ಸೋಂಕಿತರು ಮೊದಲು ಚಿಕಿತ್ಸೆ ಪಡೆದುಕೊಳ್ಳಲಿ

ಜೀವವಿದ್ದರೆ ಜೀವನ-ಕೈಮುಗಿದು ಜನರಲ್ಲಿ ವಿನಂತಿಸಿದ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಟಾರ್‌

Team Udayavani, May 12, 2021, 12:54 PM IST

hjfgk

ಹೊನ್ನಾವರ: ಕೋವಿಡ್‌ ಲಕ್ಷಣ ಕಂಡಕೂಡಲೇ ಆಸ್ಪತ್ರೆಗಳಿಗೆ ಬನ್ನಿ, ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಲಾಕ್‌ಡೌನ್‌ ವಿಧಿಸಿದ ಕಾರಣ ಎಲ್ಲರಿಗೂ ತೊಂದರೆಯಾಗಿದೆ ಎಂದು ನನಗೂ ಗೊತ್ತು, ಸರ್ಕಾರಕ್ಕೂ ಗೊತ್ತು. ಜೀವವಿದ್ದರೆ ಜೀವನವಲ್ಲವೇ, ಆದ್ದರಿಂದ ಅನಿವಾರ್ಯವಾಗಿ ಜೀವ ಉಳಿಸುವ ಕ್ರಮವಾಗಿ ಲಾಕ್‌ಡೌನ್‌ ವಿಧಿಸಿದ್ದು ಜನರ ಹಿತಕ್ಕಾಗಿಯೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌ ಹೇಳಿದರು.

ಕಾಯಿಲೆ ತೀವ್ರವಾಗುವವರೆಗೆ ಮನೆಯಲ್ಲಿ ಉಳಿದು ಕೊನೆಯ ಕ್ಷಣಕ್ಕೆ ಆಸ್ಪತ್ರೆಗೆ ಬಂದರೆ ನಮಗೂ ತೊಂದರೆ, ನಿಮಗೂ ತೊಂದರೆ. ವೈದ್ಯರು, ನರ್ಸ್‌, ಸ್ಟಾಪ್‌ಗ್ಳು ಜೀವ ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದೇವೆ, ನಮ್ಮ ವ್ಯವಸ್ಥೆ, ಪ್ರಯತ್ನ ವ್ಯರ್ಥವಾಗದಿರಲು, ನಿಮ್ಮ ಕುಟುಂಬಕ್ಕೆ ತೊಂದರೆಯಾಗದಿರಲು ಆಸ್ಪತ್ರೆಗೆ ಬನ್ನಿ ಎಂದು ಕೈಮುಗಿದು ಜಿಲ್ಲೆಯ ಜನರನ್ನು ಕೇಳುತ್ತಿದ್ದೇನೆ ಎಂದು ವಿನಂತಿಸಿದರು.

ಅವರು ತಾಲೂಕಾಸ್ಪತ್ರೆಯಲ್ಲಿ ಕೋವಿಡ್‌ ಎದುರಿಸುವ ಸಿದ್ಧತೆಗಳ ಸಮೀಕ್ಷೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದರು. ಈ ಬಾರಿ ಕೋವಿಡ್‌ ಕೇರ್‌ ಸೆಂಟರ್‌ ಮಾಡಿಲ್ಲ, ಸೋಂಕಿನ ಲಕ್ಷಣ ಕಂಡವರು ಆಸ್ಪತ್ರೆಗೆ ಬರಬೇಕು. ಡಾಕ್ಟರ್‌ ಹೇಳಿದ್ದನ್ನು ಕೇಳಿಕೊಂಡು, ಕೊಟ್ಟ ಔಷಧ ಪಡೆದು ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು. ಜವಾಬಾœರಿಯಿಂದ ವರ್ತಿಸಬೇಕು. ಸೋಂಕಿತರು ಬಂದು-ಹೋಗಲು ಆಂಬ್ಯುಲೆನ್ಸ್‌ ವ್ಯವಸ್ಥೆಯಿದೆ. ಎಲ್ಲ 11 ತಾಲೂಕುಗಳಲ್ಲಿ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಆಕ್ಸಿಜನ್‌ ವ್ಯವಸ್ಥೆ ಮಾಡಿದ್ದೇವೆ. ಎಲ್ಲ ಇಲಾಖೆಗಳು ಆರೋಗ್ಯ ಇಲಾಖೆಗಳೊಂದಿಗೆ ಕೈ ಜೋಡಿಸಿ ದುಡಿಯುತ್ತಿವೆ. ಸಚಿವರು, ಶಾಸಕರು ನಿಮ್ಮ ಜೊತೆಗಿದ್ದಾರೆ, ಕಾಳಜಿ ವಹಿಸುತ್ತಾರೆ. ಆದರೂ ನಿರ್ಲಕ್ಷé ಮಾಡುವುದು ಸರಿಯಲ್ಲ ಎಂದರು.

ಬೆಂಗಳೂರು ಸಹಿತ ಕೆಲವು ರಾಜಧಾನಿಗಳಲ್ಲಿ ಭಯಾನಕ ಪರಿಸ್ಥಿತಿ ಇದೆ. ನೆರೆ ಜಿಲ್ಲೆಗಳಲ್ಲೂ ಕಷ್ಟವಿದೆ. ಇದಕ್ಕೆಲ್ಲಾ ಜನರ ನಿರ್ಲಕ್ಷéವೇ ಕಾರಣ. ಗುಣವಾದವರ ಸಂಖ್ಯೆ ಹೆಚ್ಚಿದೆ, ಆದರೂ ಇದು ತೃಪ್ತಿಕರವಲ್ಲ. ಎಲ್ಲ ಸೇರಿ ಕೋವಿಡ್‌ ಹಿಮ್ಮೆಟ್ಟಿಸಲೇಬೇಕು. ಲಸಿಕೆ ಎಲ್ಲರಿಗೂ ದೊರೆಯಲಿದೆ, ವಿತರಣಾ ಜಾಲದಲ್ಲಿ ಕೆಲವು ಸಮಸ್ಯೆಗಳಿವೆ ಅದು ನಿವಾರಣೆಯಾಗಲಿದೆ ಎಂದು ಹೇಳಿದ್ದಾರೆ.

ಕೋವಿಡ್‌ ಕುರಿತು ಭಯ ಬೇಡ, ಆದರೆ ಎಚ್ಚರಿಕೆ ಇರಲಿ. ಯಾವುದೇ ಸೋಂಕಿನ ಲಕ್ಷಣ ಕಂಡರೂ ಆಸ್ಪತ್ರೆಗೆ ಬಂದರೆ ಕೋವಿಡ್‌ ಎನ್ನುತ್ತಾರೆ ಎಂದು ಮನೆಯಲ್ಲಿಯೇ ಉಳಿಯಬೇಡಿ ಎಂದರು. ಜಿಲ್ಲಾಡಳಿತ, ಸರ್ಕಾರ ಶ್ರಮಪಟ್ಟು ಇಷ್ಟೆಲ್ಲಾ ವ್ಯವಸ್ಥೆ ಮಾಡಿದೆ. ಅದು ವ್ಯರ್ಥವಾಗದಂತೆ ನಿಮ್ಮ ಜೀವ ಸುರಕ್ಷಿತವಾಗುಳಿದು ಜೀವನ ಸುಖಮಯವಾಗುವಂತೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಟಿಎಚ್‌ಒ ಡಾ| ಉಷಾ ಹಾಸ್ಯಗಾರ, ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ| ರಾಜೇಶ ಕಿಣಿ ಮತ್ತು ಇತರ ವೈದ್ಯರು ತಾಲೂಕಾಸ್ಪತ್ರೆಗೆ ಆಗಬೇಕಾದ ಕೆಲಸಗಳ ಕುರಿತು ಮಾಹಿತಿ ನೀಡಿದರು. ಎಲ್ಲ ವ್ಯವಸ್ಥೆ ಮಾಡಿಕೊಡುತ್ತೇನೆ, ಇಲ್ಲಿಯವರೆಗೆ ಉತ್ತಮ ಕೆಲಸಮಾಡಿದ್ದೀರಿ ಎಂದು ಅಭಿನಂದಿಸಿದರು. ಶಾಸಕರಾದ ಸುನೀಲ ನಾಯ್ಕ, ದಿನಕರ ಶೆಟ್ಟಿ ಮತ್ತು ಭಟ್ಕಳ ಉಪವಿಭಾಗಾಧಿಕಾರಿ, ಹೊನ್ನಾವರ ತಹಶೀಲ್ದಾರ್‌, ಶ್ರೀದೇವಿ ಆಸ್ಪತ್ರೆಯ ಡಾ| ಭಾರ್ಗವ ಶೆಟ್ಟಿ, ಇಗ್ನೇಷಿಯಸ್‌ ಆಸ್ಪತ್ರೆಯ ಆ್ಯಂಟನಿ ಲೋಪೀಸ್‌ ಮತ್ತು ಹಿರಿಯ ಪೊಲೀಸ್‌ ಅಧಿ ಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.