ಕಲ್ಲಂಗಡಿ ಬೆಳೆ ಕ್ಷೇತ್ರಗಳಿಗೆ ವಿಜ್ಞಾನಿಗಳ ಭೇಟಿ

Team Udayavani, Jan 19, 2020, 6:20 PM IST

ಶಹಾಪುರ: ತಾಲೂಕಿನ ಕಲ್ಲಂಗಡಿ ಬೆಳೆ ಕ್ಷೇತ್ರಗಳಿಗೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಕೀಟಬಾಧೆ ನಿವಾರಣೆಗೆ ಸಲಹೆ ನೀಡಿದರು.

ಬೆಳೆಗೆ ಕೀಟಗಳ ಹಾವಳಿ ಆಗುತ್ತಿದ್ದು, ಇವುಗಳ ಹತೋಟಿಗೆ 4 ಗ್ರಾಂ ಕಾರ್ಬಾರಿಲ್‌ ಶೇ.50 ಡಬ್ಲೂಪಿ ಅಥವಾ 0.2 ಗ್ರಾಂ ಇಮಿಡಾಕ್ಲೋಪ್ರಿಡ್‌ 70 ಡಬ್ಲೂಪಿ 1.0 ಲೀಟರ್‌ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.

ರೋಗಗಳ ಬಾಧೆ ಕಂಡು ಬಂದಿದ್ದು, ಇವುಗಳ ಹತೋಟಿಗಾಗಿ 0.5 ಗ್ರಾಂ ಕಾರ್ಬೆಂಡಜಿಮ್‌ 50 ಡಬ್ಲೂಪಿ ಅಥವಾ 2 ಗ್ರಾಂ ಜೈನೆಬ್‌ 75 ಡಬ್ಲೂಪಿ ಅಥವಾ 0.33 ಗ್ರಾಂ ಬೆನೊಮಿಲ್‌ 50 ಡಬ್ಲೂಪಿ 1 ಲೀಟರ್‌ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು ಎಂದು ಸೂಚಿಸಿದರು.

ಕಲ್ಲಂಗಡಿ ಬೇಸಿಗೆ ಕಾಲದ ಮುಖ್ಯವಾದ ಬೆಳೆ. ಕಾಯಿ ಹಣ್ಣಾಗುವಾಗ ಒಣ ಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಯಾದಗಿರಿ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕಲ್ಲಂಡಗಿ ಬೆಳೆಯುತ್ತಿದ್ದಾರೆ. ಮರಕಲ್‌, ಕೊಳ್ಳೂರಿನಲ್ಲಿ ವೀರೇಶ, ನಿಂಗಯ್ಯ, ತಿರುಪತಿ ಹಾಗೂ ಮುಂತಾದ ರೈತರು ಸುಮಾರು 50 ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆ ಬೇಸಾಯ ಮಾಡುತ್ತಿರುವ ಕುರಿತು ಮಾಹಿತಿ ಪಡೆದರು.

ಡಾ| ಶಿವಾನಂದ ಹೊನ್ನಾಳಿ, ಡಾ| ರವಿ ಪೂಜಾರಿ, ಡಾ| ಹಣಮಂತ ಜತೆಗೆ ವಿಸ್ತರಣಾ ಮುಂದಾಳು ಡಾ| ಬಿ.ಎಸ್‌. ರೆಡ್ಡಿ ಹಾಗೂ ರೈತರಾದ ಬನ್ನಪ್ಪ, ಮಲ್ಲಯ್ಯ ಜಲಕಂಠಿ ಇದ್ದರು. ತೋಟಗಾರಿಕೆ ಬೆಳೆಗಳ ಮಾಹಿತಿಗಾಗಿ ರೈತರಿಗೆ ಸಮಗ್ರ ತೋಟಗಾರಿಕೆ ಕೈಪಿಡಿ ನೀಡಲಾಯಿತು. ಹೆಚ್ಚಿನ ಮಾಹಿತಿಗೆ ಭೀಮರಾಯನಗುಡಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಬೇಕು ಅಥವಾ 7411360263, 9742027533, 9448437313 ಸಂಖ್ಯೆಗೆ
ಸಂಪರ್ಕಿಸಲು ಕೋರಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಯಾದಗಿರಿ: ಜಿಲ್ಲಾಡಳಿತ ವತಿಯಿಂದ ಕಾಯಕ ಶರಣರ ಜಯಂತ್ಯೋತ್ಸವ ಕಾರ್ಯಕ್ರಮ ಫೆ. 21ರಂದು ಬೆಳಗ್ಗೆ 11:00ಕ್ಕೆ ಜಿಲ್ಲಾಡಳಿತ ಭವನದಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ ...

  • ಸುರಪುರ: ಖಾಕಿ ಬಟ್ಟೆ ಧರಿಸಿ ತಲೆ ಮೇಲೆ ಹ್ಯಾಟ್‌, ಕೈಯಲ್ಲಿ ಲಾಠಿ ಹಿಡಿದು ಜನರನ್ನು ಎದುರಿಸಿ ಕೆಲಸ ಮಾಡುವ ಕಾಲ ಈಗಿಲ್ಲ. ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡುವುದು...

  • ಯಾದಗಿರಿ: ಸಂತ ಸೇವಾಲಾಲ್‌ ಮಹಾರಾಜರ ಆಶಯದಂತೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಶಾಸಕ ವೆಂಕಟರೆಡ್ಡಿ...

  • ಯಾದಗಿರಿ: ಕೈಗಾರಿಕೆ ಪ್ರದೇಶದಲ್ಲಿ ಭೂಸ್ವಾಧೀನವಾದ ದಶಕದ ಬಳಿಕ ಇನ್ವೆಸ್ಟ್‌ ಕರ್ನಾಟಕ ಮೂಲಕ ಜಿಲ್ಲೆಯಲ್ಲಿ 796 ಕೋಟಿ ರೂ. ಬಂಡವಾಳ ಹೂಡಿಕೆಗೆ ಹಲವು ಕಂಪನಿಗಳೊಂದಿಗೆ...

ಹೊಸ ಸೇರ್ಪಡೆ

  • ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌-ಜನವರಿ ತಿಂಗಳ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆ(ಸಿಎಡಿ)ಯ ಮೇಲೆ ಚಿನ್ನದ ಆಮದು ಶೇ.9ರಷ್ಟು ಕುಸಿದು ಸುಮಾರು...

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...