ಪ್ರಭಾರಿಗಳ ಅಬ್ಬರ-ಪ್ರವಾಸೋದ್ಯಮ ಅಭಿವೃದ್ಧಿ ಮರೀಚಿಕೆ

16 ವರ್ಷಗಳಿಂದ ಅನ್ಯ ಇಲಾಖೆ 8 ಅಧಿಕಾರಿಗಳ ಕಾರುಬಾರು

Team Udayavani, Aug 5, 2019, 10:47 AM IST

5-AGUST-7

ವಿಜಯಪುರ: ಮಾತೃ ಇಲಾಖೆಯ ಪೂರ್ಣಾವಧಿ ಅಧಿಕಾರಿಗಳಿಲ್ಲದೇ ಅನ್ಯ ಇಲಾಖೆಯ ಪ್ರಭಾರಿಗಳ ದರ್ಬಾರ್‌ನಲ್ಲೇ ನಲುಗುತ್ತಿರುವ ವಿಜಯಪುರ ಪ್ರವಾಸೋದ್ಯಮ ಉಪ ನಿರ್ದೇಶಕರ ಕಚೇರಿ.

ಜಿ.ಎಸ್‌. ಕಮತರ
ವಿಜಯಪುರ:
ಪ್ರವಾಸೋದ್ಯಮಕ್ಕೆ ಬೇಕಾದ ಅತಿ ಉತ್ಕೃಷ್ಟ ಹಾಗೂ ರಾಜ್ಯದಲ್ಲೇ ಅತಿ ಹೆಚ್ಚು ವೀಕ್ಷಣೆ ಸಂಪನ್ಮೂಲ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಈ ಇಲಾಖೆಯನ್ನು ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಕಡೆಗಣಿಸಲಾಗಿದೆ ಎಂದರೆ ಕಳೆದ 16 ವರ್ಷಗಳಿಂದ ವಿಜಯಪುರ ಪ್ರವಾಸೋದ್ಯಮ ಇಲಾಖೆಗೆ ಇಲಾಖೆಯ ಪೂರ್ಣಾವಧಿ ಅಧಿಕಾರಿಗಳೇ ಇಲ್ಲ. ಪರಿಣಾಮ ಪ್ರವಾಸೋದ್ಯಮ ವ್ಯವಸ್ಥೆಯ ಆಳ-ಅಗಲದ ಅರಿವಿಲ್ಲದ ಅನ್ಯ ಇಲಾಖೆ ಅಧಿಕಾರಿಗಳೇ ಇಲ್ಲಿ ಪ್ರಭಾರಿಗಳಾಗಿ ಸೇವೆ ಸಲ್ಲಿಸುವ ಮಟ್ಟಿಗೆ ವಿಶ್ವವಿಖ್ಯಾತ ಸ್ಮಾರಕಗಳ ತವರು ಅಭಿವೃದ್ಧಿ ಹೀನವಾಗಿದೆ.

ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಪ್ರವಾಸೋದ್ಯಮ ಇಲಾಖೆ ಕಚೇರಿ ಇದ್ದು, ಸಹಾಯಕ ನಿರ್ದೇಶಕರ ದರ್ಜೆಯ ಅಧಿಕಾರಿ ಹೊಂದಿತ್ತು. 2003ರಲ್ಲಿ ಪಿ.ಎಚ್. ಸಾಬನ್ನವರ ಎಂಬ ಅಧಿಕಾರಿ ಪೂರ್ಣಾವಧಿಯಾಗಿ ಇಲಾಖೆಯವರೇ ಇದ್ದರು. ಇವರು ವರ್ಗವಾದ ಬಳಿಕ ಕುಲಕರ್ಣಿ ಎಂಬ ಇಲಾಖೆ ಅಧಿಕಾರಿಯನ್ನು ಇಲ್ಲಿಗೆ ನಿಯೋಜಿಸಿದರೂ ನೆರೆಯ ಬಾಗಲಕೋಟೆ ಜಿಲ್ಲೆಯ ಪ್ರಭಾರಿ ನೀಡಿದ್ದರಿಂದ ಈ ಅಧಿಕಾರಿ ಇಲ್ಲಿ ಕೆಲಸ ಮಾಡಿದ್ದೇ ಅಪರೂಪ. ಕುಲಕರ್ಣಿ ಅವರು ಕೆಲವೇ ತಿಂಗಳಲ್ಲಿ ವರ್ಗವಾಗುತ್ತಲೇ ರಾಜು ಎಂಬ ಅಧಿಕಾರಿ ಬಂದರೂ ಬಹಳ ದಿನ ಇಲ್ಲಿ ಕರ್ತವ್ಯ ನಿರ್ವಹಿಸಲಿಲ್ಲ.

ಅಲ್ಲಿಂದ 2010ರ ಸುಮಾರಿಗೆ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ವಿಭಾಗದ ರಾಜಶೇಖರ ಉಪಾಸೆ ಎಂಬ ಅಧಿಕಾರಿಯನ್ನು ಪ್ರಭಾರಿಯಾಗಿ ನೇಮಿಸಲಾಯಿತು. ಉಪಾಸೆ ಕೂಡ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಗೆ ಪ್ರಭಾರಿ ವಹಿಸಿಕೊಳ್ಳುವ ಮುನ್ನ ಯುವಜನ ಸೇವೆ-ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹುದ್ದೆಯಲ್ಲಿಯೂ ಪ್ರಭಾರಿಯಾಗಿದ್ದರು. ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಎರಡೂ ಇಲಾಖೆಗಳ ಪ್ರಭಾರಿ ವಹಿಸಿಕೊಂಡಿದ್ದರು. ಎರಡೆರಡು ಕಡೆಗಳಲ್ಲಿ ಪ್ರಭಾರಿ ಇದ್ದ ರಾಜಶೇಖರ ಉಪಾಸೆ ಸ್ಥಾನದಲ್ಲಿ ಸಾಂಖೀಕ ಇಲಾಖೆಯ ಕೋನರಡ್ಡಿ ಎಂಬ ಅಧಿಕಾರಿಯನ್ನು ಪ್ರಭಾರಿಯಾಗಿ ನೇಮಿಸಲಾಯಿತು. ಕೆಲ ತಿಂಗಳು ಸೇವೆ ಸಲ್ಲಿಸಿದ ಈ ಅಧಿಕಾರಿ ನಂತರ ತಾಪಂ ಇಒ ಆಗಿ ಬೇರೆಡೆಗೆ ವರ್ಗವಾದ ಕಾರಣ ಮತ್ತೆ ಇಲಾಖೆಗೆ ಮುಖ್ಯಸ್ಥರೇ ಇಲ್ಲವಾಗಿತ್ತು.

ಈ ಹಂತದಲ್ಲೇ ಇಲಾಖೆ ಅಧಿಕಾರ ನಡೆಸಲು ಮಾತ್ರು ಸಂಸ್ಥೆಯಲ್ಲಿ ಅಧಿಕಾರಿಗಳೇ ಇಲ್ಲದ ದುಸ್ಥಿತಿಯಲ್ಲಿದ್ದ ಪ್ರವಾಸೋದ್ಯಮ ಇಲಾಖೆ ಇದ್ದಕ್ಕಿಂತೆ 2016ರಲ್ಲಿ ವಿಜಯಪುರ ಕಚೇರಿಯನ್ನು ಸಹಾಯಕ ನಿರ್ದೇಶಕರ ದರ್ಜೆಯಿಂದ ಉಪ ನಿರ್ದೇಶಕರ ದರ್ಜೆಗೆ ಏರಿಸಿತು. ಈಗ ಕೆಳ ಹಂತದ ಅಧಿಕಾರಿಗಳು ಈ ಹುದ್ದಯಲ್ಲಿ ಪ್ರಭಾರಿಗಳಾಗಿ ಸೇವೆ ಸಲ್ಲಿಸಲು ಅವಕಾಶವೇ ಇಲ್ಲವಾಯಿತು. ಪರಿಣಾಮ ಕೆಎಎಸ್‌ ದರ್ಜೆ ಸಹಾಯಕ ಆಯುಕ್ತರ ದರ್ಜೆ ಅಧಿಕಾರಿಗಳನ್ನು ಮಾತ್ರ ಪ್ರಭಾರಿ ನೇಮಿಸಲು ಅವಕಾಶ ನೀಡಿತ್ತು.

ಇದರಿಂದ ಕೆಎಎಸ್‌ ಅಧಿಕಾರಿಯಾಗಿದ್ದ ವಿಜಯಪುರ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾಗಿದ್ದ ದುರುಗೇಶ ರುದ್ರಾಕ್ಷಿ ಅವರನ್ನು ಉಪ ನಿರ್ದೇಶಕರ ಸ್ಥಾನಕ್ಕೆ ಪ್ರಭಾರಿಯಾಗಿ ನೇಮಿಸಿತ್ತು. ಈ ಪ್ರಭಾರಿ ಅಧಿಕಾರಿ ಕೇವಲ 3 ತಿಂಗಳು ಕಳೆಯುವಷ್ಟರಲ್ಲಿ ಬಡ್ತಿ ಪಡೆದು ಜಿಪಂ ಉಪ ಕಾರ್ಯದರ್ಶಿಯಾಗಿ ವರ್ಗವಾದರು. ಈ ಹಂತದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮತ್ಯಾರು ದಿಕ್ಕು ಎಂದು ಯೋಚಿಸುವಾಗ ಕಂಡವರು ಅರಣ್ಯ ಇಲಾಖೆಯಲ್ಲಿ ನಿವೃತ್ತಿ ಅಂಚಿನಲ್ಲಿದ್ದ ಎಸ್‌ಎಫ್ಎಸ್‌ ದರ್ಜೆಯ ಮಹೇಶ ಕ್ಯಾತನ್‌. 2018 ಫೆಬ್ರುವರಿ 1ರಂದು ಪ್ರಭಾರಿ ಅಧಿಕಾರ ಸ್ವೀಕರಿಸಿದ ಕ್ಯಾತನ್‌, 2 ತಿಂಗಳು ಕಳೆದಯುತ್ತಲೇ ಇವರನ್ನು ಬದಲಿಸಲಾಯಿತು.

ಕೇವಲ ಎರಡು ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಗೆ ಪಶು ಸಂಗೋಪನೆ ಇಲಾಖೆ ಪಶು ವೈದ್ಯಾಧಿಕಾರಿ ಡಾ| ಭೀಮಾಶಂಕರ ಕನ್ನೂರ ಅವರನ್ನು ನಿಯೋಜಿಸಲಾಯಿತು. 28-3-2018ರಂದು ಪ್ರಭಾರಿ ಅಧಿಕಾರ ವಹಿಸಿಕೊಂಡ ಡಾ| ಕನ್ನೂರ, 36 ದಿನಗಳಲ್ಲೇ ಈ ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು. ಡಾ| ಕನ್ನೂರ ಅವರಿಗೆ ಪ್ರಭಾರಿ ಅಧಿಕಾರ ಹಸ್ತಾಂತರಿಸಿದ್ದ ಅರಣ್ಯ ಇಲಾಖೆ ಅಧಿಕಾರಿ ಮಹೇಶ ಕ್ಯಾತನ್‌ ಅವರೇ 2018 ಮೇ 3ರಂದು ಪ್ರಭಾರಿ ಅಧಿಕಾರ ಪಡೆದರು. ಕಳೆದ ಜುಲೈ 31ರಂದು ವಯೋ ನಿವೃತ್ತಿ ಹೊಂದಿದ್ದರಿಂದ ಈ ಹುದ್ದೆಗೆ ಮತ್ತೆ ಪ್ರಭಾರಿಗಳ ತಲಾಶ್‌ ನಡೆಯಿತು. ಅಂತಿಮವಾಗಿ ವಿಜಯಪುರ ಸಹಾಯಕ ಅಯುಕ್ತ ರಾಗಿರುವ ಸೋಮನಿಂಗ ಗೆಣ್ಣೂರ ಅವರಿಗೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಯ ಪ್ರಭಾರಿ ನೀಡಲಾಗಿದೆ.

ಪ್ರವಾಸೋದ್ಯಮ ಇಲಾಖೆ ಮಾತ್ರ ಇಲಾಖೆ ಅಧಿಕಾರಿಗಳೇ ಇಲ್ಲದೇ 13 ವರ್ಷಗಳನ್ನು ತಳ್ಳಿದ ಪ್ರವಾಸೋದ್ಯಮ ಇಲಾಖೆ ಬಡವಾಗಿ ಕುಳಿತಿದೆ. ಪ್ರವಾಸೋದ್ಯಮ ಇಲಾಖೆ ಮೂಲ ಸ್ವರೂಪ ತಿಳಿಯದ ಅನ್ಯ ಇಲಾಖೆಗಳ ಪ್ರಭಾರಿ ಅಧಿಕಾರಿಗಳು ಈ ಇಲಾಖೆ ಮೂಲ ಕಾರ್ಯವೈಖರಿ-ವಿಧಾನಗಳನ್ನು ಹುಡುಕಿ ಓದುವ ಹಂತದಲ್ಲೇ ಅವರು ಅಲ್ಲಿಂದ ಎತ್ತಂಗಡಿ ಆಗಿರುತ್ತಾರೆ. ಇಂಥ ಸ್ಥಿತಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ವಿಖ್ಯಾತ ಐತಿಹಾಸಿಕ ನೂರಾರು ಸ್ಮಾರಕಗಳನ್ನು ಮಡಿಲಲ್ಲಿ ತುಂಬಿಕೊಂಡಿರುವ ವಿಜಯಪುರ ಜಿಲ್ಲೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯವನ್ನೂ ಕಲ್ಪಿಸಲಾಗದೇ ತೊಳಲುತ್ತಿದೆ.

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.