Udayavni Special

“ಮಹಾತ್ಮ’ರ ಹೆಸರಲ್ಲಿದೆ ಮೈದಾನ, ಉದ್ಯಾನವನ


Team Udayavani, Aug 14, 2018, 6:00 AM IST

1308kdpp3.jpg

ಕುಂದಾಪುರ: ದೇಶ 72ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಈ ಸ್ವಾತಂತ್ರ್ಯಗೋಸ್ಕರ ಅದೆಷ್ಟೋ ಮಹನೀಯರು 90 ವರ್ಷಗಳ ಸುದೀರ್ಘ‌ ಹೋರಾಟವನ್ನೇ ನಡೆಸಿದ್ದಾರೆ. ಬ್ರಿಟಿಷರ ಲಾಠಿ ಬೂಟಿಗೆ ಬೆದರದೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟೆ ತೀರುವೇ ಎನ್ನುವ ಛಲ ತೊಟ್ಟ ಮಹಾನುಭಾವರ ತ್ಯಾಗ, ಬಲಿದಾನದಿಂದ ನಾವಿಂದು ಸರ್ವ ಸ್ವತಂತ್ರರಾಗಿದ್ದೇವೆ. 

ಕುಂದಾಪುರದಲ್ಲಿಯೂ ಮೈದಾನ, ಉದ್ಯಾನವನ, ರಸ್ತೆ, ಸರ್ಕಲ್‌ಗ‌ಳಿಗೆ ಅಂತಹ ಮಹಾತ್ಮರ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಅವರ ಹೋರಾಟದ ಬದುಕಿಗೊಂದು ಗೌರವ ಕೊಡಲಾಗಿದೆ. 

ಗಾಂಧಿ ಪಾರ್ಕ್‌
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಹೆಸರಲ್ಲಿರುವ “ಗಾಂಧಿ ಪಾರ್ಕ್‌’ ನಗರದಲ್ಲಿರುವ ಏಕೈಕ ಉದ್ಯಾನವನ ವಾಗಿದೆ. ನಿತ್ಯ ನೂರಾರು ಮಂದಿ ಇಲ್ಲಿಗೆ ವಿಹಾರಕ್ಕೆ ಬರುತ್ತಾರೆ. ವಿಶ್ರಾಂತಿ ಪಡೆದು ಹೋಗುತ್ತಾರೆ. ಆದರೆ ವಿಶಾಲವಾದ ಜಾಗದಲ್ಲಿ, ಉತ್ತಮವಾದ ಪ್ರದೇಶದಲ್ಲಿ ಈ ಪಾರ್ಕ್‌ ಇದ್ದರೂ, ಸರಿಯಾದ ನಿರ್ವಹಣೆ ಯಿಲ್ಲದೆ ಸೊರಗಿದೆ. ಕುಡಿಯುವ ನೀರಿನ ಘಟಕವೂ ಸರಿಯಿಲ್ಲ. 

ಶಾಸ್ತ್ರಿ ಸರ್ಕಲ್‌
ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಪ್ರಧಾನಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ನೆನಪಿನಲ್ಲಿ ಕುಂದಾಪುರದಲ್ಲಿ ಶಾಸ್ತ್ರಿ ಸರ್ಕಲ್‌ ನಿರ್ಮಿಸಲಾಗಿದೆ. ಶಾಸ್ತ್ರಿ ಅವರ ಚಂದದ ಪ್ರತಿಮೆಯೂ ಇದೆ. ಪ್ರಯಾಣಿಕರಿಗೆ ಅಥವಾ ಪ್ರವಾಸಿಗರಿಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳಿವೆ. ಹೈಮಾಸ್ಟ್‌ ದೀಪ ಇದೆ. ವಿಶೇಷ ಸಮಾರಂಭಗಳಲ್ಲಿ, ರಾಷ್ಟ್ರೀಯ ಹಬ್ಬಗಳ ಸಂದರ್ಭ ಶಾಸ್ತ್ರಿ ಪ್ರತಿಮೆಗೆ ಹಾರ ಹಾಕಲಾಗುತ್ತದೆ. ಇಲ್ಲಿ ಕುಳಿತುಕೊಳ್ಳಲು ಬೆಂಚುಗಳಿವೆ. ಆದರೆ ನಿರ್ವಹಣೆಯಿಲ್ಲದ ಕಾರಣ ಕೂರಲಾಗದು. ವೃತ್ತ ಎಂದು ಹೆಸರಿದ್ದರೂ ವೃತ್ತ ಇಲ್ಲ, ಬೇಲಿಯಿಲ್ಲ. ಹುಲ್ಲು ಬೆಳೆದಲ್ಲಿ ಹಸುಗಳು ಬಂದು ಮೇಯುತ್ತಿರುತ್ತದೆ. 

ಗಾಂಧಿ ಮೈದಾನ
ಗಾಂಧಿ ಪಾರ್ಕ್‌ ಪಕ್ಕದಲ್ಲೇ ಗಾಂಧಿ ಮೈದಾನವಿದ್ದು, ತಾಲೂಕು ಮೈದಾನವಾಗಿದೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ದಿನಾಚರಣೆ ನಡೆಯುತ್ತದೆ. ಬೇರೆ – ಬೇರೆ ಕ್ರೀಡಾಕೂಟ ನಡೆಯುತ್ತವೆ. 
ನೆಹರೂ ಮೈದಾನ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರ ಹೆಸರಲ್ಲಿರುವ ನೆಹರೂ ಮೈದಾನ ಕೇವಲ ಹೆಸರಿಗಷ್ಟೇ ಮೈದಾನವಾಗಿದೆ. ಇಲ್ಲಿ ಯಾವುದೇ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಶಾಲಾ ಮಕ್ಕಳಿಗೆ ಆಟ ವಾಡಲೂ ಅವಕಾಶವಿಲ್ಲ. ಆಗೊಮ್ಮೆ- ಈಗೊಮ್ಮೆ ಯಕ್ಷಗಾನ ವಷ್ಟೇ ನಡೆಯು ತ್ತದೆ. ಇದು ವಲಸೆ ಕಾರ್ಮಿಕರ ಅಡ್ಡವಾಗಿ ಮಾರ್ಪಾಡಾಗಿದೆ. ಇದು ಕೂಡ ಸಮರ್ಪಕವಾದ ನಿರ್ವಹಣೆಯಿಲ್ಲದೆ ನಿಷ್ಪಯೋಜಕವಾಗಿದೆ. 

ಸ್ವಾತಂತ್ರ್ಯ ಹೋರಾಟಗಾರರು ಹೆಸರಲ್ಲಿ ರಸ್ತೆ ಕುಂದಾಪುರ ಪುರಸಭೆ ವ್ಯಾಪ್ತಿ ಯಲ್ಲಿಯೂ ಸ್ವಾತಂತ್ರ್ಯ ಹೋರಾಟ ಗಾರರ ಸ್ಮರಣೆ ನಡೆದಿದೆ. ಟಿ.ಟಿ. ರಸ್ತೆ (ತಾತ್ಯಾ ಟೋಪಿ ರಸ್ತೆ), ಜೆಎಲ್‌ಬಿ ರಸ್ತೆ (ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆ), ಶಾಂತಿ ನಿಕೇತನ ಪಕ್ಕ ಭಗತ್‌ ಸಿಂಗ್‌ ರಸ್ತೆ, ಬೋರ್ಡ್‌ ಹೈಸ್ಕೂಲ್‌ ಪಕ್ಕ ಚಂದ್ರಶೇಖರ ಆಝಾದ್‌ ರಸ್ತೆ, ಮಂಗಲ್‌ಪಾಂಡೆ ರಸ್ತೆ ಹೀಗೆ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡಲಾಗಿದೆ. ಆದರೆ ಆ ರಸ್ತೆಗಳಿಗೆ ಪೂರ್ಣ ಹೆಸರಿನಿಂದ ಕರೆಯದೇ ಅರ್ಧ ಹೆಸರಿನಿಂದ ಕರೆಯುವ ಮೂಲಕ ಅನೇಕ ಮಹಾನ್‌ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ಉಂಟು ಮಾಡಲಾಗುತ್ತಿದೆ. 

ಭಾರತೀಯ ಸ್ವಾತಂತ್ರ್ಯ ಹೋರಾಟದ ಅಮರ ಕಥೆಗಳನ್ನು ಬಲ್ಲ ಈ ತಲೆಮಾರಿನ ಯುವಜನತೆ ಈ ಸಂತಸದ ಶುಭ ಘಳಿಗೆಗೆ ಕಾರಣರಾದ ವೀರ ಯೋಧರನ್ನು ಸ್ಮರಿಸುವುದು ಆದ್ಯ ಕರ್ತವ್ಯ ಕೂಡ. ಆದರೆ ಅವರ ಹೆಸರಲ್ಲಿ ಉದ್ಯಾನವನ, ಮೈದಾನ, ರಸ್ತೆಗಳನ್ನು ನಿರ್ಮಿಸಿ, ಅದನ್ನು ಸರಿಯಾಗಿ ನಿರ್ವಹಿಸದಿದ್ದರೆ ಮಾತ್ರ ಅವರಿಗೆ ಅಗೌರವ ತೋರಿದಂತೆ ಸರಿ. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL 2020: ಶುಕ್ರವಾರ ಎದುರಾಗಲಿವೆ ಕರ್ನಾಟಕದ ಆರ್‌ಸಿಬಿ ವರ್ಸಸ್‌ ಕನ್ನಡಿಗರ ಪಂಜಾಬ್‌!

IPL 2020: ಶುಕ್ರವಾರ ಎದುರಾಗಲಿವೆ ಕರ್ನಾಟಕದ ಆರ್‌ಸಿಬಿ ವರ್ಸಸ್‌ ಕನ್ನಡಿಗರ ಪಂಜಾಬ್‌!

ಟಿಪ್ಪರ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು, ಪತಿ ಪ್ರಾಣಾಪಾಯದಿಂದ ಪಾರು

ಮಂಡ್ಯ : ಟಿಪ್ಪರ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು, ಪ್ರಾಣಾಪಾಯದಿಂದ ಪಾರಾದ ಪತಿ

rbi 5

2 ವರ್ಷಗಳ ವರೆಗೆ ಇಎಂಐ ವಿನಾಯಿತಿ; ಸಾಧಕ ಬಾಧಕಗಳೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

ಸೆ.28ರಂದು ಬಂದ್; ರೈತರ ವಿರೋಧದ ನಡುವೆ ಎಪಿಎಂಸಿ ವಿಧೇಯಕ ಮಂಡನೆ

ಕೋವಿಡ್ 19: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಅರೋಗ್ಯ ಸ್ಥಿತಿ ಗಂಭೀರ

ಕೋವಿಡ್ 19: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಅರೋಗ್ಯ ಸ್ಥಿತಿ ಗಂಭೀರ

APMC ಕಾಯ್ದೆಯಿಂದ ರೈತರಿಗೆ ಅನುಕೂಲವಾದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ: ಸಹಕಾರ ಸಚಿವ

APMC ಕಾಯ್ದೆಯಿಂದ ರೈತರಿಗೆ ಅನುಕೂಲವಾದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ: ಸಹಕಾರ ಸಚಿವ

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿವೃತ್ತರನ್ನು ಸರಕಾರಿ ವಾಹನದಲ್ಲೇ ಮನೆಗೆ ಬಿಟ್ಟು ಶುಭ ವಿದಾಯ

ನಿವೃತ್ತರನ್ನು ಸರಕಾರಿ ವಾಹನದಲ್ಲೇ ಮನೆಗೆ ಬಿಟ್ಟು ಶುಭ ವಿದಾಯ

1982: ಸಹಾಯವೇ ಎಲ್ಲವೂ ಆಗಿದ್ದ ಆ ಕಾಲ…

1982: ಸಹಾಯವೇ ಎಲ್ಲವೂ ಆಗಿದ್ದ ಆ ಕಾಲ…

ಮೂರು ತಿಂಗಳಿಂದ ಆ್ಯಂಬುಲೆನ್ಸ್‌ ಸೇವೆ ಇಲ್ಲ

ಮೂರು ತಿಂಗಳಿಂದ ಆ್ಯಂಬುಲೆನ್ಸ್‌ ಸೇವೆ ಇಲ್ಲ

KUDನಿವೃತ್ತ ಬಿಸಿಎಂ ಅಧಿಕಾರಿಯಿಂದ ಭ್ರಷ್ಟಾಚಾರ: ತನಿಖೆಗೆ ನಿರ್ಣಯ

ನಿವೃತ್ತ ಬಿಸಿಎಂ ಅಧಿಕಾರಿಯಿಂದ ಭ್ರಷ್ಟಾಚಾರ: ತನಿಖೆಗೆ ನಿರ್ಣಯ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

ಮಳೆ ಹಾನಿ – ಪ್ರಾಥಮಿಕ ಅಂದಾಜು; ಉಡುಪಿ ಜಿಲ್ಲೆಯಲ್ಲಿ 290 ಕೋ.ರೂ. ನಷ್ಟ

MUST WATCH

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeeshಹೊಸ ಸೇರ್ಪಡೆ

rc-tdy-1

ಬಾಲೆಯರಿಗೆ ಬಲವಂತದ ಕಂಕಣಭಾಗ್ಯ

IPL 2020: ಶುಕ್ರವಾರ ಎದುರಾಗಲಿವೆ ಕರ್ನಾಟಕದ ಆರ್‌ಸಿಬಿ ವರ್ಸಸ್‌ ಕನ್ನಡಿಗರ ಪಂಜಾಬ್‌!

IPL 2020: ಶುಕ್ರವಾರ ಎದುರಾಗಲಿವೆ ಕರ್ನಾಟಕದ ಆರ್‌ಸಿಬಿ ವರ್ಸಸ್‌ ಕನ್ನಡಿಗರ ಪಂಜಾಬ್‌!

ಗಡಿನಾಡಲ್ಲಿ ಬಾಲ್ಯ ವಿವಾಹ ಅವ್ಯಾಹತ!

ಗಡಿನಾಡಲ್ಲಿ ಬಾಲ್ಯ ವಿವಾಹ ಅವ್ಯಾಹತ!

ಬ್ರಿಮ್ಸ್‌ ನಲ್ಲಿ  ವೆಂಟಿಲೇಟರ್‌ಗಳ ಕೊರತೆ

ಬ್ರಿಮ್ಸ್‌ ನಲ್ಲಿ ವೆಂಟಿಲೇಟರ್‌ಗಳ ಕೊರತೆ

ಟಿಪ್ಪರ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು, ಪತಿ ಪ್ರಾಣಾಪಾಯದಿಂದ ಪಾರು

ಮಂಡ್ಯ : ಟಿಪ್ಪರ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು, ಪ್ರಾಣಾಪಾಯದಿಂದ ಪಾರಾದ ಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.