ಶ್ರೀ ಕೃಷ್ಣಮಠದ ಗೋಪುರಕ್ಕೆ ಸ್ವರ್ಣಕವಚ ಸಮರ್ಪಣೆ: ವೈಭವದ ಶೋಭಾಯಾತ್ರೆ

Team Udayavani, Jun 2, 2019, 6:01 AM IST

mearavanige

ಉಡುಪಿ: ಶ್ರೀ ಕೃಷ್ಣಮಠದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸುವರ್ಣ ಗೋಪುರ ಸಮರ್ಪಣೆ ಪ್ರಯುಕ್ತ ಶನಿವಾರ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ, ಕಿದಿಯೂರು ವಿಷ್ಣುಮೂರ್ತಿ ಮತ್ತು ವನದುರ್ಗಾ ಸೇವಾ ಸಮಿತಿ ನೇತೃತ್ವದಲ್ಲಿ ಸುವರ್ಣ ಶಿಖರ ಮತ್ತು ರಜತ ಕಲಶದ ಅದ್ಧೂರಿ ಐತಿಹಾಸಿಕ ಕ್ಷಣಗಳ ಮೆರವಣಿಗೆಯು ‘ನ ಭೂತೋ’ ಎಂಬಂತೆ ಸಾಗಿ ಬಂದಿದ್ದು, ಶ್ರೀ ಕೃಷ್ಣ ಮುಖ್ಯಪ್ರಾಣ ಭಕ್ತರು ಸಂಭ್ರಮದಲ್ಲಿ ಮೈ ಮರೆತರು.

ಕಣ್ಮನ ಸೆಳೆದ 1008 ಬೆಳ್ಳಿಯ ಕಲಶಗಳ ಪತಾಕೆಯ 3 ರಥಗಳು

ಶ್ರೀ ಕೃಷ್ಣಮಠದ ಮೂರು ರಥಗಳ ಪತಾಕೆಯನ್ನು 1008 ಬೆಳ್ಳಿಯ ಕಲಶಗಳನ್ನು ಬಳಸಿ ಮಾಡಲಾದ ಅತ್ಯಾಕರ್ಷಕ ಸ್ತಬ್ಧಚಿತ್ರ, ಶ್ರೀ ಕೃಷ್ಣಮಠದ ಗರ್ಭಗುಡಿಯನ್ನು ಹೋಲುವ ತದ್ರೂಪಿ ಕಲಾಕೃತಿ ಮೆರವಣಿಗೆಗೆ ರಂಗು ತಂದಿತು.

ಮೆರವಣಿಗೆಗೆ ಕಳೆ ತಂದ ಟ್ಯಾಬ್ಲೋಗಳು

ವಾದಿರಾಜ ಸ್ವಾಮೀಜಿಗಳ ನೇತೃತ್ವದಲ್ಲಿ ರಚಿತವಾದ ಸಂಪೂರ್ಣ ಚಿನ್ನದ ಹೊದಿಕೆಯನ್ನು ಮಾಡಲಾದ 6 ಅಡಿಯ ಒಂದು, 4 ಅಡಿಯ 2 ಶಿಖರಗಳಮೆರವಣಿಗೆಯಲ್ಲಿ ತರಲಾಯಿತು. ಮೆರವಣಿಗೆಯಲ್ಲಿ ಸುಭದ್ರೆ, ಸಿಡಿ ಮದ್ದುಗಳ ಸದ್ದು, 20 ಮಂದಿಯ ಡೊಳ್ಳು, ಬಿರುದು ಬಾವಲಿ, ತಟ್ಟಿರಾಯ, ಘಟೋತ್ಕಚ, ಬೆಂಗಳೂರು ಇಸ್ಕಾನ್‌ ಸಂಸ್ಥೆ ಭಜನ ತಂಡದ ಭಜನೆ, ಗಣಪತಿ ಸ್ತಬ್ಧಚಿತ್ರ, ರಾಧೇಕೃಷ್ಣ ಟ್ಯಾಬ್ಲೋ, ಆಂಜನೇಯ ಟ್ಯಾಬ್ಲೋ, ಬ್ಯಾಂಡ್‌ಸೆಟ್, 30 ಮಂದಿಯ ಕರಂಬಳ್ಳಿ ಚಂಡೆ, 25 ಮಂದಿಯ ಮಾರ್ಪಳ್ಳಿ ಚೆಂಡೆ, 18 ಮಂದಿಯ ಬೆದ್ರ ಚೆಂಡೆ, 65 ಮಂದಿಯ ಕೇರಳ ಚೆಂಡೆ, 12 ಮಂದಿ ಪಂಚವಾದ್ಯ, 20 ಮಂದಿ ನಾಗಸ್ವರ, 20 ಮಂದಿ ಸ್ಯಾಕ್ಸೋಫೋನ್‌ ವಾದನ, ಕಪ್ಪೆಟ್ಟು ತಂಡದ ವೇಷಧಾರಿಗಳು, ಸಾಯಿ ಚೆಂಡೆ ಕಪ್ಪೆಟ್ಟು, ಕಕ್ಕುಂಜೆ ಬ್ಯಾಂಡ್‌ಸೆಟ್, ಶಿವ ಟ್ಯಾಬ್ಲೋ, ಭೀಮನ ರಥ ಟ್ಯಾಬ್ಲೋ, ಕುಡಿಯುವ ನೀರಿನ ಟೆಂಪೋ, ಕ್ಲೀನಿಂಗ್‌ ಟೆಂಪೋ, ಜಿಲ್ಲಾ ಭಜನ ಒಕ್ಕೂಟದ ಸುಮಾರು 2,000 ಪುರುಷ-ಮಹಿಳೆಯರ ಭಜನ ತಂಡದಿಂದ ಭಜನೆ, ಕಿದಿಯೂರಿನ 600 ಮಂದಿ ಪೂರ್ಣಕುಂಭ ಹಿಡಿದ ಮಹಿಳೆಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿಯ 1,500 ಮಹಿಳೆಯರು, ಪುರುಷರು ಪಾಲ್ಗೊಂಡಿದ್ದು, ಸ್ಥಳೀಯ ಸಾಂಸ್ಕೃತಿಕ ತಂಡಗಳಿಂದ ವಿವಿಧ ಕಲಾಪ್ರಕಾರಗಳ ನೃತ್ಯ ಪ್ರಕಾರ ಜರಗಿತು.

ಜನಸಾಗರದ ನಡುವೆ ಮೆರವಣಿಗೆ

ಯುವಕ, ಯುವತಿಯರು, ಚಿಣ್ಣರು ಆಕರ್ಷಕ ಟ್ಯಾಬ್ಲೋಗಳು ಮತ್ತು ಕೃಷ್ಣಾರ್ಜುನ, ಭೀಮ ಪಾತ್ರಗಳನ್ನು ತಮ್ಮ ಮೊಬೈಲ್ನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಜೋಡುಕಟ್ಟೆಯಿಂದ ಕಲ್ಸಂಕದ ವರೆಗಿನ ಮುಖ್ಯ ರಸ್ತೆಯ ಇಕ್ಕೆಡೆಗಳಲ್ಲಿ ಜನರು ನಿಂತು, ಕುಳಿತುಕೊಂಡು ಮೆರವಣಿಗೆ ವೀಕ್ಷಿಸಿ ಸಂಭ್ರಮಿಸಿದರು. ಮೆರವಣಿಗೆ ಸುಗಮವಾಗಿ ಸಾಗಲು ಆರಕ್ಷಕರು ರಸ್ತೆಯ ಉದ್ದಗಲಕ್ಕೂ ಕರ್ತವ್ಯದಲ್ಲಿ ತೊಡಗಿದ್ದರು.

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.