ಉಡುಪಿ : 7 ತಿಂಗಳ ಕಾಲ ಸ್ಮಾರ್ಟ್ಲೆಸ್ ಆಗಿದ್ದ ಆರ್ಸಿ ಈಗ ಮತ್ತೆ ಸ್ಮಾರ್ಟ್!
Team Udayavani, Jun 24, 2022, 8:10 AM IST
ಉಡುಪಿ : ಸರಕಾರ ಹಾಗೂ ರೋಸ್ಮಾರ್ಟ್ ಕಂಪೆನಿಯ ತಿಕ್ಕಾಟದಿಂದ ಕಳೆದ 7 ತಿಂಗಳ ಕಾಲ ಸ್ಮಾರ್ಟ್ಲೆಸ್ ಆಗಿದ್ದ ಆರ್ಸಿ ಈಗ ಮತ್ತೆ ಮೊದಲಿನ (ಪೇಪರ್ಲೆಸ್) ಸ್ಥಿತಿಗೆ ಬಂದಿದೆ.
7 ತಿಂಗಳ ಹಿಂದೆ ಆರ್ಟಿಒ ಕಚೇರಿಯಲ್ಲಿ ಆರ್ಸಿಯನ್ನು ಸ್ಮಾಟ್ಕಾರ್ಡ್ ರೂಪದಲ್ಲಿ ನೀಡಲಾಗುತ್ತಿತ್ತು. ಅನಂತರ ಸ್ಮಾರ್ಟ್ಕಾರ್ಡ್ ಪೂರೈಕೆ ಮಾಡುವ ಕಂಪೆನಿಯ ಅವ್ಯವಹಾರದಿಂದ ಈ ಸೇವೆ ಪೂರೈಕೆ ಸ್ಥಗಿತಗೊಂಡಿತ್ತು. ಈ ಸಂದರ್ಭ ಆರ್ಟಿಒ ಕಚೇರಿಯಲ್ಲಿ ಮತ್ತೆ ಈ ಹಿಂದಿನಂತೆ ಪೇಪರ್ ಹಾಳೆಯಲ್ಲಿ ಆರ್ಸಿ ನೀಡಲಾಗುತ್ತಿತ್ತು. ಈಗ ಆ ಎಲ್ಲ ಸಮಸ್ಯೆಗಳು ನಿವಾರಣೆಯಾಗಿವೆ.
ಈಗಾಗಲೇ ಪೇಪರ್ ಮೂಲಕ ಆರ್ಸಿ ಪಡೆದುಕೊಂಡವರು ನಿರ್ದಿಷ್ಟ ಶುಲ್ಕ ಪಾವತಿಸಿ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಉಡುಪಿ ಆರ್ಟಿಒ ಕಚೇರಿಗೆ 2500 ಸ್ಮಾರ್ಟ್ ಕಾರ್ಡ್ಗಳನ್ನು ರೋಸ್ಮಾರ್ಟ್ ಕಂಪೆನಿ ಪೂರೈಕೆ ಮಾಡಿದೆ. ದಿನಕ್ಕೆ ಸರಾಸರಿ 200 ಸ್ಮಾರ್ಟ್ ಕಾರ್ಡ್ಗಳ ಬೇಡಿಕೆ ಇದೆ ಎನ್ನುತ್ತಾರೆ ಆರ್ಟಿಒ ಇಲಾಖೆ ಅಧಿಕಾರಿಗಳು.