Udayavni Special

ಅಭಿವೃದ್ಧಿಗೆ ಅಡ್ಡಗಾಲಾದರೆ ಸುಮ್ಮನಿರಲ್ಲ

ಕಾನೂನು ಭಯ ಇದ್ದವರು ವರ್ಗವಾಗಿ ಹೋಗಲು ಅಧಿಕಾರಿಗಳಿಗೆ ಸಚಿವ ಹೆಬ್ಟಾರ್‌ ಖಡಕ್‌ ಎಚ್ಚರಿಕೆ

Team Udayavani, Feb 14, 2021, 4:43 PM IST

Minister shivaram hebbar

ಶಿರಸಿ: 125 ಕೋಟಿ ರೂ.ಗೆ ಮುಗಿಯಬೇಕಿದ್ದ ಅಂಕೋಲಾ ಹುಬ್ಬಳ್ಳಿ ರೈಲ್ವೆ ಈಗ 1400 ಕೋ. ರೂ. ಬೇಕಾಗುತ್ತದೆ. ಪರಿಸರದ ಹೆಸರಿನಲ್ಲಿ ಅಧಿಕಾರಿಗಳು, ಪರಿಸರವಾದಿಗಳು ಅಡ್ಡಗಾಲು ಹಾಕಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌ ಖಡಕ್‌ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಆತ್ಮನಿರ್ಭರ ಭಾರತ ಹಾಗೂ ಪ್ರಸಕ್ತ ವರ್ತಮಾನ ಕೇಂದ್ರ ಬಜೆಟ್‌ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಜಿಲ್ಲೆ. ಇಲ್ಲಿನ ಪ್ರವಾಸಿ ತಾಣಗಳಲ್ಲಿ ಮೂಲಭೂತ ಅಭಿವೃದ್ಧಿ ಆಗಬೇಕು. ಇಲ್ಲಿನ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿ ಆಗಬೇಕು. ಪರಿಸರದ ಹೆಸರಿನಲ್ಲಿ ಇವುಗಳ ಅಭಿವೃದ್ಧಿಗೆ ಹಿನ್ನಡೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಸಾಗರಮಾಲಾ ಯೋಜನೆಗೂ, ಕುಮಟಾ ಹೆದ್ದಾರಿಗೂ, ಬಂದರಿನ ಅಭಿವೃದ್ಧಿಗೂ ತೊಡಕಾದರೆ ಹೇಗೆ? ಅರಣ್ಯ ಅಧಿಕಾರಿಗಳೂ ಪರಿಸರದ ಹೆಸರಿನಲ್ಲಿ ಜನರಿಗೆ, ಅಭಿವೃದ್ಧಿಗೆ ತೊಂದರೆ ಮಾಡಿದರೆ ಆಗದು. ಕಾನೂನಿನ ಭಯ ಇದ್ದವರು ಇಲ್ಲಿ ಇರಬೇಕು ಎಂದೂ ಇಲ್ಲ. ವರ್ಗಾವಣೆ ಮಾಡಿಕೊಳ್ಳಬಹುದು ಎಂದರು.

1978ನೇ ಇಸವಿಗಿಂತ ಮೊದಲೇ ಅತಿಕ್ರಮಣ ಮಾಡಿಕೊಂಡವರ ಸ್ಥಳದ ಡಿನೋಟಿಫಿಕೇಶನ್‌ ಆಗಿದೆ. ಇಲಾಖೆ ಅದನ್ನು ಕಾಗದ ಪತ್ರದಲ್ಲಿ ಮಾಡಿಕೊಳ್ಳದೇ ಹೋದರೆ ಜನ ಹೊಣೆಗಾರರಲ್ಲ. ಅರಣ್ಯವನ್ನು ಉಳಿದ ಜಿಲ್ಲೆಗಳಿಗಿಂತ 10 ಪಟ್ಟು ಹೆಚ್ಚು ಉಳಿಸಿದ್ದೇವೆ, ಬೆಳಸಿದ್ದೇವೆ. ಅಧಿ ಕಾರಿಗಳಿಂದ, ಪರಿಸರ ವಾದಿಗಳಿಂದ ಅರಣ್ಯ ಉಳಿಸುವ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದೂ ವಾಗ್ಧಾಳಿ ಮಾಡಿದರು.

ದಾಂಡೇಲಿ, ಜೋಯಿಡಾ ಭಾಗದಲ್ಲಿ ಪರಿಸರದ ಕಾರಣದಿಂದ ತಡೆ ಹಿಡಿಯಲಾಗಿದ್ದ 32 ಕಾಮಗಾರಿಗಳಲ್ಲಿ ಕೇವಲ 9 ಪ್ರಕರಣ ಬಾಕಿ ಇದೆ. ಅದರ ಕುರಿತೂ ಅಧಿಕಾರಿಗಳ ಜೊತೆ ಮಾತನಾಡುತ್ತೇವೆ ಎಂದ ಹೆಬ್ಟಾರ್‌, ಕಸ್ತೂರಿ ರಂಗನ್‌ ವರದಿ ಕೂಡ ತಿರಸ್ಕಾರ ಮಾಡಿದ್ದೇವೆ. ಕೇಂದ್ರಕ್ಕೂ ರಾಜ್ಯ ಸರಕಾರ ತಿಳಿಸಿದೆ. ವರದಿಯೇ ಅವೈಜ್ಞಾನಿವಾಗಿದೆ. ಗೋವಾಕ್ಕೆ, ಕರ್ನಾಟಕಕ್ಕೆ, ಮಹಾರಾಷ್ಟ್ರಕ್ಕೆ ಒಂದೊಂದು ವರದಿ ಕೊಟ್ಟಿದೆ. ಪಶ್ಚಿಮ ಘಟ್ಟವನ್ನು ವಿಭಾಗಿಸಿ ನೋಡುವ ಕೆಲಸ ಯಾಕೆ ಮಾಡಬೇಕು? ಎಂದು ಕೇಳಿದರು.

ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ಎಷ್ಟೂ ಕಾಮಗಾರಿ ತರಬಹುದು. ಕುಮಟಾ, ಗೋಕರ್ಣ, ಪಾಳಾ, ದಾಸನಕೊಪ್ಪ, ಬನವಾಸಿ, ಕುಮಟಾ ಅಳವೆಕೋಡಿ, ಶಿರಾಲಿ, ಮಂಕಿ ಸೇರಿದಂತೆ ಹಲವೆಡೆ ಅನೇಕ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸರಕಾರದ ಮುಂದೆ ಪ್ರಸ್ತಾವನೆ ಇದೆ. ಜಿಲ್ಲೆಯ ಪ್ರವಾಸಿ ತಾಣಗಳ ಆಕರ್ಷಣೆಗೆ ನೇವಿ ವಿಮಾನ ನಿಲ್ದಾಣ ನಾಗರಿಕ ವಿಮಾನ ನಿಲ್ದಾಣವಾಗುತ್ತದೆ. ಅಲ್ಲಿ ಜಾಗ ಬಿಟ್ಟುಕೊಟ್ಟ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವರಿಗೆ ಪರಿಹಾರ ಕೂಡ ಕೇಂದ್ರ ಸರಕಾರದ ನೂತನ ಮಾನದಂಡದಂತೆ ಒದಗಿಸಲಾಗುತ್ತದೆ ಎಂದರು.

ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಕುರಿತು ಎಲ್ಲ ಶಾಸಕರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಮುಂದುವರಿಯುತ್ತೇವೆ. ಈಗಲೇ ಏನೂ ಹೇಳುವುದಿಲ್ಲ. ಮೊನ್ನೆ ಕಂದಾಯ ಸಚಿವರು 18 ಶಾಸಕರು ಇರುವ ಬೆಳಗಾವಿಯನ್ನೇ ವಿಭಾಗಿಸಲು ಆಗಿಲ್ಲ ಎಂದೂ ಹೇಳಿದ್ದಾರೆ. ನಾನೂ ಚರ್ಚೆ ಮಾಡಿ ತಿಳಿಸುವೆ. ಅದು ಪûಾತೀತವಾಗಿ ಚರ್ಚೆ ಆಗಬೇಕಾದ್ದು ಎಂದ ಹೆಬ್ಟಾರ್‌, ಕೇಂದ್ರ ಸರಕಾರದ ಬಜೆಟ್‌ ಶ್ಲಾಘಿಸಿ, ರಾಜ್ಯದಲ್ಲೂ ರೈತ ಪರ ಬಜೆಟ್‌ ಬರಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ ಅವರು ವಿಶ್ವದ ಮಾರುಕಟ್ಟೆಗೆ ಭಾರತ ಒಯ್ಯಬೇಕಾದ ಸಿದ್ಧತೆ ಮಾಡಿದ್ದಾರೆ. ರೈತರ ಆರ್ಥಿಕತೆ ಎತ್ತರಿಸುವ ಬಜೆಟ್‌ ಕೂಡ ಇದಾಗಿದೆ. ಆರೋಗ್ಯ, ವಿದ್ಯುತ್‌, ರಾಷ್ಟ್ರಯ ಹೆದ್ದಾರಿ, ರೈಲ್ವೆಗೂ ಆದ್ಯತೆ ಇದೆ. ಕೇಂದ್ರ ರಾಜ್ಯ ಸರಕಾರಗಳು ರೈತ ವಿರೋಧಿಯಲ್ಲ. ಅವರಿಗೆ ಅನುಕೂಲ ಆಗುವ ಕೆಲಸವನ್ನೇ ಸರಕಾರ ಮಾಡುತ್ತಿವೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಜೆಟ್‌ ಕೂಡ ಅನ್ನದಾತನನ್ನ ಎತ್ತಿ ಹಿಡಿಯುವ ಹಾಗೂ ಸ್ವಾಭಿಮಾನಿ ರಾಜ್ಯ, ದೇಶ, ಸ್ವಾಭಿಮಾನಿ ರೈತ ಕುರಿತಾದ ಬಜೆಟ್‌ ಆಗಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ಧಿ, ನಿಕಟಪೂರ್ವ ಅಧ್ಯಕ್ಷ ಕೆ.ಜಿ. ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಮಾಧ್ಯಮ ವಕ್ತಾರ ನಾಗರಾಜ್‌ ನಾಯ್ಕ, ಸಹ ವಕ್ತಾರ ಸದಾನಂದ ಭಟ್ಟ, ಡಾನಿ ಡಿಸೋಜಾ, ಆರ್‌.ಡಿ. ಹೆಗಡೆ, ಚಂದ್ರು ಎಸಳೆ ಇತರರು ಇದ್ದರು.

ಟಾಪ್ ನ್ಯೂಸ್

Indian Oil Launches 100 Octane Fuel In Hyderabad

ಹೈದರಾಬಾದ್ ನಲ್ಲಿ 100 ಆಕ್ಟೇನ್ ಪ್ರೀಮಿಯಂ ಪೆಟ್ರೊಲ್ ಬಿಡುಗಡೆ ಮಾಡಿದ ಐಒಸಿ

Prashant neel

ಇಂದು ‘ಸಲಾರ್’ ಕುರಿತು ಬಿಗ್ ಅಪ್ಡೇಟ್ ನೀಡಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್….ಏನದು ?  

HD Set-Top Boxes D2H New Plan

D2H ನೀಡುತ್ತಿದೆ ಬೊಂಬಾಟ್ ಆಫರ್ ..!

Amithabh Bachan

ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಹಿರಿಯ ನಟ ಅಮಿತಾಭ್ !  

SBI Gold Loan

ಚಿನ್ನದ ಮೇಲೆ ಸಾಲ ಪಡೆಯುವವರಿಗೆ ವಾರ್ಷಿಕ ಶೇ7.25 ಬಡ್ಡಿದರದಲ್ಲಿ ಸಾಲ ನೀಡಲಿದೆ ಎಸ್ ಬಿ ಐ

PSLV-C51/Amazonia-1 mission successful, Isro places 19 satel

ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದ ಇಸ್ರೋ ರಾಕೆಟ್..!   

Shruti Hassan

ಬಾಯ್‍ಫ್ರೆಂಡ್ ಜತೆ ರೊಮ್ಯಾಂಟಿಕ್ ಹಗ್…ಮತ್ತೆ ಪ್ರೀತಿಯಲ್ಲಿ ನಟಿ ಶೃತಿ ಹಾಸನ್ ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಸ ವಿಲೇವಾರಿ ಅಸಮರ್ಪಕ: ದೂರು

ಕಸ ವಿಲೇವಾರಿ ಅಸಮರ್ಪಕ: ದೂರು

ತಹಶೀಲ್ದಾರ್‌ಗೂ ಕ್ಯಾರೇ ಎನ್ನದ ಐಆರ್‌ಬಿ ಅಧಿಕಾರಿಗಳು

ತಹಶೀಲ್ದಾರ್‌ಗೂ ಕ್ಯಾರೇ ಎನ್ನದ ಐಆರ್‌ಬಿ ಅಧಿಕಾರಿಗಳು

Ulavi Basavanna Jatres

ಉಳವಿ ಚೆನ್ನಬಸವೇಶ್ವರ ಮಹಾರಥೋತ್ಸವ ನಾಳೆ

Karwar APMC

ಸಂಕಷ್ಟದಲ್ಲಿವೆ ಎಪಿಎಂಸಿಗಳು

protest for Sirasi district

ಶಿರಸಿ ಜಿಲ್ಲೆಗೆ ಆಗ್ರಹಿಸಿ ಸ್ವಯಂ ಪ್ರೇರಿತ ಬಂದ್‌

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

v-nagendra-prasad-sangeetha-sanje

ಕೋಟೇಶ್ವರದಲ್ಲಿ ವಿ.ನಾಗೇಂದ್ರ ಪ್ರಸಾದ್ ಸಂಗೀತ ಸವಿಸಂಜೆ

Indian Oil Launches 100 Octane Fuel In Hyderabad

ಹೈದರಾಬಾದ್ ನಲ್ಲಿ 100 ಆಕ್ಟೇನ್ ಪ್ರೀಮಿಯಂ ಪೆಟ್ರೊಲ್ ಬಿಡುಗಡೆ ಮಾಡಿದ ಐಒಸಿ

Prashant neel

ಇಂದು ‘ಸಲಾರ್’ ಕುರಿತು ಬಿಗ್ ಅಪ್ಡೇಟ್ ನೀಡಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್….ಏನದು ?  

HD Set-Top Boxes D2H New Plan

D2H ನೀಡುತ್ತಿದೆ ಬೊಂಬಾಟ್ ಆಫರ್ ..!

ತೆಲುಗಿನಲ್ಲಿ ದರ್ಶನ್‌ ಹವಾ: ಚಿತ್ರತಂಡಕ್ಕೆ ಸಾಥ್‌ ನೀಡಿದ ಜಗಪತಿ ಬಾಬು

ತೆಲುಗಿನಲ್ಲಿ ದರ್ಶನ್‌ ಹವಾ: ಚಿತ್ರತಂಡಕ್ಕೆ ಸಾಥ್‌ ನೀಡಿದ ಜಗಪತಿ ಬಾಬು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.