ಕೋಡಿ: ಉಪ್ಪು ನೀರಿನಿಂದಾಗಿ ಕುಡಿಯಲೂ ನೀರಿಲ್ಲ

 40ಕ್ಕೂ ಅಧಿಕ ರೈತ ಕುಟುಂಬಗಳು ಕೃಷಿಯಿಂದ ವಿಮುಖ ,ಶಾಶ್ವತ ಕಾಮಗಾರಿ ಅಗತ್ಯ

Team Udayavani, Dec 7, 2020, 12:54 PM IST

ಕೋಡಿ: ಉಪ್ಪು ನೀರಿನಿಂದಾಗಿ ಕುಡಿಯಲೂ ನೀರಿಲ್ಲ

ಕುಂದಾಪುರ, ಡಿ. 6: ಕೋಡಿ ಪ್ರದೇಶದ ಹೊಳೆಯಲ್ಲಿ ಉಪ್ಪುನೀರು ಬರುತ್ತಿರುವ ಕಾರಣ ಈ ಭಾಗದ ಕೃಷಿಗೆ ಹಾನಿಯಾಗಿದ್ದು ಕುಡಿಯುವ ನೀರಿಗೆ ತತ್ವಾರವಾಗಿದೆ. ಬಾವಿಯ ನೀರೂ ಉಪ್ಪಾಗಿದ್ದು ಬದಲಿ ನೀರಿಗೂ ಪರದಾಡುವಂತಾಗಿದೆ.

ಕೋಡಿ, ಮಧ್ಯಕೋಡಿ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು ಸೋನ್ಸ್‌ ಶಾಲೆ ಬಳಿಯೂ ಸಮಸ್ಯೆ ಇದೆ. ಕೋಡಿಯ ಸೋನ್ಸ್‌  ಹಿರಿಯ ಪ್ರಾಥಮಿಕ  ಶಾಲೆಯ ಪೂರ್ವದಿಕ್ಕಿಗೆ  ಇರುವ 25ರಿಂದ 30 ಎಕರೆ ಗದ್ದೆ 2011ರಿಂದಲೂ ಇದೇ ಪರಿಸ್ಥಿತಿ ಅನುಭವಿಸುತ್ತಿದೆ.  ಕುಡಿಯುವ ನೀರಿಗೂ ಬರ ಉಂಟಾಗಿದೆ. ಪುರಸಭೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ  ಪರಿಣಾಮ ಶೂನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು. ಪುರಸಭೆಯವರು ತತ್‌ಕ್ಷಣ ಕೇವಲ 25 ಸಾವಿರ ರೂ. ವೆಚ್ಚದಲ್ಲಿ ತಾತ್ಕಾಲಿಕವಾಗಿ ಉಪ್ಪುನೀರಿಗೆ ತಡೆ ಹಾಕಬಹುದು. ಆದರೆ ಆ ಕೆಲಸವನ್ನು  ಮಾಡದೇ  ಸರಕಾರದಿಂದ ಕೋಟ್ಯಂತರ ರೂ.ಗಳ ಅನುದಾನದ ಕಡೆಗೆ ಬೆರಳು ತೋರಿಸುತ್ತಿದ್ದಾರೆ ಎಂದು ಆರೋಪಿಸುತ್ತಾರೆ ಇಲ್ಲಿನ ನಿವಾಸಿಗಳು.

ಕೃಷಿ ನಾಶ :  ಸುಮಾರು 1.5 ಕಿ.ಮೀ. ದೂರದಷ್ಟು ಹಿನ್ನೀರು ನುಗ್ಗುವ ಕಾರಣ ಕೃಷಿಯೂ ಹಾನಿಗೀಡಾಗುತ್ತಿದೆ. ನದಿಪಾತ್ರದ ಮನೆಗಳ ಸುತ್ತ ಉಪ್ಪುನೀರಿನ ರಾಯಭಾರ ಎಂದಾಗಿದೆ. ಮನೆಗಳ ಸುತ್ತ ಉಪ್ಪು ನೀರು ಹಿನ್ನೀರಿನ ರೂಪದಲ್ಲಿ ಸಂಗ್ರಹವಾಗಿದ್ದು ಸೊಳ್ಳೆಕಾಟದಿಂದ ಇಲ್ಲಿನ ಜನ ರೋಸಿ ಹೋಗಿದ್ದಾರೆ.  ಉಪ್ಪು ನೀರಿನಿಂದ  ಕೃಷಿಭೂಮಿಗಾದ ಅವಸ್ಥೆಯನ್ನು ನೋಡಿ ಇಲ್ಲಿನ ಜನ ಮರುಗುತ್ತಿದ್ದಾರೆ. ಹೊಳೆ  ಬದಿಯಿಂದ 400 ಅಡಿ ದೂರದಲ್ಲಿ  ಇರುವ ಕೋಡಿ ಸುಬ್ರಹ್ಮಣ್ಯ  ಶೇರೆಗಾರರ ಮನೆಯ ಸುತ್ತಲೂ  ಮೂರೂ ಕಡೆಯ ಕೃಷಿ  ಭೂಮಿ ಗದ್ದೆಗಳೆಲ್ಲ  ಹೊಳೆಯ ಉಪ್ಪು ನೀರಿನಿಂದ ಆವರಿಸಿ  ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಕಳಪೆ ಕಾಮಗಾರಿ ಎನ್ನುತ್ತಾರೆ ಅವರು. ತೆಂಗಿನಗಿಡಗಳು ಉಪ್ಪು ನೀರಿನ ಹೊಡೆತಕ್ಕೆ  ಸಾಯಲಾರಂಬಿಸಿವೆ. ಕುಡಿಯುವ  ನೀರಿಲ್ಲದೆ ದನಕರುಗಳು ಹಾಗೂ ಸುತ್ತಲಿನ  ಮನೆಯವರಿಗೂ  ತೊಂದರೆಯಾಗಿದೆ.

ಇದನ್ನೂ ಓದಿ : ದಿಲ್ಲಿ ಚಲೋ ಪ್ರತಿಭಟನೆ ಮತ್ತಷ್ಟು ತೀವ್ರ; ಸಿಂಘು ಗಡಿಗೆ ಸಿಎಂ ಕೇಜ್ರಿವಾಲ್ ಭೇಟಿ

ಕಳೆದ 25 ವರ್ಷಗಳಿಂದಲೂ ಇಲ್ಲಿ ಹಿನ್ನೀರು ನುಗ್ಗುತ್ತದೆ. ಕೃಷಿ ನಾಶವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ. ಆದರೆ ಈ ಬಾರಿ ಅತಿಹೆಚ್ಚು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಆದ್ದರಿಂದ ಅಲ್ಪಸ್ವಲ್ಪ ಕೃಷಿ ಮಾಡುತ್ತಿದ್ದವರೂ ಕೈಬಿಟ್ಟು 50 ಎಕರೆಯಷ್ಟು ಪ್ರದೇಶ ಕೃಷಿಯಿಲ್ಲದೆ ಹಡಿಲು ಬಿದ್ದಿದೆ. ಕೋಡಿ ಚಕ್ರೇಶ್ವರಿ ದೇವಸ್ಥಾನದ ವಠಾರದಿಂದ ಸೋನ್ಸ್‌ ಶಾಲೆಯವರೆಗೆ 40ಕ್ಕೂ ಅಧಿಕ ರೈತ ಕುಟುಂಬಗಳು ಇದೇ ಹಿನ್ನೀರಿನ ಕಾರಣದಿಂದ ಕೃಷಿಯಿಂದ ದೂರವಿದ್ದಾರೆ.

ಶಾಶ್ವತ ಕಾಮಗಾರಿ ಬೇಕುಈ ಪ್ರದೇಶದಲ್ಲಿ ಶಾಶ್ವತ ನದಿದಂಡೆ ಕಾಮಗಾರಿ ಬೇಕು ಎನ್ನುವುದು ಇಲ್ಲಿನವ‌ರ ಬೇಡಿಕೆ. ಈ ಹಿಂದೆ “ಉದಯವಾಣಿ’ “ವಾರ್ಡ್‌ನಲ್ಲಿ ಸುದಿನ’ ಅಭಿಯಾನ ನಡೆಸಿದಾಗಲೂ ಕೋಡಿ ಪ್ರದೇಶದ ಜನ ಉಪ್ಪು ನೀರಿನ ಸಮಸ್ಯೆಯನ್ನು ಉಲ್ಲೇಖೀಸಿದ್ದರು.

ಉಬ್ಬರಇಳಿತ : ಕೋಡಿ ಅಳಿವೆಗೆ ಹೊಂದಿಕೊಂಡಂತಹ ಕೋಡಿ ಹಿನ್ನೀರಿನ ವಠಾರದಲ್ಲಿ ಹುಣ್ಣಿಮೆ, ಅಮಾವಾಸ್ಯೆಗೆ ಸಮುದ್ರದ ಉಬ್ಬರ- ಇಳಿತದ ಸಂದರ್ಭ ಸಮಸ್ಯೆಯಾಗುತ್ತಿದೆ. ಹುಣ್ಣಿಮೆಗೆ ನದಿ ನೀರು ಏರಿಕೆಯಾಗಿ ಕೃಷಿಭೂಮಿ, ಮನೆ ವಠಾರಕ್ಕೆ ನುಗ್ಗುತ್ತದೆ. ಇದು ಸಹಜ ಎನ್ನಬಹುದಾದರೂ ಇನ್ನೊಂದು ಹುಣ್ಣಿಮೆವರೆಗೂ ನೀರು ಇಳಿದು, ಹರಿದು ಹೋಗುವುದಿಲ್ಲ ಎನ್ನುವುದು ಸಮಸ್ಯೆ. ಇದರಿಂದಾಗಿಯೇ ಕುಡಿಯುವ ನೀರಿನ ಬಾವಿಗಳ ನೀರೂ ಕಲುಷಿತವಾಗಿದೆ, ಉಪ್ಪಾಗಿದೆ. ಕೋಡಿ ಭಾಗಕ್ಕೆ ಇನ್ನೂ ಪುರಸಭೆಯ ಕುಡಿಯುವ ನೀರಿನ ಸಂಪರ್ಕ ಆಗದೇ ಇರುವ ಕಾರಣ ಸಮಸ್ಯೆ ಮುಂದುವರಿದಿದೆ.

ಕಿಂಡಿ ಅಣೆಕಟ್ಟುಇಲ್ಲಿನ ದಾಸಪ್ಪ ಹವಾಲ್ದಾರ್‌ ಅವರ ಮನೆ ಸಮೀಪ 30 ವರ್ಷಗಳ ಹಿಂದೆ ಕಿಂಡಿ ಅಣೆಕಟ್ಟು ಒಂದನ್ನು ರಚಿಸಲಾಗಿದೆ. ಅದು ಈಗ ದುರಸ್ತಿಗೆ ಬಂದ ಕಾರಣ ಸಮಸ್ಯೆಯಾಗುತ್ತಿದೆ. ಉಪ್ಪು ನೀರು ತಡೆಗಟ್ಟಲಾಗದೆ ಮನೆಗಳಿರುವ ಜಾಗಕ್ಕೆ ಬರುತ್ತಿದೆ. ಗುತ್ತೇದಾರ್‌ ಮನೆ ಸಮೀಪ ಕಾಮಗಾರಿ ವೈಫ‌ಲ್ಯ ಕೂಡ ಉಪ್ಪುನೀರು ಒಳನುಗ್ಗಲು ಕಾರಣ ಎಂದು ಸ್ಥಳೀಯರು ಬೆರಳು ತೋರಿಸುತ್ತಾರೆ.

ಡಿಸಿ ಗಮನಿಸಲಿಸಣ್ಣ ಮೊತ್ತದಲ್ಲಿ ಪರಿಹಾರ ಒದಗಿಸಲು ಸಾಧ್ಯವಿದ್ದರೂ ಪುರಸಭೆ ದೊಡ್ಡ ಮೊತ್ತದ ಕಾಮಗಾರಿ ಸರಕಾರದಿಂದ ಬರಬೇಕಿದೆ ಎಂದು ದಿನದೂಡುತ್ತದೆ. ಇದರಿಂದಾಗಿ ಕುಡಿಯುವ ನೀರು ಹಾಗೂ ಕೃಷಿಗೆ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಲಿ. ತಾತ್ಕಾಲಿಕ ತುರ್ತು ಕಾಮಗಾರಿಗೆ ಆದೇಶ ನೀಡಲಿ. ಸುಬ್ರಹ್ಮಣ್ಯ ಶೇರೆಗಾರ್ಸಂತ್ರಸ್ತ ರೈತ, ಕೋಡಿ

ಗಮನಕ್ಕೆ ಬಂದಿದೆ : ಕೋಡಿ ನಿವಾಸಿಗಳ ಸಮಸ್ಯೆ ಗಮನಕ್ಕೆ ಬಂದಿದೆ. ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದೆ. ಶಾಶ್ವತ ಕಾಮಗಾರಿ ನಡೆಸಲು ಪುರಸಭೆಯಲ್ಲಿ ಅನುದಾನದ ಕೊರತೆಯಿದೆ. ಸ್ಥಳೀಯರ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗಿದೆ. – ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

 

-ವಿಶೇಷ ವರದಿ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.