ಕೋವಿಡ್ ತಡೆ ಆಂದೋಲನಕ್ಕೆ ಸಿದ್ಧತೆ

ಜಿಲ್ಲೆಗಳಿಗೆ ತಲುಪದ ಲಸಿಕೆ,ಕೋವಿಡ್‌ ವ್ಯಾಕ್ಸಿನ್‌ ಪ್ರೋಗ್ರಾಂಗೆ ಆಗಬೇಕಿದೆ ಲಾಗಿನ್‌

Team Udayavani, Jan 3, 2021, 3:50 PM IST

ಕೋವಿಡ್ ತಡೆ ಆಂದೋಲನಕ್ಕೆ ಸಿದ್ಧತೆ

ಕಾರವಾರ: ಕೋವಿಡ್‌ ನಿಯಂತ್ರಣ ಲಸಿಕೆ ಇನ್ನೂಜಿಲ್ಲೆಯನ್ನು ತಲುಪಿಲ್ಲ. ಆದರೆ ಯಾರ್ಯಾರಿಗೆ ಲಸಿಕೆಮೊದಲ ಸುತ್ತಿನಲ್ಲಿ ನೀಡಬೇಕು? ಎಲ್ಲಿ ನೀಡಬೇಕು? ಹೇಗೆ ನೀಡಬೇಕು ಎಂಬುದು ಮಾತ್ರ ಈಗಾಗಲೇ ತಿರ್ಮಾನವಾಗಿದೆ.

ಜೊತೆಗೆ ತಾಲೂಕಿನ ಎಲ್ಲಾ ಪಿಎಚ್‌ಸಿಗಳಲ್ಲಿ ಕೋವಿಡ್‌ ಲಸಿಕೆ ನೀಡಲು ತಯಾರಿಯೂ ಆಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮೊಟ್ಟ ಮೊದಲಿಗೆ ಕೋವಿಡ್‌ ವಿರೋಧಿ ಲಸಿಕೆ ಕೋವಿನ್‌ ಪಡೆಯಲಿದ್ದಾರೆ. ಆರೋಗ್ಯ ಇಲಾಖು ಸಿಬ್ಬಂದಿ ಜಿಲ್ಲೆಯಲ್ಲಿ 12133 ರಷ್ಟಿದ್ದಾರೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಸಹ ಇದ್ದಾರೆ.

ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಡಿ ದರ್ಜೆ ನೌಕರರು ಸಹ ಇದ್ದಾರೆ. ಕೋವಿಡ್‌ ರೋಗಿಗಳನ್ನು ಇವರೇ ಮೊದಲು ಎದುರಿಸುವ ಕಾರಣ ಪ್ರಥಮ ಆದ್ಯತೆಯ ಮೇರೆಗೆ ಕೋವಿನ್‌ ವ್ಯಾಕ್ಸಿನ್‌ ನೀಡಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ಎಂದು ಸಾಬೀತುಪಡಿಸಲುಇವರು ಕಚೇರಿಯ ಐಕಾರ್ಡ್‌ ಅಥವಾ ಯಾವುದೇ ಗುರುತಿನ ಪತ್ರ ತೋರಿಸಿ ಲಸಿಕೆ ಪಡೆಯಬಹುದಾಗಿದೆ.

ಈಗಾಗಲೇ ಸರ್ಕಾರಕ್ಕೆ ಉತ್ತರಕನ್ನಡ ಜಿಲ್ಲೆಯ ಮೊದಲ ಹಂತದಲ್ಲಿ ಲಸಿಕೆ ಪಡೆಯುವವರ ಮಾಹಿತಿರವಾನಿಸಲಾಗಿದೆ. ಅಗತ್ಯ ಇರುವಷ್ಟು ಲಸಿಕೆ ಜಿಲ್ಲೆಗೆಬರುವ ನಿರೀಕ್ಷೆ ಸಹ ಇದೆ.ವ್ಯಾಕ್ಸಿನ್‌ ಬರುವ ಮುನ್ನ ಸಕಲ ತಯಾರಿ: ಕೋವಿನ್‌ವ್ಯಾಕ್ಸಿನ್‌ ಇನ್ನು ಕಾರವಾರ ತಲುಪಿಲ್ಲ. ಆಗಲೇ ಸಕಲಸಿದ್ಧತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಮಾಡಿಕೊಂಡಿದೆ. ಮೊದಲ ಡೋಜ್‌ಮತ್ತ 21 ದಿನಗಳ ನಂತರ ಎರಡನೇ ಡೋಜ್‌ನೀಡಬೇಕಿದೆ. ಜಿಲ್ಲೆಯ ಎಲ್ಲಾ ಆರೋಗ್ಯ ಇಲಾಖೆಸಿಬ್ಬಂದಿ ಕೋವಿನ್‌ ಲಸಿಕೆ ಬಳಸಿಕೊಳ್ಳಲಿದ್ದಾರೆ.

ಯಾವ ತಾಲೂಕಿನಲ್ಲಿ ಎಷ್ಟು ಸಿಬ್ಬಂದಿ: ಅಂಕೋಲಾ ತಾಲೂಕಿನಲ್ಲಿಸರ್ಕಾರಿ, ಖಾಸಗಿ ಆಸ್ಪತ್ರೆಗೆಸೇರಿಸಿ ಒಟ್ಟು 957 ಸಿಬ್ಬಂದಿ ಇದ್ದರೆ, ಅರ್ಗಾ ನೌಕಾನೆಲೆಆಸ್ಪತ್ರೆಯಲ್ಲಿ 138 ಸಿಬಂದಿ ಇದ್ದಾರೆ. ಭಟ್ಕಳದಲ್ಲಿ 1059,ಹಳಿಯಾಳದಲ್ಲಿ 1004,ಹೊನ್ನಾವರದಲ್ಲಿ 148 ಸಿಬ್ಬಂದಿ, ಜೊಯಿಡಾದಲ್ಲಿ 375, ಕಾರವಾರದಲ್ಲಿ 2089,ಕುಮಟಾ 1104, ಮುಂಡಗೋಡ 897, ಸಿದ್ದಾಪುರ571, ಶಿರಸಿ 2167, ಯಲ್ಲಾಪುರ 491, ಸೇರಿಒಟ್ಟು 12133 ಸಿಬ್ಬಂದಿಗಳ ಪಟ್ಟಿಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಜನೆವರಿ 17-18 ಪಲ್ಸ್‌ ಪೋಲಿಯೋ ಲಸಿಕೆನೀಡಿದ ನಂತರ, ಕೋವಿನ್‌ ಲಸಿಕೆ ನೀಡಿಕೆಆರಂಭವಾಗಲಿದೆ. ಆರೋಗ್ಯ ಇಲಾಖೆಯ 12133ಮುಗಿದ ಮೇಲೆ ಎರಡನೇ ಹಂತದಲ್ಲಿ ಲಸಿಕೆಯನ್ನುನಗರಸಭೆ ಸಿಬ್ಬಂದಿ ಹಾಗೂ ಪೊಲೀಸರಿಗೆ ನೀಡುವನಿರೀಕ್ಷೆ ಇದೆ. ಮೂರನೇ ಹಂತದಲ್ಲಿ 50 ವರ್ಷದಾಟಿದವರಿಗೆ ಕೋವಿಡ್ ‌ ಲಸಿಕೆ ನೀಡ ಲಾಗುವುದು.ಮೂರನೇ ಹಂತದಲ್ಲಿ ಬೂತ್‌ ಮಾಡಿದ ವಿವಿಧಗ್ರಾಮಗಳ ಮತಗಟ್ಟೆ ಬೂತ್‌ಗಳಲ್ಲೇ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಕೋವಿಡ್ ಲಸಿಕೆ ಹಾಕಲು ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.ಮೊದಲ ಹಂತದಲ್ಲಿ 12133 ರಷ್ಟಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆಲಸಿಕೆ ನೀಡಿದ ನಂತರ, ಪೊಲೀಸರಿಗೆ, ನಗರಸಭೆ ಸಿಬ್ಬಂದಿಗೆ ನೀಡಲಾಗುವುದು.ಇವರ ಸಂಖ್ಯೆ ಸಹ 12 ಸಾವಿರ ದಾಟಬಹುದು. ಮೊರನೇ ಹಂತದಲ್ಲಿ 50 ವರ್ಷದಾಟಿದ ವೃದ್ಧರಿಗೆ ನೀಡಲಾಗುವುದು. ನಮ್ಮ ದೇಶದಲ್ಲಿ ಮಾನಸಿಕ ಸದೃಢತೆಇರುವವರು ಹೆಚ್ಚಾಗಿ ಇದ್ದಾರೆ. ರೋಗ ನಿರೋಧಕ ಶಕ್ತಿ ಸಹ ನಮ್ಮಲ್ಲಿ ಹೆಚ್ಚಿನ ಜನರಿಗೆ ಇದೆ. ಹಾಗಾಗಿ ಕೋವಿಡ್‌ಗೆ ನಮ್ಮಲ್ಲಿ ಜನ ಹೆದುರಿತ್ತಿಲ್ಲ. ಆದರೂ ಮಾಸ್ಕ್ ಧರಿಸುವಂತೆ ಸೂಚಿಸುವುದನ್ನು ಸಹ ಬಿಟ್ಟಿಲ್ಲ.ಡಾ| ಕ್ಯಾಪ್ಟನ್‌ ರಮೇಶರಾವ್‌, ಕಾರ್ಯಕ್ರಮಾಧಿಕಾರಿ (ಪ್ರಭಾರ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರವಾರ

ನಾಗರಾಜ ಹರಪನಹಳ್ಳಿ

ಟಾಪ್ ನ್ಯೂಸ್

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.