ತವರಿಗೆ ಬಂದ ಗಂಗೆಗೆ ಉಡಿ ತುಂಬಿ ಸ್ವಾಗತಿಸಿದ ಸುಮಂಗಲೆಯರು

ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ದಕ್ಷಿಣ ಕಾಲುವೆಗೆ ನೀರು

Team Udayavani, Jul 28, 2019, 11:45 AM IST

28-July-23

ವಿಜಯಪುರ: ತಿಕೋಟಾ ತಾಲೂಕಿನ ಕವಟಗಿ ಗ್ರಾಮಕ್ಕೆ ನಾಲೆ ಮೂಲಕ ಹರಿದು ಬಂದ ಗಂಗೆಗೆ ಪೂಜೆ ಸಲ್ಲಿಸಿ ಉಡಿ ತುಂಬಿ ಬರ ಮಾಡಿಕೊಂಡ ಮಹಿಳೆಯರು.

ವಿಜಯಪುರ: ಅತಿ ಎತ್ತರದ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಜಿಲ್ಲೆಯ ಮಹತ್ವಾಕಾಂಕ್ಷೆಯ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ದಕ್ಷಿಣ ಕಾಲುವೆಗೆ ನೀರು ಹರಿಸಲಾಗಿದ್ದು, ಮೊದಲ ಬಾರಿ ತಮ್ಮೂರಿಗೆ ಕಾಲುವೆ ಮೂಲಕ ಹರಿದು ಬಂದ ಗಂಗೆಯನ್ನು ಕವಟಗಿ ಗ್ರಾಮದ ಮಹಿಳೆಯರು ಪೂಜೆ ಸಲ್ಲಿಸಿ ಗಂಗೆಗೆ ಉಡಿ ತುಂಬಿ ಬರಮಾಡಿಕೊಂಡರು. ಯುವಕರು ಓಕುಳಿಯಾಡಿ ಗಂಗೆಯನ್ನು ಅದ್ಧೂರಿಯಾರಿ ಸ್ವಾಗತಿಸಿದರು.

ಕೃಷ್ಣಾ ನದಿ ನೀರು ಕವಟಗಿಯ ಹತ್ತಿರ ಲಿಫ್ಟ್‌ ಮೂಲಕ ನದಿಯಿಂದ 165 ಮೀ. ಎತ್ತರದ ತಿಕೋಟಾ ಪ್ರದೇಶದ ಜಮೀನಿಗೆ ನೀರು ಮೇಲೆತ್ತಿ ನೀರಾವರಿ ಕಲ್ಪಿಸುವ ಎಂ.ಬಿ. ಪಾಟೀಲ ಕನಸಿನ ಯೋಜನೆ ಕೊನೆಗೂ ಕೈಗೂಡಿದೆ. ತಿಕೋಟಾ ಬಳಿಯ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕು ಕಾಲುವೆಗಳ ಮೂಲಕ ಯತ್ನಾಳ, ಇಟ್ಟಂಗಿಹಾಳ, ಕನಮಡಿ, ಕಣಮುಚನಾಳ ಈ ನಾಲ್ಕು ದಿಕ್ಕಿನಲ್ಲಿ ಕಾಲುವೆಗಳನ್ನು ನಿರ್ಮಿಸಲಾಗಿದೆ.

ಕಳೆದ ವಾರ ಯತ್ನಾಳ ಉತ್ತರ ಕಾಲುವೆಗೆ ನೀರು ಹರಿಸಲಾಗಿದ್ದು, ಇದೀಗ ದಕ್ಷಿಣ ಕಣಮುಚನಾಳ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಈ ಕಾಲುವೆ ತಿಕೋಟಾ-ಕಣಮುಚನಾಳ ಡೋಣಿ ವರೆಗೆ 19 ಕಿ.ಮೀ. ಉದ್ದ ಹರಿಯುತ್ತದೆ. ತಿಕೋಟಾ, ರತ್ನಾಪುರ, ತಾಜಪುರ, ಧನ್ಯಾಳ, ಕಣಮುಚನಾಳ ಗ್ರಾಮಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಿ ಉಳಿಕೆ ನೀರು ನಂತರ ಡೋಣಿ ನದಿ ಸೇರಲಿದೆ.

ನಮ್ಮ ಭಾಗಕ್ಕೆ ಕಾಲುವೆ ಮೂಲಕ ನೀರಾವರಿ ಎನ್ನುವುದು ಗಗನ ಕುಸುಮವಾಗಿತ್ತು. ಹೀಗಾಗಿ ಕೊಳವೆ ಬಾವಿ ಮೂಲಕ ದೊರೆಯುವ ಅಲ್ಪ ನೀರನ್ನೇ ಸಂಗ್ರಹಿಸಿಕೊಂಡು, ದ್ರಾಕ್ಷಿ, ದಾಳಿಂಬೆಯಂತಹ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದೇವೆ. ನಾಲೆ ಮೂಲಕ ನೀರು ಹರಿಸುತ್ತಿರುವುದು ನಮ್ಮ ಸಂತಸವನ್ನು ನೂರ್ಮಡಿಗೊಳಿಸಿದೆ. ನಮ್ಮ ಈ ಸಂಭ್ರಮಕ್ಕೆ ಕಾರಣವಾದ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಮಾಜಿ ಸಚಿವ ಎಂ.ಬಿ. ಪಾಟೀಲ ಅಭಿನಂದನಾರ್ಹರು ಎಂದು ರೈತ ಮುಖಂಡರಾದ ಆರ್‌.ಜಿ. ಯರನಾಳ, ಅನಿಲ ಹಿರೇಮಠ ಹೇಳುತ್ತಾರೆ.

ಕಳೆದ ವರ್ಷವೇ ಇಲ್ಲಿ ಕಾಲುವೆ ನಿರ್ಮಿಸಲು ಆರಂಭಿಸಿದ್ದರೂ ಕಾಲುವೆ ಕಾಮಗಾರಿ ಮುಗಿದಿಲ್ಲ. ಆದರೂ ಅದಾಗಲೇ ನೀರು ಹರಿಸಿದ್ದು, ಬರಗಾಲದಿಂದ ಕಂಗೆಟ್ಟಿದ್ದ ನಮಗೆ ಇದರಿಂದ ನಮಗೆ ಬಾರಿ ಉಪಯೋಗವಾಗಿದೆ ಎಂದು ಅನ್ನದಾತರು ಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಎಡವೆ ಸಂಭ್ರಮಿಸುತ್ತಾರೆ.

ಕೇವಲ ಕಾಲುವೆಗೆ ನೀರು ಹರಿಸುವುದಲ್ಲದೇ, ಸುತ್ತಲಿನ ಕೆರೆ, ಬಾಂದಾರಗಳು, ಹಳ್ಳಗಳಿಗೂ ನೀರು ಹರಿಸಿದ್ದು ಬೇಸಿಗೆಯಲ್ಲಿ ಈ ಬಾರಿ ನಮಗೆ ನೀರಿನ ತೊಂದರೆ ಆಗುವುದಿಲ್ಲ ಎನ್ನುವ ಭರವಸೆ ಇದೆ ಎನ್ನುವಾಗ ಈ ಭಾಗದ ರೈತರ ಮುಖದಲ್ಲಿ ಮಂದಾಹಸ ಮೂಡಿತ್ತು. ತಮ್ಮ ಗ್ರಾಮಕ್ಕೆ ನಾಲೆ ಮೂಲಕ ನೀರು ಹರಿದು ಬಂದ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಬರಮಾಡಿಕೊಂಡ ಸಂದರ್ಭದಲ್ಲಿ ಆರ್‌.ಜಿ. ಯರನಾಳ, ಅನಿಲ ಹಿರೇಮಠ, ರಾಮಜಿ ಮಿಸಾಳ, ಗುರು ಮುಚ್ಚಂಡಿ, ಶ್ರೀಶೈಲ ಆಲಳ್ಳಿ, ಗೌಸ‌ಪೀರ್‌ ಮೊಕಾಶಿ, ನಿಂಗನಗೌಡ ಬಿರಾದಾರ, ಮಹೇಶ ಪಾಟೀಲ, ಪರಮಾನಂದ ಕಲಬೀಳಗಿ, ಅಶೋಕ ಸಾವಳಸಂಗ, ಉಮೇಶ ಯರನಾಳ, ಅಡಿವೆಪ್ಪ ಬಿರಾದಾರ ಇದ್ದರು.

ಟಾಪ್ ನ್ಯೂಸ್

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಇತಿಹಾಸ ತಿರುಚಿಲ್ಲ ; ತಪ್ಪು ತಿದ್ದಿದ್ದೇವೆ; ರಾವಣ ಸಂಸ್ಕೃತಿ ಬಿಂಬಿಸುವ ಪಠ್ಯಕ್ಕೆ ತಿಲಾಂಜಲಿ

ಇತಿಹಾಸ ತಿರುಚಿಲ್ಲ ; ತಪ್ಪು ತಿದ್ದಿದ್ದೇವೆ; ರಾವಣ ಸಂಸ್ಕೃತಿ ಬಿಂಬಿಸುವ ಪಠ್ಯಕ್ಕೆ ತಿಲಾಂಜಲಿ

ಶಕ್ತಿ ಸೌಧದ ಆವರಣದಲ್ಲಿ ಅಂಬೇಡ್ಕರ್‌ ಸ್ಫೂರ್ತಿ ಭವನ

ಶಕ್ತಿ ಸೌಧದ ಆವರಣದಲ್ಲಿ ಅಂಬೇಡ್ಕರ್‌ ಸ್ಫೂರ್ತಿ ಭವನ

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗಡಿ ನಿಗದಿಗೆ ಮಾರ್ಗಸೂಚಿ

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗಡಿ ನಿಗದಿಗೆ ಮಾರ್ಗಸೂಚಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

ಆಗುಂಬೆಯಿಂದ “ವರುಣ’ ಉಡುಪಿಗೆ ಶಿಫ್ಟ್?

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

ಮಾದರಿಯಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇಗುಲ ನಿರ್ಮಾಣ

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.