Udayavni Special

ಆಗಸ್ಟ್‌ ಅಂತ್ಯದೊಳಗೆ ಪಿ.ಜಿ.ಗಳ ನೋಂದಣಿ: ಡಿಸಿ ಸೂಚನೆ


Team Udayavani, Jul 18, 2019, 5:20 AM IST

dc-meeting-2

ಉಡುಪಿ: ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲ ಪಿ.ಜಿ.ಗಳನ್ನು ಆಗಸ್ಟ್‌ ಅಂತ್ಯದೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ನೀಡಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಮಣಿಪಾಲದ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹವೊಂದರ ಕಟ್ಟಡ ದುರಸ್ತಿ ನಡೆಯುತ್ತಿದ್ದು ಮಹಿಳೆಯರ ಸುರಕ್ಷತೆಗೆ ಸಿಸಿ ಟಿವಿ ಅಳವಡಿಕೆಗೆ ಸೂಚಿಸಿದ್ದರೂ ಈವರೆಗೆ ಸಿಸಿಟಿವಿ ಅಳವಡಿಸದಿರುವ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ತತ್‌ಕ್ಷಣದಲ್ಲಿ ಸಿಸಿಟಿವಿ ಅಳವಡಿಸುವಂತೆ ಹಾಸ್ಟೆಲ್‌ ವಾರ್ಡನ್‌ಗೆ ಸೂಚನೆ ನೀಡಿದರು. ಆಗಸ್ಟ್‌ 15ರ ಒಳಗೆ ಹಾಸ್ಟೆಲ್‌ನಲ್ಲಿರುವ ಇತರ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌ ಅವರಿಗೆ ಸೂಚಿಸಿದರು.

ಕಟಪಾಡಿಯಲ್ಲಿರುವ ಮಹಿಳಾ ಮಂಡಳಿ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ನಿರ್ಮಾಣ ಕಾರ್ಯ ಅನುದಾನ ಕೊರತೆಯಿಂದ ಕುಂಠಿತ ಗೊಂಡಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮಹಿಳಾ ರಕ್ಷಣೆ: ಸಹಾಯವಾಣಿ 181
ಮಹಿಳೆಯರು ಯಾವುದೇ ತುರ್ತು ಸಂದರ್ಭದಲ್ಲಿ ರಕ್ಷಣೆ ಹಾಗೂ ನೆರವಿಗೆ ಸಹಾಯವಾಣಿ 181ಗೆ ಕರೆಮಾಡಿ, ಸಹಾಯ ಪಡೆಯಲು ಅವಕಾಶ ಇರುವ ಬಗ್ಗೆ ಮಾಹಿತಿ ನೀಡಿ, ಈ ಸಹಾಯವಾಣಿಗೆ ಈವರೆಗೆ ಬಂದಿರುವ ಕರೆಗಳು ಹಾಗೂ ಅವುಗಳ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ಮುಂದಿನ ಸಭೆಯಲ್ಲಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಮಾದಕವಸ್ತು: ಮೂಲ ಪತ್ತೆಗೆ ಸಲಹೆ
ಮಾದಕ ವ್ಯಸನಿಗಳನ್ನು ಬಂಧಿಸಿ ಬಿಡುಗಡೆ ಮಾಡುವ ಮೊದಲು ಮಾದಕ ವಸ್ತು ಪೂರೈಕೆ ಆಗುತ್ತಿರುವ ಮೂಲವನ್ನು ಪತ್ತೆ ಹಚ್ಚಿದರೆ ಈ ಪಿಡುಗನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತದೆ ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್‌ ಪಡುಬಿದ್ರಿ ಅಭಿಪ್ರಾಯ ಪಟ್ಟರು. ಇದಕ್ಕೆ ಎಎಸ್ಪಿ ಕುಮಾರ್‌ಚಂದ್ರ ಪ್ರತಿಕ್ರಿಯಿಸಿ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಸ್ತುತ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಮಾದಕ ವಸ್ತು ಪೂರೈಕೆ ಆಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು. ಆನ್‌ಲೈನ್‌ನಲ್ಲಿ ಮಾದಕ ವಸ್ತುಗಳ ಪೂರೈಕೆ ಆಗುತ್ತಿರುವ ಬಗ್ಗೆ ಸೈಬರ್‌ಕ್ರೆçಮ್‌ ಬ್ರಾಂಚ್‌ಗೆ ಮಾಹಿತಿ ನೀಡಿ ತನಿಖೆ ನಡೆಸುವಂತೆ ಮತ್ತು ವೈದ್ಯರ ಔಷಧ ಚೀಟಿ ಇಲ್ಲದೆ ಮಾರಾಟವಾಗುತ್ತಿರುವ ಮೆಡಿಸಿನ್‌ಗಳನ್ನು ಪೂರೈಸುತ್ತಿರುವ ಅಂಗಡಿಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಬಾಲ್ಯವಿವಾಹ ತಡೆಗೆ ಕ್ರಮ
ಬಾಲ್ಯ ವಿವಾಹ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಸಾಮೂಹಿಕ ವಿವಾಹ ನಡೆಸುವಾಗ ವಧು-ವರನ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಸೂಚನೆ ನೀಡಿದರು.

ಹೊಸದಾಗಿ ಕಾನೂನಿನಲ್ಲಿರುವ ಶಿಕ್ಷೆಯ ಕುರಿತು ಅರಿವು ಮೂಡಿಸಬೇಕು. ಮಕ್ಕಳ ಸುರಕ್ಷಾ ಸಮಿತಿಯನ್ನು ಬಲ ಪಡಿಸುವ ಸಲುವಾಗಿ ನೋಡಲ್‌ ಆಫೀಸರಾಗಿ ಆಯ್ಕೆಗೊಂಡ ಶಿಕ್ಷಕರಿಗೆ ಮುಂದಿನ ತಿಂಗಳು ಕಾರ್ಯಾಗಾರ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಪ್ರೀ ಮ್ಯಾರೆಜ್‌ ಕೌನ್ಸಿಲಿಂಗ್‌ ಕಾರ್ಯಕ್ರಮ ನಡೆಯದಿರುವ ಬಗ್ಗೆ ಪ್ರತಿಕ್ರಿಯಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಕಾರ್ಯಕ್ರಮ ನಡೆಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ವರದಕ್ಷಿಣೆ, ಕೌಟುಂಬಿಕ ಹಿಂಸೆ
ವರದಕ್ಷಿಣೆ ನಿಷೇಧ ಕಾಯ್ದೆಯಡಿ 2019ರಲ್ಲಿ ಈವರೆಗೆ 13 ಪ್ರಕರಣಗಳು ದಾಖಲಾಗಿದ್ದು, ಕೌಟುಂಬಿಕ ಹಿಂಸೆಯ 29 ಪ್ರಕರಣಗಳು ದಾಖಲಾಗಿದೆ ಎಂದು ಎಎಸ್ಪಿ ಕುಮಾರ್‌ಚಂದ್ರ ತಿಳಿಸಿದರು.

ಸಖೀ ಒನ್‌ ಸ್ಟಾಪ್‌: 32 ಪ್ರಕರಣ
ಸಖೀ ಒನ್‌ ಸ್ಟಾಪ್‌ ಸೆಂಟರ್‌ನಲ್ಲಿ ನವೆಂಬರ್‌ 2018 ರಿಂದ ಜೂನ್‌ 2019ರ ವರೆಗೆ ಒಟ್ಟು 32 ಪ್ರಕರಣಗಳು ದಾಖಲಾಗಿದ್ದು, 20 ಪ್ರಕರಣಗಳು ಇತ್ಯರ್ಥಗೊಂಡಿದೆ. 11 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇತರೆ 1 ಪ್ರಕರಣ ಬಾಕಿ ಇದೆ. ಸ್ಥೆçರ್ಯ ನಿಧಿ ಯೋಜನೆಯಡಿಯಲ್ಲಿ ಈವರೆಗೆ 3 ಮಂದಿಗೆ ತಲಾ 25,000ರೂ. ತುರ್ತು ಪರಿಹಾರ ನೀಡಲಾಗಿದೆ. 2019-20ನೇ ಸಾಲಿನ ಜೂನ್‌ ವರೆಗೆ ಉಡುಪಿ 2, ಕುಂದಾಪುರ 7, ಕಾರ್ಕಳ 1 ಒಟ್ಟು 10 ಕೌಟುಂಬಿಕ ಹಿಂಸೆ ಪ್ರಕರಣಗಳು ದಾಖಲಾಗಿದ್ದು, 7 ಪ್ರಕರಣ ಸಂರಕ್ಷಣಾಧಿಕಾರಿಗಳಿಂದ ಇತ್ಯರ್ಥಗೊಂಡಿದೆ. 3 ಪ್ರಕರಣ ಬಾಕಿ ಇರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದರು.

ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಲೇಲೆ, ಜಿ.ಪಂ. ಸಿಇಒ ಸಿಂಧೂ ಬಿ ರೂಪೇಶ್‌ ಉಪಸ್ಥಿತರಿದ್ದರು.

ಮಾದಕ ವಸ್ತುಗಳ ದುಷ್ಪರಿಣಾಮ
ಶಾಲಾ ಕಾಲೇಜುಗಳಲ್ಲಿ ಹದಿಹರೆಯದ ಮಕ್ಕಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶಾಲಾ ಶಿಕ್ಷಕರನ್ನೇ ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಎಂದು ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ.ಜಿ. ರಾಮ ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷcಟಕ್ಕೆ ಬಲಿಯಾದ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಿಂದ ಎಷ್ಟು ಬಾರಿ ವೈದ್ಯರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂಬ ಕುರಿತು ವರದಿ ನೀಡುವಂತೆ ಸೂಚನೆ ನೀಡಿದರು.

ಭಿಕ್ಷಾಟನೆ ಮಕ್ಕಳ ರಕ್ಷಣೆ
ಭಿಕ್ಷಾಟನೆಯಲ್ಲಿ ಗುರುತಿಸಿಕೊಂಡ ಮಕ್ಕಳನ್ನು ಗುರುತಿಸಿ ಮತ್ತೆ ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಿದ ಜಿಲ್ಲಾಧಿಕಾರಿ, ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟು ಶಾಲೆಗೆ ಸೇರಿಸ್ಪಟ್ಟ ಮಕ್ಕಳು ಮತ್ತೆ ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳದಂತೆ ರಕ್ಷಿಸಲು ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳ ಹಾಜರಾತಿಯ ವರದಿಯನ್ನು ಇಲಾಖೆಗೆ ನೀಡುವಂತೆ ಸೂಚನೆ ನೀಡಬೇಕು ಹಾಗೂ ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಬಗ್ಗೆ ಡಿಡಿಪಿಐ ಅವರು ಮಾಹಿತಿ ಪಡೆಯುತ್ತಿರಬೇಕು ಹಾಗೂ ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟು ಶಾಲೆಯಲ್ಲಿ ಒಂದು ವರ್ಷ ಪೂರೈಸಿದ ಮಕ್ಕಳನ್ನು ಮಕ್ಕಳ ಗ್ರಾಮ ಸಭೆಗಳಲ್ಲಿ ಗುರುತಿಸಿ ಮಕ್ಕಳಿಗೆ ಪೋ›ತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗಡಿನಾಡು ಬೀದರ್ ಜಿಲ್ಲೆಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು

ಗಡಿನಾಡು ಬೀದರ್ ಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು ಪತ್ತೆ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಪೊಲೀಸ್ ತಪಾಸಣೆ ಇಲ್ಲ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಹೊತ್ತು ಪೊಲೀಸ್ ತಪಾಸಣೆ ಇರಲ್ಲ!

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ದಕ್ಷಿಣ ಕನ್ನಡದಲ್ಲಿ 11 ಮಂದಿಯಲ್ಲಿ ಸೋಂಕು ದೃಢ

ದಕ್ಷಿಣ ಕನ್ನಡ ಮೂರು ವರ್ಷದ ಮಗು ಸೇರಿ 11 ಮಂದಿಗೆ ಕೋವಿಡ್ ಸೋಂಕು ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಪೊಲೀಸ್ ತಪಾಸಣೆ ಇಲ್ಲ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಹೊತ್ತು ಪೊಲೀಸ್ ತಪಾಸಣೆ ಇರಲ್ಲ!

ಉಡುಪಿಯಲ್ಲಿ ಮತ್ತೆ 9 ಮಂದಿಗೆ ಕೋವಿಡ್ ಸೋಂಕು ; ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 120 ಏರಿಕೆ

ಉಡುಪಿಯಲ್ಲಿ ಮತ್ತೆ 9 ಮಂದಿಗೆ ಕೋವಿಡ್ ಸೋಂಕು ; ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 120 ಏರಿಕೆ

ಉಡುಪಿ ಅಕ್ರಮ ಮರಳುಗಾರಿಕೆ ಬಹುಕೋಟಿ ಹಗರಣ ತನಿಖೆಗೆ ಕಾಂಗ್ರೆಸ್ ಆಗ್ರಹ

ಉಡುಪಿ ಅಕ್ರಮ ಮರಳುಗಾರಿಕೆ ಬಹುಕೋಟಿ ಹಗರಣ ತನಿಖೆಗೆ ಕಾಂಗ್ರೆಸ್ ಆಗ್ರಹ

ಮೂಳೂರು : ವಾಹನಗಳೆರಡು ಢಿಕ್ಕಿ : ಸಂಚಾರ ಅಸ್ತವ್ಯಸ್ತ

ಮೂಳೂರು : ವಾಹನಗಳೆರಡು ಢಿಕ್ಕಿ, ಸಂಚಾರ ಅಸ್ತವ್ಯಸ್ತ

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

17 ಕೆರೆಗಳ ಭರ್ತಿಗೆ ಅನುದಾನ: ರಮೇಶ

17 ಕೆರೆಗಳ ಭರ್ತಿಗೆ ಅನುದಾನ: ರಮೇಶ

ಗಡಿನಾಡು ಬೀದರ್ ಜಿಲ್ಲೆಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು

ಗಡಿನಾಡು ಬೀದರ್ ಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು ಪತ್ತೆ

ಅರ್ಹರಿಗೆ ಸರ್ಕಾರದ ಸಹಾಯಧನ ತಲುಪಿಸಿ: ಶೆಟ್ಟರ

ಅರ್ಹರಿಗೆ ಸರ್ಕಾರದ ಸಹಾಯಧನ ತಲುಪಿಸಿ: ಶೆಟ್ಟರ

ಅಂತರ್ಜಲ ಹೆಚ್ಚಳಕ್ಕೆ ಮಾದರಿ ಯೋಜನೆ ರೂಪಿಸಿ

ಅಂತರ್ಜಲ ಹೆಚ್ಚಳಕ್ಕೆ ಮಾದರಿ ಯೋಜನೆ ರೂಪಿಸಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.