ಕಾರವಾರ: 20 ಕೋವಿಡ್‌ ಪೀಡಿತರು ಗುಣಮುಖ

Team Udayavani, May 24, 2020, 10:54 AM IST

ಕಾರವಾರ: 20 ಕೋವಿಡ್‌ ಪೀಡಿತರು ಗುಣಮುಖ

ಕಾರವಾರ: ಕಿಮ್ಸ್‌ ಆಸ್ಪತ್ರೆಯಲ್ಲಿ ಗುಣಮುಖರಾದವರಿಗೆ ಹೂ ಗುಚ್ಛ ನೀಡಿ ಬೀಳ್ಕೊಡಲಾಯಿತು.

ಕಾರವಾರ: ಕೋವಿಡ್‌ -19 ರಿಂದ ಗುಣಮುಖರಾದ ಮಕ್ಕಳೂ ಸೇರಿದಂತೆ, ಓರ್ವ ವೃದ್ಧರು ಹಾಗೂ ಯುವತಿ, ಯುವಕ, ವಯಸ್ಕರೂ ಸೇರಿ ಒಟ್ಟು 20 ಜನರನ್ನು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್‌ ಹೂಗುಚ್ಛ ನೀಡಿ ಬೀಳ್ಕೊಟ್ಟರು. ವೈದ್ಯರ ಮತ್ತು ನರ್ಸ್‌ಗಳ ಸೇವೆ ಕೊಂಡಾಡಲಾಯಿತು. ಕಿಮ್ಸ್‌ ಕೋವಿಡ್‌ -19 ಪ್ರತ್ಯೇಕ ವಾರ್ಡ್‌ನಲ್ಲಿ 53 ಜನ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 20 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇದರಲ್ಲಿ ಬಹುತೇಕರು ಮೇ 7 ಮತ್ತು ಮೇ 8 ರಂದು ದಾಖಲಾಗಿದ್ದರು. ಅನೇಕ ಅಡೆತಡೆ ಹಾಗೂ ಕೆಲ ಮುಖಂಡರ ಆಕ್ಷೇಪದ ನಡುವೆಯೂ ಎದೆಗುಂದದೆ ಕಿಮ್ಸ್‌ ಸಿಬ್ಬಂದಿ ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನೀಡಿತ್ತು. ಕೋವಿಡ್‌ ಪೀಡಿತರನ್ನು ಗುಣಮುಖರನ್ನಾಗಿ ಸಹ ಮಾಡಿತು. ಈ ವೈಜ್ಞಾನಿಕ ಮನಸ್ಸು ಮತ್ತು ದೃಢ ನಿಶ್ಚಯವನ್ನು ಜಿಲ್ಲಾಡಳಿತ, ಕಿಮ್ಸ್‌ ಸಿಬ್ಬಂದಿ ಜೊತೆ ಮಾಡಿತ್ತು ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್‌ ಹೇಳಿದರು. ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣದಲ್ಲಿದೆ. ಈಗ ಹೊರರಾಜ್ಯಗಳಿಂದ ಬಂದವರು ಕೋವಿಡ್‌ ಪೀಡಿತರಾಗುತ್ತಿದ್ದು, ಅದಕ್ಕೆ ಆತಂಕಪಡಬೇಕಿಲ್ಲ. ಅವರು ಹೊರ ರಾಜ್ಯದಿಂದ ಉತ್ತರ ಕನ್ನಡ ಪ್ರವೇಶಿಸುವಾಗ ಸಾಂಸ್ಥಿಕ ಕ್ವಾರಂಟೈನ್‌  ಆಗಿರುವ ಕಾರಣ, ಕೋವಿಡ್‌ ಸಮುದಾಯಕ್ಕೆ ಹೋಗಿಲ್ಲ. ಹಾಗಾಗಿ ಕೋವಿಡ್‌ಗೆ ಭಯಪಡಬೇಕಿಲ್ಲ. ಈಗ ಆಸ್ಪತ್ರೆಯಲ್ಲಿರುವ ಉಳಿದ 33 ಜನರು ಗುಣಮುಖರಾಗಲಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ರವಿವಾರದ ಲಾಕ್‌ ಡೌನ್‌ಗೆ ಜನ ಸಹಕರಿಸಬೇಕು ಎಂದರು.

ಕೋವಿಡ್‌ನಿಂದ ಗುಣಮುಖರಾದವರಲ್ಲಿ ಎಲ್ಲರೂ ಭಟ್ಕಳದವರೇ ಆಗಿದ್ದು, ಅವರು ಆಸ್ಪತ್ರೆ ವಾರ್ಡ್‌ನಲ್ಲಿ ದಾದಿಯರು ಚೆನ್ನಾಗಿ ನೋಡಿಕೊಂಡರು. ಆರಂಭದಲ್ಲಿ
ಆಸ್ಪತ್ರೆ ವಾತಾವರಣಕ್ಕೆ ಒಗ್ಗಿಕೊಳ್ಳಲು ಕಷ್ಟವಾಯಿತು. ನಂತರ ಎಲ್ಲವೂ ಸರಿಯಿತ್ತು. ಚಿಕಿತ್ಸೆಗೆ ನಾವು ಸಹ ಸಹಕಾರ ನೀಡಿದೆವು ಎಂದು ಹೆಸರು ಹೇಳಲು ಇಚ್ಚಿಸದ ಕೋವಿಡ್‌ ಮುಕ್ತರೊಬ್ಬರು ಹೇಳಿದರು. ವಿಶೇಷವಾಗಿ ಜಿಪಂ ಸಿಇಒ ಎಂ.ರೋಶನ್‌ ಚಿಕಿತ್ಸೆಗೆ ಹೇಗೆ ಸಹಕರಿಸಬೇಕೆಂದು ಆತ್ಮವಿಶ್ವಾಸ ತುಂಬಿದರು. ಅವರ ಮಾತುಗಳು ನಮಗೆ ಸ್ಫೂ ರ್ತಿ ತಂದವು ಎಂದರು.

ಕಿಮ್ಸ್‌ ನಿರ್ದೇಶಕ ಗಜಾನನ ನಾಯಕ, ವೈದ್ಯರ ಹಾಗೂ ನರ್ಸ್‌ಗಳ ಸಾಹಸ, ಧೈರ್ಯ ಸ್ಮರಿಸಿದರು. ಡಿಎಚ್‌ಓ ಅಶೋಕಕುಮಾರ್‌, ಸಿಇಓ ಮೊಹಮ್ಮದ್‌ ರೋಶನ್‌, ಎಸ್ಪಿ ಶಿವಪ್ರಕಾಶ್‌ ದೇವರಾಜು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ದೇವಸಮುದ್ರ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಜಾಂಬವಂತರ ದರ್ಶನ; ಭಯಭೀತರಾದ ನಾಗರೀಕರು

Bears: ದೇವಸಮುದ್ರ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಜಾಂಬವಂತರ ದರ್ಶನ, ಭಯಭೀತರಾದ ನಾಗರಿಕರು

Threat: ದೆಹಲಿಯಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ… ತಪಾಸಣೆ

Threat: ದೆಹಲಿಯಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ… ತಪಾಸಣೆ

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

ಅಪಘಾತ ನಡೆಸಿ ಕೊಲ್ಲುವ ಯತ್ನ ವಿಫಲ… ಕೊನೆಗೆ ಗೆಳೆಯನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ

Shocking: ಅಪಘಾತ ನಡೆಸಿದರೂ ಸಾಯದ ಪತಿ… ಗೆಳೆಯನ ಜೊತೆ ಸೇರಿ ಗುಂಡು ಹಾರಿಸಿ ಕೊಂದ ಪತ್ನಿ

4-udupi

Udupi: ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಪಕ್ಷದ ಮುಖಂಡ ಚೇರ್ಕಾಡಿ ವಿಜಯ್ ಹೆಗ್ಡೆ ನಿಧನ

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

ಮುಂಗಾರು ಅಧಿವೇಶನದ ಬಳಿಕ ಅಜಿತ್ ಬಣದ ಕೆಲವು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ: Rohit Pawar

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

ದಾಂಡೇಲಿಯ ಟೌನಶಿಪ್’ನ ಮನೆಯೊಂದರಲ್ಲಿ ಕಳ್ಳತನದಾಂಡೇಲಿಯ ಟೌನಶಿಪ್’ನ ಮನೆಯೊಂದರಲ್ಲಿ ಕಳ್ಳತನ

Theft Case ದಾಂಡೇಲಿಯ ಟೌನ್ ಶಿಪ್’ನ ಮನೆಯೊಂದರಲ್ಲಿ ಕಳ್ಳತನ

Dandeli ಜಾನುವಾರು ಅಕ್ರಮ ಸಾಗಾಟ: ವಾಹನ ಸಹಿತ ಜಾನುವಾರು ವಶ

Dandeli ಜಾನುವಾರು ಅಕ್ರಮ ಸಾಗಾಟ: ಪೊಲೀಸರಿಂದ ವಾಹನ, ಜಾನುವಾರು ವಶಕ್ಕೆ

1-sadadasdsd

PM ಮೋದಿಯವರೊಂದಿಗೆ ಕೃಷಿ ಸಂವಾದಕ್ಕೆ ಯಲ್ಲಾಪುರದ ಲತಾ ಹೆಗಡೆ ಆಯ್ಕೆ

Bhatkal ಕೋಣಗಳ ಅಕ್ರಮ ಸಾಗಾಟ: ಇಬ್ಬರ ಬಂಧನ

Bhatkal ಕೋಣಗಳ ಅಕ್ರಮ ಸಾಗಾಟ: ಇಬ್ಬರ ಬಂಧನ

MUST WATCH

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

ಹೊಸ ಸೇರ್ಪಡೆ

Udayavani Campaign: ತಡವಾದ್ರೆ ಹೇಳಲು ನೆಟ್ವರ್ಕಿಲ್ಲ;ಕಾಡ ಮಧ್ಯೆ ನಡೆಯಲು ಭಯ!

Udayavani Campaign: ತಡವಾದ್ರೆ ಹೇಳಲು ನೆಟ್ವರ್ಕಿಲ್ಲ;ಕಾಡ ಮಧ್ಯೆ ನಡೆಯಲು ಭಯ!

ದೇವಸಮುದ್ರ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಜಾಂಬವಂತರ ದರ್ಶನ; ಭಯಭೀತರಾದ ನಾಗರೀಕರು

Bears: ದೇವಸಮುದ್ರ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಜಾಂಬವಂತರ ದರ್ಶನ, ಭಯಭೀತರಾದ ನಾಗರಿಕರು

Threat: ದೆಹಲಿಯಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ… ತಪಾಸಣೆ

Threat: ದೆಹಲಿಯಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ… ತಪಾಸಣೆ

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

Pakistan ಜನರು ಕಂಗಾಲು-ಒಂದು ಕೆಜಿ ಟೊಮೆಟೋ ಬೆಲೆ 200, ಲಿಂಬೆಹಣ್ಣು ಕೆಜಿಗೆ 480 ರೂ.!

ಅಪಘಾತ ನಡೆಸಿ ಕೊಲ್ಲುವ ಯತ್ನ ವಿಫಲ… ಕೊನೆಗೆ ಗೆಳೆಯನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ

Shocking: ಅಪಘಾತ ನಡೆಸಿದರೂ ಸಾಯದ ಪತಿ… ಗೆಳೆಯನ ಜೊತೆ ಸೇರಿ ಗುಂಡು ಹಾರಿಸಿ ಕೊಂದ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.