ಅತ್ತೂರು ಸಂತ ಲಾರೆನ್ಸ್‌ ಪುಣ್ಯಕ್ಷೇತ್ರ: ವಾರ್ಷಿಕ ಮಹೋತ್ಸವಕ್ಕೆ ಚಾಲನೆ

Team Udayavani, Jan 27, 2020, 6:04 AM IST

ಕಾರ್ಕಳ: ಪ್ರಸಿದ್ಧ ಕೆೈಸ್ತ ಪುಣ್ಯಕ್ಷೇತ್ರ ಅತ್ತೂರು ಸಂತ ಲಾರೆನ್ಸರ ಬಸಿಲಿಕಾದಲ್ಲಿ ಪವಿತ್ರ ವಾರ್ಷಿಕ ಮಹೋತ್ಸವಕ್ಕೆ ರವಿವಾರ ಚಾಲನೆ ದೊರೆಯಿತು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಧ್ವಜಾರೋಹಣ ಗೈಯುವ ಮೂಲಕ ಚಾಲನೆ ನೀಡಿದರು. ಬಳಿಕ ದಿವ್ಯ ಬಲಿಪೂಜೆ ನಡೆಸಿದರು. ಬೆಳಗ್ಗೆ ಪುಷ್ಕರಣಿಯಲ್ಲಿ ಸಂತ ಲಾರೆನ್ಸರ ಪವಾಡ ಮೂರ್ತಿಯನ್ನು ಅನಾವರಣಗೊಳಿಸಲಾಯಿತು. ಅಪರಾಹ್ನ 2.30ಕ್ಕೆ ಮತ್ತು 4.30ಕ್ಕೆ ಮಕ್ಕಳಿಗಾಗಿ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆ ನೆರವೇರಿತು.

ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಕೊಂಕಣಿಯಲ್ಲಿ ದಿವ್ಯ ಬಲಿಪೂಜೆ ನಡೆಸಿದರು.

ಮಹೋತ್ಸವದ ಮೊದಲನೇ ದಿನ ರವಿವಾರವಾದ ಹಿನ್ನೆಲೆಯಲ್ಲಿ ಅತ್ತೂರು ಬಸಿಲಿಕಾದತ್ತ ಜನಸಾಗರವೇ ಹರಿದು ಬಂತು.

ಇಂದಿನ ಕಾರ್ಯಕ್ರಮ
ಜ. 27ರಂದು ಬೆಳಗ್ಗೆ 10ಕ್ಕೆ ಮತ್ತು ಅಪರಾಹ್ನ 3.30ಕ್ಕೆ ಅಸ್ವಸ್ಥರಿಗಾಗಿ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆ ಜರಗಲಿವೆ. ಚಿಕ್ಕಮಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಟಿ. ಅಂತೋಣಿ ಸ್ವಾಮಿ ಕನ್ನಡದಲ್ಲಿ ಬಲಿಪೂಜೆ ನಡೆಸಿಕೊಡಲಿದ್ದಾರೆ. ಅಲ್ಲದೆ ಹಲವಾರು ಕೊಂಕಣಿ ಬಲಿಪೂಜೆಗಳು ನಡೆಯಲಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ