Udayavni Special

ಅತಿವೃಷ್ಟಿ: ರಕ್ಷಣಾ ಕಾರ್ಯ ಚುರುಕಿಗೆ ಸಚಿವ ಚವ್ಹಾಣ ಸೂಚನೆ


Team Udayavani, Aug 19, 2020, 5:57 PM IST

ಅತಿವೃಷ್ಟಿ: ರಕ್ಷಣಾ ಕಾರ್ಯ ಚುರುಕಿಗೆ ಸಚಿವ ಚವ್ಹಾಣ ಸೂಚನೆ

ಯಾದಗಿರಿ: ಪ್ರತಿ ವರ್ಷವೂ ಕೃಷ್ಣಾ ನದಿಗೆ ಹೆಚ್ಚಿನ ನೀರು ಹರಿಸುವುದರಿಂದ ಅತೀವೃಷ್ಟಿಯಿಂದಾಗಿ ಸಂಭವಿಸುತ್ತಿರುವ ಹಾನಿ ತಡೆಯುವ ನಿಟ್ಟಿನಲ್ಲಿ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಸೇತುವೆ 17 ಮೀಟರ್‌ ಎತ್ತರಿಸಲು ಪ್ರಸ್ತಾವನೆ ಸಿದ್ಧವಾಗಿದೆ ಎಂದು ಪಶು ಸಂಗೋಪನೆ, ವಕ್ಫ್ , ಹಜ್‌ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸೇತುವೆಯ ಈಗಿರುವ ಎತ್ತರ 6 ಮೀಟರ್‌ನಿಂದ 17 ಮೀಟರ್‌ಗೆ ಹೆಚ್ಚಿಸುವ ಕುರಿತಂತೆ 100 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರ ಅನುದಾನ ಬಿಡುಗಡೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ಕೊಳ್ಳೂರು(ಎಂ) ಗ್ರಾಮದ ಸೇತುವೆ ಮುಳುಗಡೆಯಾಗಿದ್ದು ನದಿ ಪಾತ್ರದ ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ದೂರವಾಣಿ ಕರೆ ಮುಖಾಂತರ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿರುವ ಸಚಿವರು, ಸೇತುವೆ ಮುಳುಗಡೆಯಿಂದಾಗಿ ಜಿಲ್ಲೆಯಲ್ಲಿ ಸಂಭವಿಸಿರುವ ಹಾನಿಯ ಬಗ್ಗೆ ವಿವರಣೆ ಪಡೆದಿದ್ದಾರೆ.ಮಹಾರಾಷ್ಟ್ರ ಸೇರಿದಂತೆ ವಿವಿಧಭಾಗಗಳಲ್ಲಿ ಭಾರೀ ಮಳೆಯಾಗಿರುವ  ಪ್ರಯುಕ್ತ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.85 ಲಕ್ಷ ಕ್ಯೂಸೆಕ್‌ ನೀರು ಹರಿಯುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳು ಜಲಾವೃತಗೊಂಡಿವೆ. ಈ ಭಾಗಗಳಲ್ಲಿ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆಗಳಿರುವುದರಿಂದ ಜನತೆಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸಬೇಕು. ಹಾಗೆಯೇ ಹಾನಿಗೆ ಒಳಗಾಗಬಹುದಾದ ಪ್ರದೇಶಗಳನ್ನು ಗುರುತಿಸಿ, ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸವಾಗಬೇಕು ಎಂದು ನಿರ್ದೇಶನ ನೀಡಿದ್ದಾರೆ. ಅಗತ್ಯವಿರುವ ಕಡೆಗಳಲ್ಲಿ ಕೂಡಲೇ ಎನ್‌ಡಿಆರ್‌ಎಫ್‌ ತಂಡ ಮತ್ತು ಬೋಟ್‌ಗಳನ್ನು ಕಳುಹಿಸಿ ತುರ್ತಾಗಿ ರಕ್ಷಣೆಗೆ ಧಾವಿಸಬೇಕು. ಅತೀವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸಂಭವಿಸಿರುವ ಬೆಳೆ ಹಾನಿ ಕುರಿತಂತೆ ಸಮೀಕ್ಷೆ ನಡೆಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿನಿತ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

hatras

ನಮ್ಮ ಅನುಮತಿಯಿಲ್ಲದೆ, ಪೊಲೀಸರಿಂದ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ: ಕುಟುಂಬಸ್ಥರ ಆರೋಪ

matu

ಪ್ರವಾಹದಿಂದ ಹಾನಿಯಾದ ಮಟ್ಟುಗುಳ್ಳ ಬೆಳೆಗೆ ಪರಿಹಾರ ನೀಡಲು ಪ್ರಾಮಾಣಿಕಪ್ರಯತ್ನ: ಶಾಸಕ ಮೆಂಡನ್

ಲಂಕಾದಲ್ಲಿಗೋಹತ್ಯೆ ನಿಷೇಧ

ಲಂಕಾದಲ್ಲಿ ಗೋಹತ್ಯೆ ನಿಷೇಧ

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

ಮಾಸ್ಕ್ ಧರಿಸದಿದ್ದರೆ ಕ್ರಮ; ದಂಡ ಪ್ರಯೋಗಕ್ಕೆ ರಾಜ್ಯ ಸರಕಾರದ ಸಿದ್ಧತೆ

ಮಾಸ್ಕ್ ಧರಿಸದಿದ್ದರೆ ಕ್ರಮ; ದಂಡ ಪ್ರಯೋಗಕ್ಕೆ ರಾಜ್ಯ ಸರಕಾರದ ಸಿದ್ಧತೆ

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ; ನಾಳೆಯಿಂದ ಹೊಸ ನಿಯಮ ಜಾರಿ

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ; ನಾಳೆಯಿಂದ ಹೊಸ ನಿಯಮ ಜಾರಿ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

YG-TDY-2

ತಾಪಂ ಉಪಾಧ್ಯಕ್ಷೆಯಾಗಿ ಲಲಿತಾ ಅವಿರೋಧ ಆಯ್ಕೆ

ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ

ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು

yg-tdy-1

ನಾರಾಯಣಪುರ: ಸತತ ಮಳೆಗೆ ಕುಸಿದ ಮನೆಗಳು

ಕರ್ನಾಟಕ ಬಂದ್‌ ಗೆ ಬೆಂಬಲ

ಕರ್ನಾಟಕ ಬಂದ್‌ ಗೆ ಬೆಂಬಲ

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ



ಹೊಸ ಸೇರ್ಪಡೆ

hatras

ನಮ್ಮ ಅನುಮತಿಯಿಲ್ಲದೆ, ಪೊಲೀಸರಿಂದ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ: ಕುಟುಂಬಸ್ಥರ ಆರೋಪ

matu

ಪ್ರವಾಹದಿಂದ ಹಾನಿಯಾದ ಮಟ್ಟುಗುಳ್ಳ ಬೆಳೆಗೆ ಪರಿಹಾರ ನೀಡಲು ಪ್ರಾಮಾಣಿಕಪ್ರಯತ್ನ: ಶಾಸಕ ಮೆಂಡನ್

ಲಂಕಾದಲ್ಲಿಗೋಹತ್ಯೆ ನಿಷೇಧ

ಲಂಕಾದಲ್ಲಿ ಗೋಹತ್ಯೆ ನಿಷೇಧ

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.