Udayavni Special

ತಜ್ಞರಿಂದ ಕಲ್ಲು ಸಂಕ ಪರಿಶೀಲನೆ


Team Udayavani, Apr 2, 2021, 7:29 PM IST

ತಜ್ಞರಿಂದ ಕಲ್ಲು ಸಂಕ ಪರಿಶೀಲನೆ

ಸಿದ್ದಾಪುರ: ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಮಲವಳ್ಳಿಸಮೀಪ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಅಪರೂಪದಕಲ್ಲು ಸಂಕದ ಸಂರಕ್ಷಣೆ ಕುರಿತಂತೆ ಅಲ್ಲಿನ ಭೂ ಗುಣದಅಧ್ಯಯನಕ್ಕೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಭೂಗರ್ಭ ಶಾಸ್ತ್ರಜ್ಞರಾದ ಡಾ| ಇಬ್ರಾಹಿಂ ಹಾಗೂ ಡಾ| ಸಲೀಂ ಆಗಮಿಸಿದ್ದರು.

ಜಗತ್ತಿನಲ್ಲೇ ಎರಡನೆಯದು ಎನ್ನಲಾಗುವ ಪ್ರಕೃತಿ ನಿರ್ಮಿತ ಕಲ್ಲು ಸಂಕದ ಸಂರಕ್ಷಣೆ ಕುರಿತಂತೆ ಗ್ರಾಮಸ್ಥರು ಸರಕಾರಕ್ಕೆಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ಪೀಕರ್‌ ವಿಶ್ವೇಶ್ವರಹೆಗಡೆ ಕಾಗೇರಿಯವರು ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪನವರ ಗಮನಕ್ಕೆ ತಂದು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದಮೂಲಕ 20 ಲಕ್ಷ ರೂ.ಗಳ ಅನುದಾನ ಮಂಜೂರಿ ಮಾಡಿಸಿದ್ದರು.

ಶಿಥಿಲಗೊಳ್ಳುತ್ತಿರುವ ಕಲ್ಲುಸಂಕದ ಸಂರಕ್ಷಣೆ ಕಾಮಗಾರಿ ನಡೆಸುವ ಮುನ್ನ ಅದಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ ಕಾರಣಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ ಜಿ.ಸಿ. ಭೂ ಗರ್ಭಶಾಸ್ತ್ರಜ್ಞರನ್ನು ಇಲ್ಲಿನ ಭೂ ಗುಣದ ಪರೀಕ್ಷೆಗೆ ಕರೆತಂದಿದ್ದರು.ಕಲ್ಲು ಸಂಕದ ಮೇಲ್ಭಾಗ ಹಾಗೂ ಕೆಳಗಿನ ಹಳ್ಳದಲ್ಲಿನಮಣ್ಣು, ಕಲ್ಲುಗಳ ಪರೀಕ್ಷೆ, ಹಳ್ಳದಲ್ಲಿ ನೀರು ಹರಿಯುವಿಕೆಗಳಬಗ್ಗೆ ಪರೀಕ್ಷೆ ನಡೆಸಿದ ಡಾ| ಇಬ್ರಾಹಿಂ ಹಾಗೂ ಡಾ| ಸಲೀಂ ಕಲ್ಲು ಸಂಕ ಲ್ಯಾಟ್ರೇಟ್‌ (ಜಂಬಿಟ್ಟಿಗೆ) ನಿಂದ ಪರಿವರ್ತಿತವಾದ ಅಗ್ನಿಶಿಲೆ ಕಲ್ಲುಗಳಿಂದ ರಚನೆಯಾಗಿದ್ದು ತಳ ಭಾಗದಲ್ಲಿಹರಿಯುವ ಹಳ್ಳದ ನೀರಿನ ಹರಿಯುವಿಕೆ ಕಾರಣದಿಂದ ಕೊರೆದಿದೆ. ಮಿಲಿಯಗಟ್ಟಲೆ ವರ್ಷಗಳ ಹಿಂದಿನ ಪ್ರಕ್ರಿಯೆ ಇದಾಗಿದ್ದು ನೀರಿನೊಳಗಿನ ಶಿಲೆಗಳು ಹಗುರವಾಗಿದ್ದು ಮೇಲ್ಭಾಗದ ಶಿಲೆಗಳು ಭಾರವಾಗಿವೆ. ವಾತಾವರಣದಬದಲಾವಣೆ ಕಾರಣದಿಂದ ಶಿಲೆಗಳು ಶಿಥಿಲಗೊಳ್ಳುತ್ತಿವೆ.ಕಲ್ಲುಸಂಕದ ಸುತ್ತಲಿನ ಭಾಗದ ನೆಲದಲ್ಲಿ ಈ ಶಿಲಾರಚನೆ ಇದೆ.ಇಲ್ಲಿ ಕಾಮಗಾರಿ ಮಾಡುವುದು ಸೂಕ್ಷ್ಮ ಮತ್ತು ಸವಾಲಿನ ಕೆಲಸವಾಗಿದೆ. ನಾವು ಯೋಜನಾ ವರದಿ ನೀಡುವ ಮುನ್ನಇನ್ನೊಮ್ಮೆ ಪರಿಶೀಲನೆ ನಡೆಸುತ್ತೇವೆ ಎಂದು ವಿವರಿಸಿದರು.

ಮಳೆಗಾಲದ ರಭಸದ ನೀರಿನ ಹರಿವಿನ ಕಾರಣ ಕಲ್ಲುಸಂಕದ ತಳಭಾಗದ ಕಲ್ಲುಗಳು ಕುಸಿದಿವೆ. ಹಾಗಾಗಿ ಹಳ್ಳದ ನೀರಿನ ಹರಿಯುವಿಕೆಯನ್ನು ಕಲ್ಲುಸಂಕದ ಮತ್ತೂಂದುತಳಭಾಗದಲ್ಲಿ ಹರಿಯುವಂತೆ ಮಾಡಬೇಕು. ಯಾವುದೇಕಾರಣಕ್ಕೂ ಸಿಮೆಂಟ್‌ ಮುಂತಾದ ಆಧುನಿಕ ಪರಿಕರಗಳಬಳಕೆ ಬೇಡ. ಹಳ್ಳದ ಅಂಚಿನಲ್ಲಿ ಪಿಚಿಂಗ್‌ ನಿರ್ಮಾಣ ಮತ್ತುಗಿಡಗಂಟಿಗಳನ್ನ ತೆರವು ಮಾಡಬೇಕು ಎಂದು ಗ್ರಾಮಸ್ಥರಾದ ಲಕ್ಷ್ಮಿನಾರಾಯಣ ಕಲಗಾರು, ಗುರುಮೂರ್ತಿ ಹೆಗಡೆ ಮುಂತಾದವರು ಆಗ್ರಹಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ ಜಿ.ಸಿ. ಭೂ ಗರ್ಭ ಶಾಸ್ತ್ರಜ್ಞರ ವರದಿ ಹಾಗೂ ಗ್ರಾಮಸ್ಥರ ಅಭಿಪ್ರಾಯಪಡೆದು ಕಲ್ಲು ಸಂಕಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದರು.

ಪ್ರಾಧಿಕಾರದ ಸಹಾಯಕ ನಿರ್ದೇಶಕ ಶೇಜೇಶ್ವರ, ಕಾರವಾರನಿರ್ಮಿತಿ ಕೇಂದ್ರದ ಸಂಯೋಜನಾ ಆಯುಕ್ತ ಕುಮಾರ ಶೆಟ್ಟಿ,ಗ್ರಾಪಂ ಸದಸ್ಯ ಶ್ರೀನಿವಾಸ, ಗ್ರಾಮಸ್ಥರಾದ ನಾರಾಯಣ್‌,ಲಕ್ಷ್ಮಿನಾರಾಯಣ ಕಲಗಾರು, ಗುರುಮೂರ್ತಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಸಿಡಿ ಪ್ರಕರಣ : ಏ.20ರಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌

ಸಿಡಿ ಪ್ರಕರಣ : ಏ.20ರಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌

ಬ್ಗಜಹಹಗಗ

ಏಪ್ರಿಲ್ 18 ರಂದು ಸಿಎಂ ಜೊತೆ ನಡೆಯಬೇಕಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ!

ಇಂಧನ ಪಂಪ್‌ನಲ್ಲಿ ದೋಷ :  77,954 ಹೋಂಡಾ ಕಾರುಗಳು ವಾಪಸ್‌!

ಇಂಧನ ಪಂಪ್‌ನಲ್ಲಿ ದೋಷ :  77,954 ಹೋಂಡಾ ಕಾರುಗಳು ವಾಪಸ್‌!

ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್‌ಸಿಸಿ ಐಚ್ಛಿಕ ವಿಷಯವಾಗಿ ಅಳವಡಿಸಲು ನಿರ್ದೇಶನ

ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್‌ಸಿಸಿ ಐಚ್ಛಿಕ ವಿಷಯವಾಗಿ ಅಳವಡಿಸಲು ನಿರ್ದೇಶನ

ಎಲ್‌ಐಸಿ ನೌಕರರಿಗೆ ವೇತನ ಹೆಚ್ಚಳ, ವಾರಕ್ಕೆ 5 ದಿನ ಕೆಲಸ?

ಎಲ್‌ಐಸಿ ನೌಕರರಿಗೆ ವೇತನ ಹೆಚ್ಚಳ, ವಾರಕ್ಕೆ 5 ದಿನ ಕೆಲಸ?

ಚ್ಗಜಹ್ಗ್‍‍

ಕೋವಿಡ್ 3ನೇ ಅಲೆಗೆ ಸಿದ್ಧರಾಗಿ, ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ : ಡಾ.ಶಶಿಕಿರಣ್ ಉಮಾಕಾಂತ್

shava

ಒಂದೇ ಆ್ಯಂಬುಲೆನ್ಸ್ ನಲ್ಲಿ ಮೂರು ಕೋವಿಡ್ ಸೋಂಕಿತರ ಶವ ಸಾಗಾಟ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fryertr

ಬೇಡಿಕೆ ಈಡೇರದಿದ್ದರೆ ಮತ್ತೂಮ್ಮೆ ಹೋರಾಟ : ಬಸವಜಯಮೃತ್ಯುಂಜಯ ಮಹಾಸ್ವಾಮಿ

jyutr

ಉಪ್ಪಿನ ಸತ್ಯಾಗ್ರಹದ 91ನೇ ವರ್ಷಾಚರಣೆ!

hfgfg

ಸಮಾಜದ ಮನೋಭಾವ ಬದಲಾಯಿಸುವುದೇ ಅಂಬೇಡ್ಕರ್ ಜಯಂತಿ ಉದ್ದೇಶ : ಡಿಸಿ ಮುಲ್ಲೈ 

Untitled-4

ಅತಿಕ್ರಮಣದಾರರಿಗೆ ಕಿರುಕುಳ ನೀಡದಿರಿ

ಸೆಲ್ಫಿ ತೆಗೆಯಲು ಹೋಗಿ ಕಾಳಿ ನದಿಗೆ ಬಿದ್ದಿದ್ದ ಯುವಕ-ಯುವತಿಯ ಶವ ಪತ್ತೆ

ಸೆಲ್ಫಿ ತೆಗೆಯಲು ಹೋಗಿ ಕಾಳಿ ನದಿಗೆ ಬಿದ್ದಿದ್ದ ಯುವಕ-ಯುವತಿಯ ಶವ ಪತ್ತೆ

MUST WATCH

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

udayavani youtube

ಬಿಎಸ್ ವೈಗೆ ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್

udayavani youtube

ಮಂಗಳೂರು: ಬೊಟ್ ದುರಂತ ಪ್ರಕರಣ; ಮೂರು ದಿನಗಳಾದರೂ ಪತ್ತೆಯಾಗದ ಮೀನುಗಾರರು

udayavani youtube

ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

ಹೊಸ ಸೇರ್ಪಡೆ

ಸಿಡಿ ಪ್ರಕರಣ : ಏ.20ರಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌

ಸಿಡಿ ಪ್ರಕರಣ : ಏ.20ರಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌

್ಗಹ್ದ್ಸದ಻ಸ

ಶುದ್ಧ ನೀರು ಪೂರೈಸಲು ನಗರಸಭೆ “ಬದ್ಧ ‘

ೊಕಿಜುಹಗ್ದಸ಻

ಆಕಾಂಕ್ಷಿಗಳಲ್ಲಿ ಮೀಸಲು ಕನವರಿಕೆ ಶುರು

ಬ್ಗಜಹಹಗಗ

ಏಪ್ರಿಲ್ 18 ರಂದು ಸಿಎಂ ಜೊತೆ ನಡೆಯಬೇಕಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ!

ಕಜಹಯಗತರೆಡ3

ಮರಾಠಿಗರ ಹೆಗಲ ಮೇಲೆ ಬಂದೂಕಿಟ್ಟ ಶಿವಸೇನೆ: ಫಡ್ನವೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.