ಪತ್ರಿಕೆ ಹಾಕುವ ಹುಡುಗನಿಗೆ ಸೇನೆ ಸೇರುವ ತವಕ

Team Udayavani, May 2, 2019, 6:00 AM IST

SSLC-KUN

ಕುಂದಾಪುರ: ಚಳಿ, ಮಳೆ, ಗಾಳಿ ಎನ್ನದೆ ದಿನಂಪ್ರತಿ ನಸುಕಿನಲ್ಲಿ ಎದ್ದು ಮನೆ ಮನೆಗೆ ಪತ್ರಿಕೆ ಹಾಕುತ್ತಿದ್ದ ಸುಜನ್‌ ಆಚಾರ್ಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 530 ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಅವರ ಮುಂದಿನ ಗುರಿ ಭಾರತೀಯ ಸೇನೆ ಸೇರುವುದು.

ಇಲ್ಲಿನ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಸುಜನ್‌, ಸಂಸ್ಕೃತದಲ್ಲಿ 99, ಭೌತಶಾಸ್ತ್ರದಲ್ಲಿ 97, ಅಂಕಗಣಿತದಲ್ಲಿ 93 ಅಂಕ ಪಡೆದಿದ್ದಾರೆ.

ಕುಂಭಾಶಿ ವಿನಾಯಕ ನಗರದ ಜನಾರ್ದನ ಆಚಾರ್ಯ- ಕುಸುಮಾ ದಂಪತಿಯ ಮೂವರು ಗಂಡು ಮಕ್ಕಳ ಪೈಕಿ ಸುಜನ್‌ ಎರಡನೆಯವರು. ಎಸೆಸೆಲ್ಸಿಯಲ್ಲಿ 567 ಅಂಕ ಗಳಿಸಿದ್ದರು. 9ನೇ ತರಗತಿಯಲ್ಲಿದ್ದಾಗಲೇ ಪತ್ರಿಕೆ ಹಾಕುವ ಕೈಂಕರ್ಯ ಆರಂಭಿಸಿದ್ದರು. ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿರುವ ಅಣ್ಣ, ಸರಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ತಮ್ಮ – ಇಬ್ಬರಿಗೂ ಸುಜನ್‌ ತನ್ನ ಸಂಪಾದನೆಯಿಂದ ಪಾಕೆಟ್‌ ಮನಿ ನೀಡುವುದುಂಟು.

ಸಂಪಾದನೆ
ತಂದೆಯೊಬ್ಬರ ದುಡಿಮೆಯಿಂದ ಸಂಸಾರ ಸರಿದೂಗಿಸುವುದು ಕಷ್ಟ ಎಂದರಿತು, ರಜಾ ದಿನಗಳಲ್ಲಿ ಸುಜನ್‌ ಬಟ್ಟೆ ಮಳಿಗೆಯಲ್ಲಿಯೂ ದುಡಿಯುತ್ತಾರೆ. ಸಂಪಾದನೆ ಅವರ ವಿದ್ಯಾಭ್ಯಾಸಕ್ಕೆ ಮಾತ್ರವಲ್ಲದೆ ಮನೆ

ಖರ್ಚಿಗೂ ನೆರವಾಗುತ್ತದೆ. ಸರಕಾರಿ ಶಾಲಾ ಕಾಲೇಜು ವಿದ್ಯಾಭ್ಯಾಸವಾದ ಕಾರಣ ಫೀಸು ಹೆಚ್ಚಿರುವುದಿದಿಲ್ಲ. ಇತರ ಖರ್ಚಿಗೆ ನನ್ನ ಸಣ್ಣ ಸಂಪಾದನೆ ಸಾಲುತ್ತದೆ. ಪತ್ರಿಕೆ ಹಾಕುವ ಉದ್ಯೋಗದಲ್ಲಿ ನನಗೆ ಕೀಳರಿಮೆ ಇಲ್ಲ. ಬೆಳಗ್ಗೆ ಬೇಗ ಹಾಸಿಗೆ ಬಿಡಬೇಕೆಂಬ ಉದಾಸೀನವೂ ಇಲ್ಲ ಎನ್ನುತ್ತಾರೆ ಸುಜನ್‌.

ಓದಿಗೆ ಸಮಯ ಪತ್ರಿಕೆ ಹಾಕುವುದು, ಬಟ್ಟೆ ಮಳಿಗೆ ದುಡಿಮೆಯ ನಡುವೆ ಓದಲು ಸಮಯವೆಲ್ಲಿ ಎಂಬ ಪ್ರಶ್ನೆಗೆ ಸುಜನ್‌ ನಗುತ್ತಾರೆ. ಸಂಜೆಯ ಸಮಯವನ್ನು ಸದುಪ
ಯೋಗ ಮಾಡುತ್ತೇನೆ. ಅದೇ ಸಾಕಾಗುತ್ತದೆ. ಜತೆಗೆ ಮನೆ ಮತ್ತು ಕಾಲೇಜಿನಲ್ಲಿ ನನ್ನ ಪರಿ ಸ್ಥಿತಿಗೆ ತಕ್ಕಂತೆ ಉತ್ತಮ ಪ್ರೋತ್ಸಾಹ ದೊರೆತಿದೆ ಎನ್ನುತ್ತಾರೆ. ಇವರ ತಂದೆ ಚಿನ್ನದ ಕೆಲಸ ಮಾಡುತ್ತಾರೆ. ತಾಯಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದು, ಮಕ್ಕಳ ಕಲಿಕೆಗೆ ಪ್ರೇರಣೆಯಾಗಿದ್ದಾರೆ. ಈಗ ಬಿಎಸ್‌ಸಿಗೆ ಸೇರುತ್ತಿದ್ದೇನೆ, ಆದರೆ ಸೇನೆ ಸೇರಲೇಬೇಕು. ಅಕ್ಟೋಬರ್‌ನಲ್ಲಿ ಸೇನಾ ಸೇರ್ಪಡೆಗೆ ಪರೀಕ್ಷೆ ನಡೆಯಲಿದೆ. ಅಲ್ಲಿಯವರೆಗೆ ಕಾಲೇಜು ವಿದ್ಯಾಭ್ಯಾಸ ಎನ್ನುತ್ತಾರೆ ಸುಜನ್‌.

ಅಂಕ ಗಳಿಕೆಗೆ ಇಡೀ ದಿನ ಓದುತ್ತಾ ಕೂರಬೇಕಿಲ್ಲ. ಸಮಯದ ಸದುಪಯೋಗ ಮಾಡಬೇಕು ಅಷ್ಟೇ.
-ಸುಜನ್‌ ಆಚಾರ್ಯ

ಮಾಹಿತಿ ಕೊಡಿ
ನಿಮ್ಮ ಪರಿಸರದಲ್ಲೂ ಇಂತಹ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿದ್ದಲ್ಲಿ 8095192817 ನಂಬರ್‌ಗೆ ವಾಟ್ಸಪ್‌ ಮಾಡಿ. ನಾವು ಅವರನ್ನು ಮಾತನಾಡಿಸಿ ಸಾಧನೆ ಕುರಿತು ಈ ಅಂಕಣದಲ್ಲಿ ಪ್ರಕಟಿಸುತ್ತೇವೆ.
– ಸಂಪಾದಕ

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Jaishankar

Border ಶಾಂತಿ ಮೇಲೆ ಭಾರತ, ಚೀನ ಸಂಬಂಧ: ಜೈಶಂಕರ್‌

1-qwewqe

Jharkhand minister ಅಕ್ರಮ ಹಣ ಪತ್ತೆ: ನಾಳೆ ವಿಚಾರಣೆಗೆ ಬರುವಂತೆ ಆಲಂಗೆ ಇ.ಡಿ. ಸಮನ್ಸ್‌

1-k-r

New record: 29ನೇ ಬಾರಿಗೆ ಎವರೆಸ್ಟ್‌ ಏರಿದ ಕಾಮಿ ರಿತಾ

1-shaa

Triple talaq ಮತ್ತೆ ತರುತ್ತೀರಾ: ರಾಹುಲ್‌ಗೆ ಅಮಿತ್‌ ಶಾ ಪ್ರಶ್ನೆ

1-wqeqeq-eqwq

Haryana CM ವಿಪಕ್ಷಗಳಿಗೆ ಸವಾಲು: ತಾಕತ್ತಿದ್ದರೆ ನೀವೇ ಸಂಖ್ಯಾಬಲ ತೋರಿಸಿ

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಬೈಕ್‌ ಅಪಘಾತ ಸವಾರ ಸಾವು

Road Mishap; ಬೈಕ್‌ ಅಪಘಾತ ಸವಾರ ಸಾವು

Road Mishap ಪಡುಬಿದ್ರಿ; ಬುಲೆಟ್‌ ಬೈಕ್‌ ಅಪಘಾತ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ; ಬುಲೆಟ್‌ ಬೈಕ್‌ ಅಪಘಾತ: ಇಬ್ಬರಿಗೆ ಗಾಯ

Manipal ಪಾರ್ಟ್‌ಟೈಮ್‌ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ

Manipal ಪಾರ್ಟ್‌ಟೈಮ್‌ ಉದ್ಯೋಗದ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಬೈಲೂರು: ಮನೆಯಿಂದ ನಗ, ನಗದು ಕಳವು; ದೂರು ದಾಖಲು

Udupi ಬೈಲೂರು: ಮನೆಯಿಂದ ನಗ, ನಗದು ಕಳವು; ದೂರು ದಾಖಲು

Manipal: ವೈದ್ಯರ ಲ್ಯಾಪ್‌ಟಾಪ್‌ ಕಳವು; ದೂರು ದಾಖಲು

Manipal: ವೈದ್ಯರ ಲ್ಯಾಪ್‌ಟಾಪ್‌ ಕಳವು; ದೂರು ದಾಖಲು

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Jaishankar

Border ಶಾಂತಿ ಮೇಲೆ ಭಾರತ, ಚೀನ ಸಂಬಂಧ: ಜೈಶಂಕರ್‌

1-qwewqe

Jharkhand minister ಅಕ್ರಮ ಹಣ ಪತ್ತೆ: ನಾಳೆ ವಿಚಾರಣೆಗೆ ಬರುವಂತೆ ಆಲಂಗೆ ಇ.ಡಿ. ಸಮನ್ಸ್‌

1-k-r

New record: 29ನೇ ಬಾರಿಗೆ ಎವರೆಸ್ಟ್‌ ಏರಿದ ಕಾಮಿ ರಿತಾ

1-shaa

Triple talaq ಮತ್ತೆ ತರುತ್ತೀರಾ: ರಾಹುಲ್‌ಗೆ ಅಮಿತ್‌ ಶಾ ಪ್ರಶ್ನೆ

1-wqeqeq-eqwq

Haryana CM ವಿಪಕ್ಷಗಳಿಗೆ ಸವಾಲು: ತಾಕತ್ತಿದ್ದರೆ ನೀವೇ ಸಂಖ್ಯಾಬಲ ತೋರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.