad

Udupi ಪ್ರವಾಹ ನಿಗಾಕ್ಕೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ

1-asaas

Udupi ಪ್ರವಾಸೋದ್ಯಮ: ನಿನ್ನೆ, ಇಂದು, ನಾಳೆ ವಿಚಾರಗೋಷ್ಠಿ

Kapu-Accident

Kapu: ಬೈಕ್‌ -ಕಾರು ಮುಖಾಮುಖಿ ಢಿಕ್ಕಿ; ಬೈಕ್‌ ಸವಾರ ಮೃತ್ಯು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

CM Siddaramaiah resorting to blackmail strategy is ridiculous: V Sunil Kumar

CM Siddaramaiah ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ: ಸುನೀಲ್ ಕುಮಾರ್

BCCI: ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲು ಅಜಿತ್ ಅಗರ್ಕರ್ ಕಾರಣ!

BCCI: ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲು ಅಜಿತ್ ಅಗರ್ಕರ್ ಕಾರಣ!

8-chikodi

Chikkodi ಕ್ಷೇತ್ರಕ್ಕೆ 60 ಕೋಟಿ ರೂ. ವಿಶೇಷ ಅನುದಾನ ನೀಡಲು ಸಿಎಂಗೆ ಸಂಸದೆ ಪ್ರಿಯಂಕಾ ಮನವಿ

7-ptr

Puttur: ನಾಪತ್ತೆಯಾಗಿದ್ದ ಯುವಕನ ಮೃತದೇಹ ಗೌರಿ ಹೊಳೆ ಸೇತುವೆ ಬಳಿ ಪತ್ತೆ

ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ ; ಸಾವಿರಾರು ಭಕ್ತರು ಭಾಗಿ

Vijayapura: ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ; ಸಾವಿರಾರು ಭಕ್ತರು ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.