ಕಾರ್ಯಾರಂಭವಾಗದ ಕುಡಿವ ನೀರಿನ ಘಟಕಗಳು

Team Udayavani, Jun 26, 2019, 10:31 AM IST

ಯಡ್ರಾಮಿ: ಕನ್ಯಾ ಪ್ರೌಢಶಾಲೆ ತರಗತಿ ಕೋಣೆಗಳ ಪಕ್ಕದಲ್ಲಿಯೇ ಪ್ರಾರಂಭಿಸಲಾಗಿರುವ ನೀರಿನ ಘಟಕ.

ಯಡ್ರಾಮಿ: ಸಾರ್ವಜನಿಕರಿಗೆ, ಮಕ್ಕಳಿಗೆ ಕುಡಿಯಲು ಶುದ್ಧ ನೀರು ಕೊಡುವ ಮಹತ್ವದ ಕೆಲಸ ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳ ಜವಾಬ್ದಾರಿ ಆಗಿದೆ. ಆದರೆ ಅಳವಡಿಸಲಾದ ಕುಡಿಯುವ ನೀರಿನ ಘಟಕಗಳು ತಾಲೂಕು ಸೇರಿದಂತೆ ಮಳ್ಳಿ ಗ್ರಾಮದಲ್ಲಿ ಪ್ರಾರಂಭವಾಗದೇ ಹೆಸರಿಗಷ್ಟೇ ಸೀಮಿತವಾಗಿವೆ.

ಯಡ್ರಾಮಿ ಪಟ್ಟಣದ ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಶುದ್ಧ ನೀರಿನ ಘಟಕ ಅಳವಡಿಸಿ ವರ್ಷ ಕಳೆಯುತ್ತಿದ್ದರೂ ಪ್ರಾರಂಭವಾಗಿಯೇ ಇಲ್ಲ. ಅಳವಡಿಸುವಾಗ ಈ ಘಟಕ ವಿದ್ಯಾರ್ಥಿಗಳಿಗೆ ಎಂದು ಹೇಳಲಾಗಿತ್ತು. ಅದನ್ನೀಗ ಸಾರ್ವಜನಿಕವಾಗಿ ಉಪಯೋಗಿಸಬೇಕು ಎಂದು ಸ್ಥಳೀಯ ಪಂಚಾಯತಿ ಅಧಿಕಾರಿಗಳು ಹೇಳುತ್ತಿದ್ದಾರೆ ಎನ್ನುವ ಆರೋಪ ಶಾಳೆಯ ಶಿಕ್ಷಕರದ್ದಾಗಿದೆ.

ಶಾಲೆ ಆವರಣದಲ್ಲಿ ನೀರಿನ ಘಟಕ ಅಳವಡಿಸಿ ಅದನ್ನು ಸಾರ್ವಜನಿಕವಾಗಿ ಬಳಸಿದರೆ ಶಾಲೆ ವಿದ್ಯಾರ್ಥಿಗಳ ಆಟ-ಪಾಠಕ್ಕೆ ತೊಂದರೆ ಆಗುತ್ತದೆ ಎನ್ನುವ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗಿಲ್ಲವೇ? ಎನ್ನುತ್ತಾರೆ ಸಾರ್ವಜನಿಕರು.

ಇದು ಪಟ್ಟಣದ ಸಮಸ್ಯೆಯಾದರೆ, ಮಳ್ಳಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾದ ನೀರಿನ ಘಟಕವೂ ಪ್ರಾರಂಭವಾಗದೇ ಹಳೆಕಟ್ಟಡದಲ್ಲಿ ಅನಾಥವಾಗಿ ನಿಂತಿದೆ. ಸಾರ್ವಜನಿಕರಿಗೂ ಇಲ್ಲ, ಶಾಲೆಗೂ ಪ್ರಯೋಜನಕ್ಕೆ ಬಾರದೇ ಹಾಳಾಗತ್ತಿದೆ.

ಯೋಜನೆಗಳ ಹೆಸರಿನಲ್ಲಿ ಹಣ ಖರ್ಚು ಮಾಡಿ ಘಟಕಗಳನ್ನು ಅಳವಡಿಸಿದ ಮಾತ್ರಕ್ಕೆ ಕೆಲಸ ಮುಗಿಯಿತು ಎನ್ನುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಪರಿಶೀಲಿಸಬೇಕಿಗಿದೆ. ಅಳವಡಿಸಲಾದ ನೀರಿನ ಘಟಕಗಳು ಶಾಲೆಗಳಿಗಾಗಲಿ, ಸಾರ್ವಜನಿಕರಿಗಾಗಲಿ ಸದ್ಭಳಕೆ ಆದಲ್ಲಿ ಯೋಜನೆಗಳ ಕಾರ್ಯ ಸಾರ್ಥಕವಾಗುವುದು ಎನ್ನುವ ಅರಿವು ಸಂಬಂಧಪಟ್ಟವರಿಗೆ ಆಗಬೇಕಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಜೇವರ್ಗಿ: ಪಟ್ಟಣದ ಶಾಸ್ತ್ರೀಚೌಕ್‌ ಬಡಾವಣೆಯ ಸಿಂಡಿಕೇಟ್‌ ಬ್ಯಾಂಕ್‌ ಹತ್ತಿರದ ಹಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಳು ಬಿದ್ದು ಕಸದ ತೊಟ್ಟಿ ಹಾಗೂ...

  • ಯಡ್ರಾಮಿ: ಯಲಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 416 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಇವರಿಗೆ ಕಲಿಸಲು ನಾಲ್ವರು ಶಿಕ್ಷಕರು ಇದ್ದು, ಇದರಲ್ಲೊಬ್ಬರು...

  • ಕಲಬುರಗಿ: ತತ್ವಪದಗಳು ಕನ್ನಡ ಸಾಹಿತ್ಯದಲ್ಲಿ ಆಳ ಹಾಗೂ ಅಗಲವಾಗಿರುವಷ್ಟು ಬೇರ್ಯಾವುದೇ ಭಾಷೆಯ ಸಾಹಿತ್ಯದಲ್ಲಿ ವಿಸ್ತಾರವಾಗಿ ವ್ಯಾಪಿಸಿಕೊಂಡಿಲ್ಲ ಎಂದು ಚಿಂತಕ...

  • ಕಲಬುರಗಿ: ಸೂರ್ಯನಗರಿ, ತೊಗರಿ ಕಣಜ ಕಲಬುರಗಿಯಲ್ಲಿ ಮೂರು ದಶಕಗಳ ಬಳಿಕ ನಡೆಯುತ್ತಿರುವ ನುಡಿ ಜಾತ್ರೆಯಲ್ಲಿ ಎಲ್ಲರಿಗೂ ಏಕರೂಪ ಊಟವನ್ನೇ ನೀಡುವ ನಿರ್ಧಾರಕ್ಕೆ...

  • ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣಕ್ಕೆ ಶುಕ್ರವಾರ ಪೂಜೆ ಸಲ್ಲಿಸಲಾಯಿತು.  ‌ ಶಾಸಕರಾದ...

ಹೊಸ ಸೇರ್ಪಡೆ