Udayavni Special

ಕೊರೊನಾ ಭೀತಿ-ಲಸಿಕೆ ಕೊರತೆ ತೀವ್ರ

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಇಳಿಮುಖ­ ಡೆಲ್ಟಾ ಫಸ್ಟ್ ಅಪಾಯ ಸಂಭವ

Team Udayavani, Jul 4, 2021, 8:58 PM IST

963447

ವರದಿ : ಜೀಯು, ಹೊನ್ನಾವರ

ಹೊನ್ನಾವರ: ಕೋವಿಡ್‌ನ‌ ಎಲ್ಲ ನಿರ್ಬಂಧಗಳು ಸೋಮವಾರ ಅಂತ್ಯವಾಗುವುದರಲ್ಲಿದೆ. ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ನೆರೆಯ ರಾಜ್ಯಗಳ ನೇರಸಂಪರ್ಕ ಇರುವ ಕರ್ನಾಟಕ, ವಿಶೇಷವಾಗಿ ನಿತ್ಯ ಎಂಬಂತೆ ಜನ ಓಡಾಡುವ ಕರಾವಳಿ ಭಾಗಕ್ಕೆ ಡೆಲ್ಟಾ ಫಸ್ಟ್ ಅಪಾಯ ಕಾಡುವ ಸಂಭವವಿದೆ. ಇತ್ತ ಲಸಿಕೆ ನೀಡಿಕೆಯಲ್ಲೂ ಯಾವುದೇ ವೇಗ ಕಾಣುತ್ತಿಲ್ಲ. ಬೇರೆ ಜಿಲ್ಲೆಯ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರ 780 ರೂ. ಮಾತ್ರ ಪಡೆದು ಸೇವಾ ಶುಲ್ಕವಿಲ್ಲದೆ ಲಸಿಕೆ ಕೊಡುತ್ತೇನೆ ಎಂದರೆ ಉಸ್ತುವಾರಿ ಸಚಿವರು ಬೇಡ ಎನ್ನುತ್ತಿದ್ದಾರೆ.

84 ದಿನ ಪೂರೈಸಿದ 20 ಸಾವಿರ ಜನರಿಗೆ ಇನ್ನೂ ಲಸಿಕೆ ಕೊಡುವುದು ಬಾಕಿ ಇದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 49ಕ್ಕೆ ಇಳಿದಿದ್ದರೂ ಇಬ್ಬರು ಮೃತಪಟ್ಟಿದ್ದಾರೆ. ಸಾವು ಕಡಿಮೆಯಾಗುತ್ತಿಲ್ಲ. ಕುಮಟಾ, ಹೊನ್ನಾವರದಲ್ಲಿ ಹೆಚ್ಚು ಜನ ಆಸ್ಪತ್ರೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 503 ಸಕ್ರೀಯ ಪ್ರಕರಣಗಳಿದ್ದು ಸಾವಿನ ಸಂಖ್ಯೆ 708ಕ್ಕೆ ಏರಿದೆ. ಇತ್ತ ಪದವಿ ಕಾಲೇಜುಗಳು ಆರಂಭವಾಗಲಿದ್ದು, ಜಿಲ್ಲೆಯ 11 ತಾಲೂಕುಗಳಲ್ಲಿ 50 ಸಾವಿರದಷ್ಟು ವಿದ್ಯಾರ್ಥಿಗಳು ಪದವಿ ಓದುತ್ತಿದ್ದಾರೆ. ಇವರಿಗೆ ಸೋಮವಾರದೊಳಗೆ ಕಾಲೇಜು ಆರಂಭವಾಗುವ ಜು.7 ರೊಳಗೆ ಲಸಿಕೆ ಕೊಟ್ಟು ಮುಗಿಸಬೇಕಾಗಿದೆ. ಇದರ ಹೊರತಾಗಿ ಉದ್ಯೋಗ ಅರಿಸಿ ಬೆಂಗಳೂರು, ಮುಂಬೈಗೆ ಹೋಗುವ ಪದವೀಧರರು, ಮನೆಯಲ್ಲಿ ಕೆಲಸ ಮಾಡುತ್ತಿದ್ದವರು ಲಾಕ್‌ಡೌನ್‌ ಮುಗಿದ ಕಾರಣ ಬೆಂಗಳೂರಿಗೆ ಹೋಗಲು ಸಿದ್ಧರಾಗುತ್ತಿದ್ದಾರೆ.

ವ್ಯಾಪಾರ, ವಾಣಿಜ್ಯ ಮಳಿಗೆಗಳು ತೆರೆಯಲಿವೆ. ಇಲ್ಲಿ ಕೆಲಸ ನಿರ್ವಹಿಸುವವರಿಗೂ ಲಸಿಕೆ ಬೇಕು. ದಿನಕ್ಕೆ 100-200 ಡೋಸ್‌ ಪ್ರತಿ ತಾಲೂಕಿಗೆ ಬಂದರೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗುತ್ತದೆ. ಕೆಲವರು ನಸುಕಿನ 4ರಿಂದ ಲಸಿಕೆಗೆ ಸರದಿಯಲ್ಲಿ ನಿಂತು ಮಧ್ಯಾಹ್ನದೊಳಗೆ ಲಸಿಕೆ ಮುಗಿದು ಸಪ್ಪೆ ಮುಖಮಾಡಿಕೊಂಡು ಮನೆಗೆ ಹೋಗುತ್ತಿದ್ದಾರೆ. ಎರಡನೇ ಡೋಸ್‌ ಲಸಿಕೆಗೆ ಕಾದಿದ್ದವರಿಗೆ ಸಂದೇಶವೂ ಬರುತ್ತಿಲ್ಲ. ಈ ತಿಂಗಳಿಂದ ಜಿಲ್ಲೆಗೆ ಸುಮಾರು 1ಲಕ್ಷ ಡೋಸ್‌ ಪೂರೈಕೆಯಾದರೆ ಕೊರೊನಾ 3ನೇ ಅಲೆಯ ಒಳಗೆ ಲಸಿಕೆ ಕೊಟ್ಟು ಮುಗಿಸಬಹುದಾಗಿದೆ. ದಿನಕ್ಕೆ 2-3ಸಾವಿರ ಲಸಿಕೆ ಬಂದರೆ 11 ತಾಲೂಕುಗಳ 15 ಲಕ್ಷ ಜನಸಂಖ್ಯೆಯಿರುವ ಈ ಜಿಲ್ಲೆಯಲ್ಲಿ ಎಲ್ಲರಿಗೂ ಕೊಟ್ಟು ಪೂರೈಸಲು ಎಷ್ಟು ಕಾಲ ಬೇಕಾಗಬಹುದು. ಜಿಲ್ಲೆಯ ಜನಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಜನರಿಗೆ ಮೊದಲ ಡೋಸ್‌ ನೀಡಲಾಗಿದ್ದು 1ಲಕ್ಷ ಜನರಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ. ಬಾಕಿ ಇರುವ 4ಲಕ್ಷ ಜನರಿಗೆ 2ನೇ ಡೋಸ್‌ ಲಸಿಕೆ ಬೇಕು. ಅಭಿಯಾನ ನಡೆದ ಒಂದು ದಿನ ಹೆಚ್ಚು ಜನಕ್ಕೆ ಲಸಿಕೆ ಕೊಟ್ಟರೆ ಸಾಲುವುದಿಲ್ಲ.

ಕೋವಿಶೀಲ್ಡ್‌ ಲಸಿಕೆಯನ್ನು 84 ದಿನದಿಂದ 112 ದಿನಗಳ ಒಳಗೆ ಪಡೆದುಕೊಳ್ಳಬೇಕು. ಕೋವ್ಯಾಕ್ಸಿನ್‌ ಮಾತ್ರ 28-42ದಿನಗಳ ಒಳಗೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ವೈದ್ಯರು. ಯೋಗ ದಿನಾಚರಣೆ ದಿನ ಜಿಲ್ಲೆಯಲ್ಲಿ 38ಸಾವಿರ ಜನರಿಗೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗಿದೆ. ಇವರಲ್ಲಿ ಮೊದಲ ಡೋಸ್‌ ಪಡೆದವರೇ ಹೆಚ್ಚು. 84 ದಿನಗಳ ನಂತರ ಮತ್ತೆ 30 ಸಾವಿರ ಜನರಿಗೆ ಕೋವಿಡ್‌ ಲಸಿಕೆ ನೀಡಬೇಕು. ಹೇಗೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಮಧ್ಯೆ ಕೆಲವು ಹಾಲಿ, ಮಾಜಿ ಶಾಸಕರು ತಮ್ಮ ಆತ್ಮೀಯರಿಗಾಗಿ 100-200 ಡೋಸ್‌ ಲಸಿಕೆ ಕೊಡಿಸಿದ್ದಿದೆ. ಕೆಲವು ಆಡಳಿತ ಪಕ್ಷದ ಕಾರ್ಯಕರ್ತರಂತೂ ಲಸಿಕೆ ಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂದು ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾರೆ. ಆಡಳಿತ ಪಕ್ಷದವರು ಲಸಿಕೆಯನ್ನು ರಾಜಕಾರಣಕ್ಕೆ ಬಳಸುವುದು ಆರೋಗ್ಯಕರವಲ್ಲ. ಮೊದಲು ಜಿಲ್ಲೆಯ ಎಲ್ಲ ಜನ ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಡಳಿತ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಬಗೆಹರಿಸಬೇಕಾಗಿದೆ.

ಟಾಪ್ ನ್ಯೂಸ್

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

dghtrytr

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಅಧಿಕೃತ ಆದೇಶ

fgdfgdfgd

ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಬೋಗದ ವಸ್ತುಗಳಂತೆ ನೋಡುತ್ತಾರೆ : ನಟಿ ಮಹಿಕಾ ಶರ್ಮಾ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

dryryry5

ಬಿಎಸ್‌ವೈ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಕಾರಣ : ಮಾಜಿ ಸಿಎಂ ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ggyyrty

ನೂತನ ಸಿಎಂ ಬಳಿಕ ಸಂಪುಟ ಪುನಾರಚನೆ ಸಾದ್ಯತೆ ಬಗ್ಗೆ ಸಚಿವ ಶಿವರಾಮ್ ಹೆಬ್ಬಾರ ಹೇಳಿದ್ದೇನು?

ಕುಮಟಾ: ಈಜಲು ತೆರಳಿದ ಅಸ್ವಸ್ಥ

ಕುಮಟಾ: ಈಜಲು ತೆರಳಿದ್ದ ಯುವಕ ಅಸ್ವಸ್ಥ

Untitled-1

ಮಳೆಗೆ ಧರೆ ಕುಸಿತ  ಶಿರಸಿ ಕುಮಟಾ‌ ಮಾರ್ಗ ಸಂಚಾರ ದೇವರಿಗೆ ಪ್ರೀತಿ.!

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

ಬೈಕ್‌ಗಳ ನಡುವೆ ಮುಖಾಮುಖಿ ಅಪಘಾತ: ಮೂವರು ಗಂಭೀರ ಗಾಯ

ಬೈಕ್‌ಗಳ ನಡುವೆ ಮುಖಾಮುಖಿ ಅಪಘಾತ: ಮೂವರು ಗಂಭೀರ ಗಾಯ

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

dghtrytr

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಅಧಿಕೃತ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.