ರಸ್ತೆ ಅಪಘಾತ: ಗುಜ್ಜಾಡಿ ಮೂಲದ ನಾಲ್ವರ ಸಾವು


Team Udayavani, Feb 22, 2019, 12:30 AM IST

2102kdpp6.jpg

ಕುಂದಾಪುರ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪದ ಉದಯಪುರದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಯಂತ್ರಣ ತಪ್ಪಿದ ಕಾರು ವಿದ್ಯುತ್‌ ಕಂಭ, ಸುಲಭ್‌ ಶೌಚಾಲಯದ ಗೋಡೆಗೆ ಢಿಕ್ಕಿಯಾಗಿ, ಎಂಜಿನ್‌ ಹೊತ್ತಿ ಉರಿದು ಮೂವರು ಸ್ಥಳದಲ್ಲಿಯೇ ಸಜೀವ ದಹನಗೊಂಡ ದುರ್ಘ‌ಟನೆ ಗುರುವಾರ ಬೆಳಗ್ಗೆ 7.50ರ ಸುಮಾರಿಗೆ ಸಂಭವಿಸಿದೆ. 

ಗಂಭೀರ ಸುಟ್ಟಗಾಯಕ್ಕೀಡಾಗಿದ್ದ ಇನ್ನೋರ್ವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಸಾವನ್ನಪ್ಪಿದ್ದಾನೆ. 

ಗುಜ್ಜಾಡಿ ಗ್ರಾಮದ ನಾಯಕ ವಾಡಿಯ ವಿವೇಕ ನಾಯಕ್‌ (38), ಅವರ ಪತ್ನಿ ರೇಷ್ಮಾ ನಾಯಕ್‌ (33), ಪುತ್ರಿ ವಿನಂತಿ (9), ಪುತ್ರ ವಿಘ್ನೇಶ್‌ (4) ಮೃತಪಟ್ಟವರು.  ಮೃತರು ಬೆಂಗಳೂರಿನ ಚಿಕ್ಕಬಾಣಾ ವರದ ವಿನಾಯಕ ನಗರ ನಿವಾಸಿಗಳಾಗಿದ್ದರು. ಚೆನ್ನರಾಯ ಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಬಳದರೆ ಗೇಟ್‌ ಸಮೀಪ ಘಟನೆ ಸಂಭವಿಸಿದೆ.

ಅವಘಡ ನಡೆದುದು ಹೇಗೆ?
ಸಾಕಷ್ಟು ವೇಗದಿಂದಿದ್ದ ಕಾರು ಉದಯಪುರದಲ್ಲಿ ಎದುರು ಸಾಗುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದಾಗ ಪಲ್ಟಿ ಯಾಗಿ ವಿದ್ಯುತ್‌ ಕಂಭಕ್ಕೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಬಳಿಕ ಶೌಚಾಲಯ ಕಟ್ಟಡಕ್ಕೆ ಢಿಕ್ಕಿಯಾದಾಗ ಕಾರಿನ ಟ್ಯಾಂಕ್‌ನಿಂದ ಪೆಟ್ರೋಲ್‌ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಸಮೀಪದ ಹೊಟೇಲ್‌ ಸಿಬಂದಿ ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದರೂ ಕಾರಿನಲ್ಲಿದ್ದ ದಂಪತಿ, ಹೆಣ್ಣುಮಗು ಅದಾಗಲೇ ಸಜೀವ ದಹನಗೊಂಡಿದ್ದರು. ಬದುಕುಳಿದಿದ್ದ ಬಾಲಕ ವಿಘ್ನೇಶ್‌ನನ್ನು ಚನ್ನರಾಯ ಪಟ್ಟಣ ಸ.ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಒದಗಿಸಿದರೂ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ.

ಖಾಸಗಿ ಕಂಪೆನಿ ಉದ್ಯೋಗಿ
ನಾಯಕವಾಡಿಯ ದಿ| ವಿಟuಲ ನಾಯಕ್‌, ವನಮಾಲಾ ದಂಪತಿಯ ಪುತ್ರರಾಗಿರುವ ವಿವೇಕ್‌ ನಾಯಕ್‌ ಅವರು ಮುಂಬಯಿ ಮೂಲದ ಸೈಕಾರ್ಜ್‌ ಎನ್ನುವ ಗಾರ್ಮೆಂಟ್‌ ಕಂಪೆ ನಿಯ ಬೆಂಗಳೂರಿನ ಕಚೇರಿ ಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕಾರ್ಯನಿರ್ವ ಹಿಸುತ್ತಿದ್ದರು. ಐದು ವರ್ಷಗಳಿಂದ ಅವರು ಬೆಂಗಳೂರಿ ನಲ್ಲಿದ್ದು, ಅದಕ್ಕೂ ಮೊದಲು 10 ವರ್ಷಗಳ ಕಾಲ ರಾಯಲ್‌ ಎನ್‌ಫೀಲ್ಡ್‌ ಕಂಪೆನಿ, ಬಿಗ್‌ ಬಾಸ್ಕೆಟ್‌ ಕಂಪೆನಿಯ ಉದ್ಯೋಗ ನಿಮಿತ್ತ ಮುಂಬಯಿಯಲ್ಲಿದ್ದರು. 2008ರಲ್ಲಿ ವಿವೇಕ್‌ ಅವರು ಉ.ಕ.ದ ಕುಮಟಾದ ರೇಷ್ಮಾ ಅವರನ್ನು ವಿವಾಹವಾಗಿದ್ದರು. ಕುಂದಾಪುರದ ವಿಕೆಆರ್‌ ಆಚಾರ್ಯ ಆಂ.ಮಾ. ಶಾಲೆಯಲ್ಲಿ ಪ್ರಾ., ಪ್ರೌಢಶಿಕ್ಷಣ, ಗಂಗೊಳ್ಳಿ ಎಸ್‌ವಿ ಪ.ಪೂ. ಕಾಲೇಜಿನಲ್ಲಿ ಪ.ಪೂ., ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದರು. 
 
ಜನವರಿಯಲ್ಲಿ ಬಂದಿದ್ದರು…
ವಿವೇಕ್‌ ಊರಿನಲ್ಲಿ ಏನಾದರೂ ಕಾರ್ಯಕ್ರಮವಿದ್ದಾಗ ಪತ್ನಿ, ಮಕ್ಕಳೊಂದಿಗೆ ಬರುತ್ತಿದ್ದರು. ಕಳೆದ ಡಿಸೆಂಬರ್‌ ಅಂತ್ಯ, ಜನವರಿ ಮೊದಲ ವಾರದಲ್ಲಿ ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇಗುಲದಲ್ಲಿ ನಡೆದ ಸಮಾರಂಭಕ್ಕೆ ಆಗಮಿಸಿದ್ದರು. ಆಗ ತಮ್ಮ ಇಬ್ಬರು ಮಕ್ಕಳಿಗೂ ಮುದ್ರಾಧಾರಣೆ ಮಾಡಿ ಸಿದ್ದರು. ಮೂಲ ಮನೆಯಿರುವ ನಾಯಕವಾಡಿಯಲ್ಲಿ ತಾಯಿ, ಅಣ್ಣ ವಿನಾಯಕ ನಾಯಕ್‌, ಅವರ ಪತ್ನಿ, ಮಕ್ಕಳು ನೆಲೆಸಿದ್ದಾರೆ.

ಕಾರಲ್ಲಿಯೇ ಬರುತ್ತಿದ್ದರು
ವಿವೇಕ್‌ ಸಾಮಾನ್ಯವಾಗಿ ಬೆಂಗಳೂರಿನಿಂದ ಕಾರಿನಲ್ಲಿಯೇ ಊರಿಗೆ ಬರು ತ್ತಿದ್ದರು. 4 ವರ್ಷಗಳ ಹಿಂದೆ ಈ ರಿಟ್ಜ್ ಕಾರನ್ನು ಖರೀದಿಸಿದ್ದರು. ವೇಗವಾ ಗಿಯೇ ಕಾರು ಚಲಾಯಿಸುವ ಅವರಿಗೆ ಅನೇಕ ಬಾರಿ ಜಾಗರೂಕತೆಯಿಂದ ಚಲಾಯಿಸಲು ಕಿವಿ ಮಾತು ಹೇಳಿದ್ದೆವು ಎಂದು ಅವರ ಆಪ್ತರು ಹೇಳಿದ್ದಾರೆ. 

ಮೃತನ ಸಹೋದರ ಸ್ಥಳಕ್ಕೆ
ಮೃತರ ಸಹೋದರ ವಿನಾಯಕ ನಾಯಕ್‌ ದುರ್ಘ‌ಟನೆಯ ವಿಚಾರ ತಿಳಿದು ಸ್ನೇಹಿತರೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ತಂದೆ ಮೃತಪಟ್ಟು ಪ್ರಥಮ ವಾರ್ಷಿಕ ಶ್ರಾದ್ಧಕ್ಕೆ ಮುನ್ನ ಪುತ್ರ, ಸೊಸೆ, ಮೊಮ್ಮಕ್ಕಳ ಸಾವು ಅವರಿಗೆ ಆಘಾತ ಉಂಟು ಮಾಡಬಹುದು ಎಂಬ ಕಾರಣಕ್ಕೆ ತಾಯಿಗೆ ತಿಳಿಸಿಲ್ಲ ಎಂದು ಅವರು ಹೇಳಿದ್ದಾರೆ. ಮೃತದೇಹಗಳನ್ನು ಹುಟ್ಟೂರಿಗೆ ಕೊಂಡೊಯ್ದು ಶುಕ್ರವಾರ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದಿದ್ದಾರೆ.

ನಿಧಾನವಾಗಿ ಬಾ ಮಗು ಎಂದಿದ್ದರು
ತಾಯಿ ವನಮಾಲಾ ನಾಯಕ್‌ ಬುಧವಾರ ವಿವೇಕ್‌ ಜತೆಗೆ ದೂರವಾಣಿ ಮೂಲಕ ಮಾತನಾಡಿ, ಮಕ್ಕಳಿಗೆ ಪರೀಕ್ಷೆ ಇದ್ದರೂ ಪರವಾಗಿಲ್ಲ. ರಜೆ ಹಾಕಿ ಬಾ. ಕಾರಿನಲ್ಲಿ ಬರುವಾಗ ಜೋಪಾನ, ಹಾಸನದಿಂದ ಮುಂದಕ್ಕೆ ರಸ್ತೆ ಕೆಲಸ ನಡೆಯುತ್ತಿದೆ. ಹಾಗಾಗಿ ನಿಧಾನವಾಗಿ ಕಾರು ಚಾಲನೆ ಮಾಡಿಕೊಂಡು ಬಾ. ಗುರುವಾರ ರಾತ್ರಿ ಸಂಚಾರ ಮಾಡುವುದು ಬೇಡ ಮಗು. ಬೆಳಗ್ಗೆ ಬೇಗ ಹೊರಟು ನಿಧಾನವಾಗಿ ಸಂಜೆಯ ಒಳಗೆ ಊರು ತಲುಪು ಎಂದು ಬುದ್ಧಿ ಹೇಳಿದ್ದರು ಎಂದು ಮೃತರ ಸಹೋದರ ನೆನಪಿಸಿಕೊಂಡು ದುಃಖೀಸಿದರು.

ತಂದೆಯ ಶ್ರಾದ್ಧಕ್ಕೆಂದು ಹೊರಟವರು
ವಿವೇಕ್‌ ನಾಯಕ್‌ ಅವರ ತಂದೆ ವಿಠಲ ನಾಯಕ್‌ ಅವರು ವಿಧಿವಶರಾಗಿ ಫೆ.22ಕ್ಕೆ ಒಂದು ವರ್ಷವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಠಲವಾಡಿಯ ಮೂಲ ಮನೆಯಲ್ಲಿ ಶ್ರಾದ್ಧ ಕಾರ್ಯಕ್ರಮ ಇರಿಸಿಕೊಳ್ಳಲಾಗಿದೆ. ಅದಕ್ಕಾಗಿ ವಿವೇಕ್‌ ಕುಟುಂಬ ಗುರುವಾರ ಬೆಳಗ್ಗೆ 5.45ಕ್ಕೆ ಊರಿಗೆ ಹೊರಟಿತ್ತು. ಈ ವೇಳೆ ಚನ್ನರಾಯಪಟ್ಟಣ ಸಮೀಪದ ಉದಯಪುರ ಬಳಿ ಕಾರಿನ ಟಯರ್‌ ಪಂಕ್ಚರ್‌ ಆಗಿ, ಘಟನೆ ಸಂಭವಿಸಿದೆ. 

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.