Udayavni Special

ಉದ್ದ ಗಿಡ್ಡ ಫ್ಯಾಷನ್‌!


Team Udayavani, Sep 12, 2020, 3:16 PM IST

13-july-14.jpg

ಫ್ಯಾಷನ್‌ ಲೋಕದಲ್ಲಿ ಹೊಸತನವೆಂಬುದು ನಿರಂತರ. ಅದರಲ್ಲಿಯೂ ಲೇಡಿಸ್‌ ಫ್ಯಾಷನ್‌ ಜಗತ್ತಿನಲ್ಲಿ ಬದಲಾವಣೆಗಳು, ಹೊಸ ಫ್ಯಾಷನ್‌ ಗಳು ಆಗಾಗ ಬರುತ್ತಲೇ ಇರುತ್ತವೆ. ಒಮ್ಮೆ ಲಾಂಗ್‌ ಟಾಪ್‌, ಇನ್ನೊಮ್ಮೆ ಶಾರ್ಟ್‌ ಟಾಪ್‌, ಮಗದೊಮ್ಮೆ ಸಾಧಾರಣ ಉದ್ದ ಹೊಂದಿರುವ ಟಾಪ್‌. ಈ ನಡುವೆ ಶರ್ಟ್‌, ಜೀನ್ಸ್‌ ಟಾಪ್‌ ಎಲ್ಲವನ್ನೂ ನೋಡಿಯಾಯಿತು. ಅವನ್ನೆಲ್ಲ ಧರಿಸಿ ಖುಷಿ ಪಟ್ಟದ್ದೂ ಆಯಿತು. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಮುಂಭಾಗದಲ್ಲಿ ಶಾರ್ಟ್‌ ಮತ್ತು ಹಿಂಭಾಗದಲ್ಲಿ ಉದ್ದ ಇರುವ ಬಟ್ಟೆಗಳು.

ಹೊಸ ಮಾದರಿಯ ಟಾಪ್‌ ಇದೇನಪ್ಪ ಉದ್ದ-ಗಿಡ್ಡ ಡ್ರೆಸ್‌ ಎಂದು ಆಶ್ಚರ್ಯಗೊಳ್ಳಬೇಡಿ. ಲೇಡೀಸ್‌ ಫ್ಯಾಶನ್‌ ಪ್ರಪಂಚದಲ್ಲಿ ಇದೀಗ ಹೊಸ ಮಾದರಿಯ ಬಟ್ಟೆ. ಇದೂ ಕುರ್ತಾ ಟಾಪ್‌. ಆದರೆ ಮಾಮೂಲಿ ಕುರ್ತಾಗಳಂತೆ ಸಮಾನಾಂತರ ಅಳತೆಯನ್ನು ಹೊಂದಿಲ್ಲ. ಬದಲಾಗಿ ಮುಂಭಾಗದಲ್ಲಿ ಮೊಣಕಾಲಿನವರೆಗೆ ಬಟ್ಟೆ ಇದ್ದರೆ, ಹಿಂಭಾಗದಲ್ಲಿ ಮೊಣ ಕಾಲಿನಿಂದ ಕೆಳಗಿನವರೆಗೆ ಬಟ್ಟೆಯನ್ನು ಹೊಲಿಯಲಾಗಿರುತ್ತದೆ. ಹಿಂಭಾಗ ತೀರಾ ಉದ್ದವಿದ್ದು, ಮುಂದಿನ ಭಾಗ ಕಡಿಮೆ ಉದ್ದ ಹೊಂದಿರುವುದರಿಂದ ಜೀನ್ಸ್‌ನೊಂದಿಗೆ ಈ ಟಾಪ್‌ನ್ನು ಧರಿಸಿದರೆ ಸೌಂದರ್ಯ ಇಮ್ಮಡಿಸುತ್ತದೆ.

ಇದನ್ನೂ ಓದಿ: ಪೋಷಕಾಂಶಗಳ ಕಣಜ: ಬೂದು ಕುಂಬಳಕಾಯಿ ಆರೋಗ್ಯದ ರಕ್ಷಣೆಗೆ ಉತ್ತಮ ತರಕಾರಿ

ಶರ್ಟ್‌ನಲ್ಲೂ
ವಿಶೇಷವೆಂದರೆ ಈ ಟಾಪ್‌ ಮಾದರಿಯಲ್ಲಿ ಶರ್ಟ್‌ ಕೂಡಾ ಲಭ್ಯವಿದೆ. ಮಾಮೂಲಿ ಶರ್ಟ್‌ನಂತೆಯೇ ಆದರೆ ಶರ್ಟ್‌ನ ಮುಂದಿನ ಭಾಗ ಸಣ್ಣದಾಗಿದ್ದು, ಹಿಂಭಾಗ ಉದ್ದವಿರುತ್ತದೆ. ಒಮ್ಮೊಮ್ಮೆ ಶರ್ಟ್‌ನ ಹಿಂದಿನ ಭಾಗ ಮೊಣಕಾಲಿನವರೆಗೆ ತಾಗುವಷ್ಟು ಉದ್ದವಿದ್ದು, ಇದು ನೋಡಲು ಆಕರ್ಷಕವಾಗಿ ಕಾಣುತ್ತದೆ. ಫುಲ್‌ ಲೆಗ್‌ ಜೀನ್ಸ್‌ ನೊಂದಿಗೆ ಈ ಶರ್ಟ್‌ ಧರಿಸಿದರೆ ಹೆಚ್ಚು ಒಪ್ಪುತ್ತದೆ. ಚೆಕ್ಸ್‌, ಪ್ಲೈನ್‌, ವಿಭಿನ್ನ ಬಹು ಬಣ್ಣಗಳನ್ನು ಹೊಂದಿರುವ ಶರ್ಟ್‌ ಗಳೂ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಶಾಪಿಂಗ್‌ಗೆ ಧರಿಸಿ
ಮಾರುಕಟ್ಟೆಯಲ್ಲಿ ಎಲ್ಲ ಹೊಸ ವಸ್ತಗಳೂ ಫ್ಯಾಷನ್‌ ಪ್ರಿಯರಿಗೆಂದೇ ಆಗಮಿಸಿರುತ್ತವೆ. ಆದರೆ ಹೊಸ ಫ್ಯಾಷನ್‌ ಎಂದುಕೊಂಡು ಅದನ್ನು ಎಲ್ಲ ಕಡೆಗೆ ಬೇಕಾಬಿಟ್ಟಿ ಧರಿಸಿಕೊಂಡು ಹೋಗಲಾಗುವುದಿಲ್ಲ. ಪ್ರಮುಖವಾಗಿ ಕಾಲೇಜಿಗೆ ತೆರಳುವಾಗ, ಉದ್ಯೋಗಕ್ಕೆ ಹೋಗುವಾಗೆಲ್ಲ ಈ ಫ್ಯಾಶನ್‌ ಡ್ರೆಸ್‌ಗಳನ್ನು ಧರಿಸಲಾಗದು. ಅಂತೆಯೇ ಈ ಡ್ರೆಸ್‌ ಕೂಡಾ. ಕೆಲಸದ ಸ್ಥಳ ಮತ್ತು ಕಾಲೇಜಿನ ವಾತಾವರಣಕ್ಕೆ ಈ ಡ್ರೆಸ್‌ ಹೊಂದಿಕೆಯಾಗದಿರುವುದರಿಂದ ಧರಿಸದಿರುವುದೇ ಉತ್ತಮ. ಆದರೆ ಶಾಪಿಂಗ್‌ಗೆ ಹೋಗುವಾಗ, ಸಿನೆಮಾಕ್ಕೆ ಹೋಗುವಾಗ ಅಥವಾ ಪಿಕ್‌ನಿಕ್‌, ಪ್ರವಾಸ, ಪಾರ್ಟಿ ಮುಂತಾದೆಡೆ ಹೋಗುವಾಗ ಧರಿಸಲು ಅತ್ಯಂತ ಸೂಕ್ತ.

ಇದನ್ನೂ ಓದಿ:ರೆಗ್ಯುಲರ್ ಟೀ ಬದಲು ಇದನ್ನು ಕುಡಿದು ನೋಡಿ

ಹೊಲಿದು ಕೊಡುವ ವ್ಯವಸ್ಥೆ
ಇಂತಹ ಟಾಪ್‌ ಗಳನ್ನು  ಟೈಲರಿಂಗ್‌ ಶಾಪ್‌ ಗಳಲ್ಲಿ  ಬೇಕಾದ ರೀತಿಯಲ್ಲಿ ಹೊಲಿದು ಕೊಡುವ ವ್ಯವಸ್ಥೆಯೂ ಇದೆ. ಆದರೆ ಟಾಪ್‌ ಗಳನ್ನು  ಸ್ಟಿಚ್‌ ಮಾಡಿ ಧರಿಸಿದರೂ, ಶರ್ಟ್‌ಗಳಲ್ಲಿ ರೆಡಿಮೇಡ್‌ ಶರ್ಟ್‌ಗಳೇ ಸೂಕ್ತ. ಕೇವಲ ಕಪ್ಪು, ಬಿಳುಪು, ನೀಲಿ ಬಣ್ಣದ ಜೀನ್ಸ್‌ಗಳ ಬದಲು ಪ್ರಸ್ತುತ ಕಲರ್‌ಫುಲ್‌ ಜೀನ್ಸ್‌ ಗಳು ಬಂದಿರುವುದರಿಂದ ಅಂತಹ ಜೀನ್ಸ್‌ ಪ್ಯಾಂಟ್‌ಗಳಿಗೆ ಈ ಟಾಪ್‌ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

kalapa

ಕಲಾಪಗಳಿಗೆ ಗದ್ದಲದ ಸೋಂಕು

ಚಂದ್ರನಲ್ಲಿ ಮೊದಲ ಮಹಿಳೆ ಇಳಿಸಲು ನಾಸಾ ಸಿದ್ಧತೆ

ಚಂದ್ರನಲ್ಲಿ ಮೊದಲ ಮಹಿಳೆ ಇಳಿಸಲು ನಾಸಾ ಸಿದ್ಧತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-december-10.gif

ಫ್ಯಾಶನ್‌ ಜಮಾನಾದ ಮಾಡೆಲ್‌ ನೀವಾಗಿ

ಕೈ ಅಂದ ಇಮ್ಮಡಿಗೊಳಿಸುವ “ಕರಿಮಣಿ ಬ್ರಾಸ್ಲೈಟ್”‌

ಕೈ ಅಂದ ಇಮ್ಮಡಿಗೊಳಿಸುವ “ಕರಿಮಣಿ ಬ್ರಾಸ್ಲೈಟ್”‌

ಪುಟ್ಟ ವಸ್ತ್ರ ; ಟ್ರೆಂಡ್‌ ಲೋಕದಲ್ಲಿ ಸಾಶ್‌ ಹವಾ

ಪುಟ್ಟ ವಸ್ತ್ರ ; ಟ್ರೆಂಡ್‌ ಲೋಕದಲ್ಲಿ ಸಾಶ್‌ ಹವಾ

ಫ್ಯಾಶನ್‌ ಫೋಟೋಗ್ರಫಿಯ ಬೆಳಕು

ಫ್ಯಾಶನ್‌ ಫೋಟೋಗ್ರಫಿಯ ಬೆಳಕು

3-agust-11.jpg

ಬಣ್ಣ ಬಣ್ಣದ ಹರಳುಗಳ ಟ್ರೆಂಡ್‌

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಅಭಿಮತ: ಬಂಧ ಮುಕ್ತವಾಗಲಿದೆ ಕೃಷಿ ಕ್ಷೇತ್ರ ಮುರಿಯಲಿದೆ ಏಜೆಂಟರ ಏಕಸ್ವಾಮ್ಯ!

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ವಿಶ್ವಸಂಸ್ಥೆಗಿದೆ ವಿಶ್ವಾಸದ ಕೊರತೆ

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ಗುಮಾಸ್ತನಿಗೆ 12 ಕೋಟಿ ರೂ. ಲಾಟರಿ!

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

ರಾಜ್ಯಸಭೆಯಲ್ಲಿ 7 ಮಸೂದೆ ಅಂಗೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.