ಐತಿಹಾಸಿಕ ಕಲ್ಲಮಠದ ಕಲ್ಯಾಣಿಗೆ ಪುನಶ್ಚೇತನ

ಸ್ನೇಹಿತ ಯುವ ಸಂಘದ ಸದಸ್ಯರಿಂದ ಶ್ರಮದಾನ

Team Udayavani, May 22, 2019, 6:00 AM IST

kallamata-kalyani

ಮಲ್ಪೆ: ಉಡುಪಿ ನಗರಸಭೆ ವ್ಯಾಪ್ತಿಯ ಕೊಡವೂರು ವಾರ್ಡಿನಲ್ಲಿ ಸುಮಾರು ಏಳೆಂಟು ಶತಮಾನಗಳ ಇತಿಹಾಸವಿರುವ ಹೂಳು ತುಂಬಿಕೊಂಡಿರುವ ಕೆರೆಯೊಂದು ಪುನರುಜ್ಜೀವನ ಪಡೆಯುವ ಹಂತದಲ್ಲಿದೆ. ಈ ಕಲ್ಯಾಣಿಯ ಕಲ್ಯಾಣಕ್ಕಾಗಿ ಕೊಡವೂರಿನ ಸೇ°ಹಿತ ಯುವ ಸಂಘ ಮುಂದೆ ಬಂದಿದ್ದು, ಸ್ಥಳೀಯ ನೆರವಿನಿಂದ ಅಭಿವೃದ್ಧಿಗೆ ಮುಂದಾಗಿದೆ.

ಏಳು ಸೆಂಟ್ಸ್‌ ವಿಸ್ತಾರವಿರುವ ಕೆರೆ
ಸುಮಾರು 700-800 ವರ್ಷಗಳ ಇತಿಹಾಸವಿರುವ ಕಲ್ಲಮಠ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಕಲ್ಯಾಣಿ ಕೆರೆ ತುಂಬಿರುವ ಹೂಳು ತೆರವುಗೊಂಡು ಮರುಜೀವ ಪಡೆಯಲಿದೆ.ಕಲ್ಲಮಠ ದೇವಸ್ಥಾನದ ಕೆರೆಯು ಏಳು ಸೆಂಟ್ಸ್‌ ವಿಸೀ¤ರ್ಣದ ಜಾಗದಲ್ಲಿತ್ತು. ಸರಕಾರಿ ಜಾಗದಲ್ಲಿರುವ ಈ ಕೆರೆಯ ಪಹಣಿ ಪತ್ರದಲ್ಲಿ 7 ಸೆಂಟ್ಸ್‌ ಎಂದು ನಮೂದಾಗಿದ್ದರೂ ಪ್ರಸ್ತುತ ಸುತ್ತಮುತ್ತಲ ಮಣ್ಣು ಬಿದ್ದು ಹೂಳು ತುಂಬಿ ಕೆರೆಯೇ ಮುಚ್ಚಿಹೋಗಿದೆ. ಮೂರು ನಾಲ್ಕು ಸೆಂಟ್ಸ್‌ ಜಾಗದಲ್ಲಿ ಸಣ್ಣ ಹೊಂಡದಂತೆ ಗೋಚರವಾಗುತ್ತದೆ. ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಈ ಹೊಂಡದಲ್ಲಿ ನೀರು ನಿಂತರೆ ಉಳಿದೆಲ್ಲ ಸಮಯ ಬತ್ತಿ ಬರಡಾಗುತ್ತಿತ್ತು.

ಈ ಬಾರಿ ಜಲಕ್ಷಾಮ ತಲೆದೋರಿದ್ದರಿಂದ ಕೊಡವೂರು ವಾರ್ಡ್‌ ಸದಸ್ಯ ವಿಜಯ ಕೊಡವೂರು ಅವರ ನೇತೃತ್ವದಲ್ಲಿ ಈ ಕೆರೆ ಪುನಶ್ಚೇತನಗೊಳಿಸಲು ಮುಂದಾಗಿದ್ದಾರೆ. ಕೊಡವೂರಿನ ಸ್ನೇಹಿತ ಯುವ ಸಂಘ ಸ್ಥಳೀಯರ ನೆರವಿನಿಂದ ಅಭಿವೃದ್ಧಿಗೆ ಕಾರ್ಯ ನಡೆಸಲು ಹೆಜ್ಜೆ ಇಟ್ಟಿದೆ. ನಗರಸಭೆಯ ಜೆಸಿಬಿ ಯಂತ್ರ ತಂದು ಈ ಕೆರೆಯ ಮಣ್ಣು ತೆರವುಗೊಳಿಸಲಾಗುತ್ತದೆ.

ವಾರ್ಡ್‌ನಲ್ಲಿರುವ ಕೆರೆ
ಕೊಡವೂರು ವಾರ್ಡ್‌ನಲ್ಲಿ ಶಂಕರನಾರಾಯಣ ತೀರ್ಥ, ರಕ್ತೇಶ್ವರಿ ಕೆರೆ, ಜೋಡುಕೆರೆ, ಶೇಣರ ಜಿಡ್ಡ, ಕ್ರೋಡಾಮುನಿ ತಪಸ್ಸು ಮಾಡಿದ ಕೆರೆ ಸಹಿತ ಒಟ್ಟು ಏಳು ಕೆ‌ರೆಗಳಿವೆ. ಕಳೆದವರ್ಷ ಶಂಕರನಾರಾಯಣ ತೀರ್ಥ ಅಭಿವೃದ್ಧಿಪಡಿಸಲಾಗಿದೆ.

ಪ್ಲಾಸ್ಟಿಕ್‌ ಮುಕ್ತ ವಾರ್ಡ್‌ ಸಂಕಲ್ಪ
ವಾರ್ಡ್‌ನಲ್ಲಿರುವ ಸಂಘ – ಸಂಸ್ಥೆಗಳು ಒಗ್ಗೂಡಿಸಿ ಅವರಿಂದ ವಾರ್ಡ್‌ ಅಂತರ್ಜಲ ವೃದ್ಧಿ ಪರಿಸರ ಸಂರಕ್ಷಣೆ ಮಾಡುವ ಯೋಚನೆಯಿದೆ. ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಪಡಿಸಲಾಗುತ್ತದೆ. ಮಳೆಗಾಲದಲ್ಲಿ ಗಿಡ ನೆಡುವ ಯೋಜನೆ ಇದೆ. ಜೊತೆಗೆ ಕೊಡವೂರು ವಾರ್ಡ್‌ ಅನ್ನು ಪ್ಲಾಸ್ಟಿಕ್‌ ಮುಕ್ತ ವಾರ್ಡ್‌ನ್ನಾಗಿ ಮಾಡಬೇಕು ಎಂಬ ಕುರಿತು ಚಿಂತನೆ ನಡೆದಿದೆ.
-ವಿಜಯ ಕೊಡವೂರು, ನಗರಸಭಾ ಸದಸ್ಯರು

ಊರಿಗಾಗಿ ಸಣ್ಣ ಸೇವೆ
ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದೇವೆ. ಒಂದು ತಿಂಗಳ ಹಿಂದೆ ಕಲ್ಲಮಠದ ಲಕ್ಷ್ಮೀನಾರಾಯಣ ದೇವಸ್ಥಾನದ ಕೆರೆಯಲ್ಲಿ ನಮ್ಮ ಕೊಡವೂರು ಕಾನಂಗಿಯ ಸ್ನೇಹಿತ ಯುವ ಸಂಘದ ಯುವಕರ ತಂಡ ಬಂದು ಶ್ರಮದಾನ ಮಾಡಿದೆ. ನಗರಸಭೆ ಜೆಸಿಬಿ ಯಂತ್ರವನ್ನು ನೀಡಿದೆ, ಉಳಿದೆಲ್ಲ ಕಾರ್ಯಗಳನ್ನು ನಮ್ಮ ಸದಸ್ಯರು ಶ್ರಮದಾನದ ಮೂಲಕ ನಡೆಸುತಿದ್ದಾರೆ.
– ರಾಜ್‌ ಸುವರ್ಣ, ಅಧ್ಯಕ್ಷರು, ಸ್ನೇಹಿತ ಯುವ ಸಂಘ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.