ಬಾವಿ ನೀರಿಗಾಗಿ ಅಂಬೆಜೂಗ್‌ ಹಳ್ಳ ದಾಟಬೇಕು


Team Udayavani, May 15, 2019, 2:09 PM IST

uk-tdy-2..

ಕಾರವಾರ: ಹಳ್ಳದಾಟಿ ಕೊಡ ಹೊತ್ತು ನೀರು ತರುತ್ತಿರುವುದು.

ಕಾರವಾರ: ಅಂಬೆಜೂಗ್‌ ಮಜಿರೆಯ 200 ಕುಟುಂಬಗಳ ಮಹಿಳೆಯರು ಕುಡಿಯುವ ನೀರಿಗಾಗಿ ನಿತ್ಯ ಹಳ್ಳ ದಾಟಿ ನೀರು ಹೊತ್ತು ತರುವ ಸಂಕಷ್ಟ ದಶಕಗಳಿಂದ ಮುಂದುವರಿದಿದೆ. ಬೇಸಿಗೆಯಲ್ಲಿ ಟ್ಯಾಂಕರ್‌ ನೀರು ಕಿನ್ನರ ತಲುಪಿದರೂ, ಈ ಭಾಗದ ಮಹಿಳೆಯರು ಹಳ್ಳ ದಾಟುವುದ ಬಿಟ್ಟಿಲ್ಲ.

ತಾಲೂಕಿನ ಕಿನ್ನರ ಗ್ರಾಪಂ ವ್ಯಾಪ್ತಿಯ ಅಂಬೆಜೂಗ್‌, ಭಾಗವಾಡ, ಚಾಮಕುಳಿವಾಡ, ಝಾಡಕಿ ಮಜಿರೆಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದಾರೆ. ಅಂಬೆಜೂಗ ಮತ್ತು ದಿಗಾಳಿ ಮಜಿರೆ ಮಧ್ಯೆ ದೊಡ್ಡ ಹಳ್ಳವೊಂದು ಹರಿಯುತ್ತಿದ್ದು, ಹಳ್ಳ ದಾಟಿಯೇ ದಿಗಾಳಿ ಮಜಿರೆ ತಲುಪಬೇಕಿದೆ. ಕಾರಣ ದಿಗಾಳಿಯಲ್ಲಿ ಹನಮಬಾವಿ ಎಂಬ ಸಿಹಿ ನೀರಿನ ಬಾವಿ ಇದೆ. ಅಂಬೆಜೂಗ ಮಜಿರೆಯಲ್ಲಿ ಸುಮಾರು 200 ಮನೆಗಳಿವೆ. ಅಂಬೆಜೂಗ ಮಜಿರೆಯ ಭಾಗವಾಡ, ಚಾಮಕುಳಿವಾಡ, ಝಾಡಕಿಯ 200 ಕುಟುಂಬಗಳ ಜನರು ಬಾವಿ ನೀರಿಗಾಗಿ ದಿನನಿತ್ಯ ಹೊಳೆ ದಾಟುತ್ತಾರೆ. ಇದು ದಶಕಗಳಿಂದ ನಡೆದು ಬಂದಿದೆ. ಈ ಕಷ್ಟ ತಪ್ಪಿಸಲು ಅಂಬೆಜೂಗ್‌ ಮತ್ತು ದಿಗಾಳಿ ಮಧ್ಯೆ ಒಂದು ತೂಗು ಸೇತುವೆ ಅಥವಾ ಕಿರು ಸೇತುವೆ ನಿರ್ಮಿಸಿಕೊಡಬೇಕು ಎಂಬುದು ಅವರ ಬೇಡಿಕೆ. ಆದರೆ ಇದು 40 ರಿಂದ 50 ಲಕ್ಷ ವೆಚ್ಚದ ಯೋಜನೆ ಆದ ಕಾರಣ ತಾಪಂ ಮತ್ತು ಜಿಪಂ ಎದುರು ಬೇಡಿಕೆ ಇಟ್ಟಿದೆ. ಬೇಡಿಕೆ ಸರ್ಕಾರವನ್ನು ತಲುಪಿಲ್ಲ.

ಈಗ ಟ್ಯಾಂಕರ್‌ ನೀರು ಬರುತ್ತಿದೆ: ಕಿನ್ನರ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಬೇಸಿಗೆಯಲ್ಲಿ ನೀರು ಪೂರೈಸಲಾಗುತ್ತಿದೆ. ಆದರೆ ಉಳಿದ ದಿನಗಳಲ್ಲಿ ಜನರು ಬಾವಿ ನೀರನ್ನು ಅವಲಂಬಿಸಿದ್ದಾರೆ. ಅಂಬೆಜೂಗ ಹಳ್ಳವನ್ನು ಮಹಿಳೆಯರು ಮತ್ತು ಪುರುಷರು ಸಹ ದಾಟಿ ಹನಮಬಾವಿಯಿಂದ ಸಿಹಿ ನೀರು ತರುವ ಕಷ್ಟ ಮುಂದುವರಿದಿದೆ. ಜನರು ಕುಡಿಯುವ ನೀರಿಗಾಗಿ ಹಳ್ಳ ದಾಟುವುದು ರೂಢಿಯಾಗಿದೆ. ದಿಗಾಳಿ ಮಜಿರೆಗೆ ರಸ್ತೆ ಮಾರ್ಗವೂ ಇದೆ. ಅದು 2 ಕಿ.ಮೀ. ದೂರ ಸಾಗಬೇಕಾದ ಕಾರಣ ಜನರು 300 ಮೀಟರ್‌ ದೂರವನ್ನು ಹಳ್ಳ ದಾಟಿ ದಿಗಾಳಿ ಮಜಿರೆ ತಲುಪಿ ನೀರು ತರುವುದು ರೂಢಿ ಮಾಡಿಕೊಂಡಿದ್ದಾರೆ.

ಜಿಲ್ಲಾ ಕೇಂದ್ರದ ಸಮೀಪವೇ ಇರುವ ಕಿನ್ನರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಬವಣೆ ಪಡುವುದು ಮುಂದುವರಿದಿದೆ. ಕೆರವಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಹಂತದಲ್ಲಿದ್ದರೂ, ಸಣ್ಣ ಸಣ್ಣ ಮಜಿರೆಗಳಿಗೆ, ನದಿ ದಂಡೆಯ ಹಿನ್ನೀರಿನ ಗ್ರಾಮ ಮಜಿರೆಗಳಿಗೆ ಬಾವಿ ನೀರು ಕುಡಿಯುವ ಮೂಲಜಲವಾಗಿದೆ. ರಾಜ್ಯ ಸರ್ಕಾರ ಮತ್ತು ಜಿಪಂ ಅಂಬೆಜೂಗ ಗ್ರಾಮಕ್ಕೆ ಕಿರು ಸೇತುವೆ ಮಾಡಿಕೊಟ್ಟರೆ ಸಾಕು. ನಾವು ಹಳ್ಳ ದಾಟುವ ಕಷ್ಟ ತಪ್ಪುತ್ತದೆ ಎಂದು ಭಾಗವಾಡ ನಿವಾಸಿ ಶೈಲಜಾ ತಳೇಕರ್‌ ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

13-Kumbale

ಪತ್ನಿಯ ಸೀಮಂತಕ್ಕಾಗಿ 2 ದಿನಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದ ಯುವಕ ಅಪಘಾತದಲ್ಲಿ ಸಾವು

bjpState Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

State Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ: ವಿಜಯೇಂದ್ರ

B. Y. Vijayendra ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ

Frank Duckworth, co-inventor of DLS method passed away

Frank Duckworth: ‘ಡಿಎಲ್‌ಎಸ್‌ ನಿಯಮ’ದ  ಫ್ರಾಂಕ್‌ ಡಕ್‌ವರ್ತ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅ.15ರಿಂದ ಶಿರಸಿ-ಕುಮಟಾ ರಸ್ತೆಯಲ್ಲಿ ಘನ ವಾಹನಗಳಿಗೆ ನಿಷೇಧ: ಜಿಲ್ಲಾಧಿಕಾರಿ ಆದೇಶ

DC Order; ಅ.15ರಿಂದ ಶಿರಸಿ-ಕುಮಟಾ ರಸ್ತೆಯಲ್ಲಿ ಘನ ವಾಹನಗಳಿಗೆ ನಿಷೇಧ

4-sirsi

Sirsi: ಫಂಡರಾಪುರಕ್ಕೆ ವಿಶೇಷ ರೈಲ್ವೆ: ಕಾಗೇರಿ ಮನವಿಗೆ ಕೇಂದ್ರ ಸಚಿವರ ತಕ್ಷಣ ಸ್ಪಂದನೆ

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Mundagodu-police

Fraud: ಯುವತಿಯಿಂದ 18 ಲಕ್ಷ ರೂ. ಪಡೆದು ವಂಚಿಸಿದ ಕಾನ್ಸ್‌ಟೇಬಲ್‌

Ankola BusStand ಮತ್ತೆ ಕಳ್ಳರ ಕರಾಮತ್ತು; ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನ

Ankola Bus Stand ಮತ್ತೆ ಕಳ್ಳರ ಕರಾಮತ್ತು; ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನ

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Compulsory military service for ultra-conservatives: Israel court

ಕಟ್ಟರ್‌ ಸಂಪ್ರದಾಯವಾದಿಗಳಿಗೂ ಕಡ್ಡಾಯ ಸೇನೆ ಸೇವೆ: ಇಸ್ರೇಲ್‌ ಕೋರ್ಟ್‌

13-Kumbale

ಪತ್ನಿಯ ಸೀಮಂತಕ್ಕಾಗಿ 2 ದಿನಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದ ಯುವಕ ಅಪಘಾತದಲ್ಲಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.