ಮನೆಯೇ ಸ್ವರ್ಗ: ಮಾನಸಿಕ ಪ್ರತಿರಕ್ಷಣಾ ಗುಣ ಬೆಳೆಸಿಕೊಳ್ಳುವುದು ಹೇಗೆ?

ನಾಲ್ಕು ಗೋಡೆಯ ನಡುವೆ ಇದ್ದುಕೊಂಡು, ಈ ಸವಾಲುಗಳನ್ನು ಎದುರಿಸಲು ಸಾಕಷ್ಟು ಶಕ್ತಿಯ ಅವಶ್ಯಕತೆಯಿದೆ

Team Udayavani, Nov 20, 2020, 3:23 PM IST

ಮನೆಯೇ ಸ್ವರ್ಗ: ಮಾನಸಿಕ ಪ್ರತಿರಕ್ಷಣಾ ಗುಣ ಬೆಳೆಸಿಕೊಳ್ಳುವುದು ಹೇಗೆ?

ನಮ್ಮ ಒಳಗೆ ಏನಿದೆ ಎನ್ನುವುದಕ್ಕೆ ಹೋಲಿಸಿದರೆ ನಮ್ಮ ಹಿಂದೆ ಏನಿದೆ ಮತ್ತು ನಮ್ಮ ಮುಂದೆ ಏನಿದೆ ಎನ್ನುವುದು ಸಣ್ಣ ವಿಷಯ(R.W. Emerson). ಈಗಿರುವ ಪಿಡುಗು ನಮ್ಮ ಮನೆಗಳನ್ನು, ಶಾಲೆ, ಕಾಲೇಜು, ಪರೀಕ್ಷಾ ಕೇಂದ್ರ, ಪ್ಲೇಹೋಂ, ಯೋಗ ತರಬೇತಿ ಕೇಂದ್ರ, ಚಲನಚಿತ್ರ ಮಂದಿರ, ಹೋಟೆಲ್, ಗೋದಾಮು, ಆಸ್ಪತ್ರೆ, ಪ್ರವಾಸಿ ಕೇಂದ್ರ, ಕಛೇರಿ, ಬ್ರೌಸಿಂಗ್ ಕೇಂದ್ರ – ಇತ್ಯಾದಿಗಳಾಗಿ ಬದಲಾಯಿಸಿದೆ. ತಂದೆ ತಾಯಿಯರು ಅದಕ್ಕೆ ತಕ್ಕಂತೆ ಬಹುವಿಧದ ಪಾತ್ರಗಳನ್ನು ನಿಭಾಯಿಸಬೇಕಾಗಿದೆ. ಶಿಕ್ಷಕ, ತರಬೇತುದಾರ, ಮೇಲ್ವಿಚಾರಕ, ಕೆಲಸದಾಳು, ನೀರು ತರುವವ, ಅಡುಗೆ ಮಾಡುವವವರು, ದಾದಿ, ಯಜಮಾನ, ಮಾರ್ಗದರ್ಶಕ – ಇತ್ಯಾದಿ ನಾಲ್ಕು ಗೋಡೆಯ ನಡುವೆ ಇದ್ದುಕೊಂಡು, ಈ ಸವಾಲುಗಳನ್ನು ಎದುರಿಸಲು ಸಾಕಷ್ಟು ಶಕ್ತಿಯ ಅವಶ್ಯಕತೆಯಿದೆ. ಈ ಬದಲಾವಣೆಗಳಿಂದ ಉಂಟಾಗುವ ಒತ್ತಡವನ್ನು ನಿಭಾಯಿಸುವ ಕಾರ್ಯವಿಧಾನಗಳನ್ನು ರೂಢಿಸಿಕೊಳ್ಳಬೇಕಾಗಿದೆ. ಆದ್ದರಿಂದ ನಾವು ಮಾನಸಿಕ ಪ್ರತಿರಕ್ಷಣ ಗುಣವನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ.

ಕೆಳಗೆ ನಮೂದಿಸಿರುವ ಕೆಲವು ಸಲಹೆಗಳು ನಾವು ಮಾನಸಿಕ ಪ್ರತಿರಕ್ಷಣ ಗುಣವನ್ನು ರೂಢಿಸಿಕೊಳ್ಳಲು ಸಹಾಯವಾಗುತ್ತದೆ.

1.ಪ್ರಸ್ತುತ ಕಾಲದಲ್ಲಿದ್ದು ಆದ್ಯತೆಗಳಿಗೆ ಅನುಸಾರವಾಗಿ ನಮ್ಮ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು

ಸಕಾರಾತ್ಮಕ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ಈ ರೀತಿ ಗುಣಾತ್ಮಕ ಮನಸ್ಥಿತಿಯನ್ನು ರೂಢಿಸಿಕೊಳ್ಳುವಾಗ ಯಾವುದೇ ‘ಹಿನ್ನಡೆ’ಯನ್ನು ‘ಕಲಿಕೆಯ ಅವಕಾಶ’ ಎಂದು ಭಾವಿಸಬೇಕು.

ನಿಮ್ಮ ಕೆಲಸದಲ್ಲಿ ನಿಮಗೆ ಆಸಕ್ತಿಯಿರಲಿ ನಿರ್ಭಯವಾಗಿ ಕನಸುಕಾಣಿ. ಆ ಕನಸುಗಳು ಚಿಕ್ಕವೋ, ದೊಡ್ಡವೋ, ಅತ್ಯುತ್ಸಾಹದಿಂದ ಕೂಡಿದೆಯೋ ಎನ್ನುವುದು ಮುಖ್ಯವಲ್ಲ. ಕನಸುಗಳನ್ನು ನನಸು ಮಾಡಿಕೊಳ್ಳಲು ಕಲ್ಲುಮುಳ್ಳುಗಳಿಂದ ಕೂಡಿದ ಕಠಿಣವಾದ ಹಾದಿಯ ಬೆಟ್ಟವೇರಿ.

ವೃತ್ತಿಪರವಾದ ಅಥವಾ ವೈಯಕ್ತಿಕವಾದ 4 5 ಆದ್ಯತೆಗಳನ್ನು ಗುರುತಿಸಿ, ಆರಾಮ ವಲಯಕ್ಕೆ ವಿದಾಯ ಹೇಳುತ್ತಾ ವಾರದ ಕೆಲಸದ ಯೋಜನೆ ನಿಮ್ಮ ವೃತ್ತಿಪರ, ವೈಯಕ್ತಿಕ ಚಟುವಟಿಕೆಗಳನ್ನು ಅವಲೋಕಿಸಲು ಅವಕಾಶ ನೀಡಿ ಸಮಸ್ಯೆಯನ್ನು ಆಳವಾಗಿ ವಿಶ್ಲೇಷಿಸುತ್ತಾ ದಾರಿಗಡ್ಡವಾಗುವ ಸಂಭವನೀಯ ಅಡೆ ತಡೆಗಳನ್ನು ಗುರುತಿಸಿ ಪರಿಹಾರವನ್ನು ರೂಪಿಸಿಕೊಳ್ಳಿ.

ಇದನ್ನೂ ಓದಿ:ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಪೂರಕವಾದ ಮಾರ್ಗಗಳನ್ನು ಚಿಂತಿಸಿ, ಬದಲಾವಣೆಯನ್ನು ನಿರೀಕ್ಷಿಸಿ ಈ ಕಾರ್ಯವಿಧಾನದಲ್ಲಿ ತಪ್ಪುಗಳು ಖಂಡಿತಾ ಕಂಡುಬರುತ್ತವೆ. ಆ ತಪ್ಪುಗಳಿಂದ ಪಾಠಕಲಿತು ಸುಧಾರಿಸಿಕೊಳ್ಳಬಹುದು. ಈ ಮಾರ್ಗ ಗುರಿ ಮುಟ್ಟಲು ಸಹಾಯಕಾರಿ.

ನಿಮ್ಮ ನೇರವಾದ ಯೋಚನಾಶಕ್ತಿಯಿಂದ ನಿಮಗೆ ಸಮಸ್ಯೆಗಳನ್ನು ಪರಿಹರಿಸಲಾಗದಿದ್ದರೆ, ನಿಮ್ಮ ಸುಪ್ತ ಮನಸ್ಸಿಗೆ ಕೆಲಸಕೊಡಿ. ಯಾವಾಗಲೂ ಮುಕ್ತ ಮನಸ್ಸಿರಲಿ. ನಿಮಗೆ ಮುಕ್ತಾಯ ಹೇಗಿರಬೇಕು ಅಥವಾ ಯಾರಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಉಂಟಾಗಬಹುದು ಎಂದು ತಿಳಿಯದಿರಬಹುದು. ಆದರೆ ಹಿಂದಿನ ಅಥವಾ ಮುಂದಿನ ಜೀವನದ ಬಗ್ಗೆ ಚಿಂತಿಸದೆ ಸಕಾರಾತ್ಮಕ ಮನೋಭಾವ ಹೊಂದಿದ್ದು ನಿಮ್ಮ ಆದ್ಯತೆಗಳ ಬಗ್ಗೆ ನಿಖರವಾದ ವಿಚಾರಗಳಿದ್ದರೆ ಮಾನಸಿಕ ಪ್ರತಿರಕ್ಷಣ ಗುಣವನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.

2.ಮನಸ್ಸಿನ ಭಾವನೆಗಳನ್ನು ಅಂಗೀಕರಿಸಿ, ಅವುಗಳನ್ನು ಮುಕ್ತವಾಗಿ ಅಭಿವ್ಯಕ್ತಗೊಳಿಸುವುದು

ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಮತ್ತು ನೀವು ಏನು ಮಾಡಬೇಕೆಂದಿರುವಿರಿ ಎನ್ನುವುದನ್ನು ನಿಮ್ಮ ಸ್ನೇಹಿತರ ಅಥವಾ ಕುಟುಂಬದವರ ಹತ್ತಿರ ಹಂಚಿಕೊಳ್ಳಿ. ಭಾವನೆಗಳನ್ನು ಅಂಗೀಕರಿಸಿ ವ್ಯಕ್ತಪಡಿಸಬೇಕು. ಅವುಗಳನ್ನು ಮುಚ್ಚಿಟ್ಟುಕೊಳ್ಳದೆ ವ್ಯಕ್ತಪಡಿಸುವುದು ಒಳಿತು. ಅವುಗಳು ದುರ್ಬಲವಾಗಿದ್ದಲ್ಲಿ ಅಥವಾ ಖಂಡನೀಯವಾಗಿದ್ದಲ್ಲಿ ನಾಚಿಕೆ ಪಡುವ ಅವಶ್ಯಕತೆಯಿಲ್ಲ.

ನಿಮ್ಮ ವೃತ್ತಿಪರ ಪಾತ್ರ ನಿಮ್ಮ ವ್ಯಕ್ತಿತ್ವದ ಮಾನದಂಡವಲ್ಲ. ಅದರಲ್ಲೇ ಸಮಗ್ರವಾಗಿ ಮುಳುಗಬೇಡಿ. ನಿಮ್ಮ ಮಕ್ಕಳ ಪ್ರಯೋಗಗಳನ್ನು ಸಂಕಷ್ಟಗಳನ್ನೂ ತಾದಾತ್ಮತೆಯಿಂದ, ಅನುರೂಪದಿಂದ ಆಲಿಸಿ ಮತ್ತು ಅವರಿಗಿಷ್ಟವಾದುದನ್ನು ಮಾಡುತ್ತಾ ಅವರ ಜೊತೆ ಮೌಲಿಕ ಕ್ಷಣಗಳನ್ನು ಕಳೆಯಿರಿ. ನಿಮ್ಮ ಮನಸ್ಸು ಮುಕ್ತವಾಗಿದ್ದು ಕಲಿಯುತ್ತಾ ಕಲಿತಿದ್ದನ್ನು ವಿಶ್ಲೇಷಿಸುತ್ತಾ ಪುನ:ಪುನ: ಕಲಿತಿದ್ದನ್ನು ಕಲಿಯುತ್ತಾ ಹೋಗಲಿ. ಈ ರೀತಿ ಪರಸ್ಪರ ಬೆರೆಯುವುದರಿಂದ ಅಥವಾ ಒಡನಾಟದಿಂದ ಏನಾದರೊಂದು ಹೊಸದನ್ನು ಕಲಿಯುವ ಸಾಧ್ಯತೆಗಳಿವೆ. ಕೇಳುವುದರಿಂದ, ಓದುವುದರಿಂದ, ಬೇರೊಬ್ಬರ ಜೀವನ ಚರಿತ್ರೆಯಿಂದ ನಿಮಗೆ ಸ್ಪೂರ್ತಿ ಸಿಗಬಹುದು. ನಾವು ಈ ದಾರಿಯಲ್ಲಿ ಏಕಾಂಗಿಗಳಲ್ಲ. ಅನೇಕರು ಈ ದಾರಿಯಲ್ಲಿ ನಡೆದು ಪಟ್ಟುಬಿಡದೆ ಹೋರಾಡಿದ್ದಾರೆ. ನಮ್ಮ ನೀಳನೋಟದಿಂದ ಅವರ ಜೀವನದಿಂದ ಸ್ಪೂರ್ತಿಗೊಂಡು ಧೈರ್ಯಪಡೆಯಬೇಕು. ನಿಮ್ಮ ಪಯಣವನ್ನು ಆನಂದಿಸುತ್ತಾ ಮುಂದೆ ಸಾಗುತ್ತಾ ನಿಮ್ಮ ಸುತ್ತಮುತ್ತಲಿರುವ ಜನರನ್ನು ಅವಲೋಕಿಸಿ ಈ ಪ್ರಯತ್ನ ನೀವು ಮಾನಸಿಕ ಪ್ರತಿರಕ್ಷಣೆ ಬೆಳೆಸಿಕೊಳ್ಳಲು ದಾರಿತೋರುತ್ತದೆ.

ಇದನ್ನೂ ಓದಿ:ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಗಾದ ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್

3.ನಿಮ್ಮ ದೇಹ ಮತ್ತು ಮನಸ್ಸನ್ನು ಸವಾಲೆನ್ನಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ

ನಿಮ್ಮ ದೇಹ ಮತ್ತು ಮನಸ್ಸನ್ನು ಸವಾಲೆನ್ನಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳಿ ಅಥವಾ ಈಗಾಗಲೇ ಇರುವ ಹಳೆಯ ಹವ್ಯಾಸವನ್ನು ಪುನಶ್ಚೇತನಗೊಳಿಸಿ ನಿಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ಸಂಗಾತಿಯ ಜೊತೆ ಹೊಂದಿಕೊಳ್ಳಲು / ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡಲು, ಪ್ರತಿದಿನ ತಣ್ಣೀರು ಸ್ನಾನ ಮಾಡಿ, ಧ್ಯಾನ ಮಾಡಿ, ನಡಿಗೆ ಅಭ್ಯಾಸ ಮಾಡಿಕೊಳ್ಳಿ, ಜಾಗ್ ಮಾಡಿ, ವ್ಯಾಯಾಮ ಮಾಡಿ, 20 ನಿಮಿಷಗಳ ಕಾಲ ಯೋಗ ಮಾಡಿ. ನಿಮಗೇನಿಷ್ಟವೋ ಅದನ್ನೇ ಮಾಡಿ. ಚಲನಚಿತ್ರ ವೀಕ್ಷಣೆ, ಸಂಗೀತ ಆಲಿಸುವುದು, ಸ್ನೇಹಿತರ ಜೊತೆ ನೆರೆಹೊರೆಯವರ ಜೊತೆ ಮಾತಾಡುವುದು, ಹಾಡುವುದು, ನೃತ್ಯ ಮಾಡುವುದು, ಒಳಾಂಗಣ ಅಥವಾ ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಪದಬಂಧ, ಸೊಡುಕು ಇತ್ಯಾದಿ.

ಭಾರತದ ಭಾಷೆಯೊಂದನ್ನಾಗಲಿ ಅಥವಾ ವಿದೇಶದ ಭಾಷೆಯೊಂದನ್ನಾಗಲಿ ಕಲಿಯಲು ಪ್ರಯತ್ನಿಸಿ, ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಮನಸ್ಸು ಮಾಡಿ, ಹೊಸರುಚಿ ತಯಾರಿಕೆ, ಮನೆ ಶುಚಿ ಮಾಡುವುದು, ಕೈತೋಟ ಬೆಳಸುವುದು ಅಥವಾ ಪ್ರೀತಿಯ ಪ್ರಾಣಿಯೊಂದನ್ನು ಸಾಕುವುದು – ಇತ್ಯಾದಿ.

ಮಹತ್ವಾಕಾಂಕ್ಷೆಗಳು ಸಂಭವನೀಯ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸುತ್ತವೆ. ಅವುಗಳನ್ನು ಸ್ವೀಕರಿಸಿ ಮತ್ತು ನಿಮ್ಮ ಹೊಸ ಹವ್ಯಾಸಗಳನ್ನು ಸಂಭ್ರಮಿಸಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕಂಡು ಬರುವ ‘ಜಡತ್ವ’ ನಮ್ಮ ಗುರಿಯನ್ನು ತಪ್ಪಿಸಿ, ನಾವು ಈ ಸಮಸ್ಯೆಯ ನಿವಾರಣೆಗೆ ಸಾಕಷ್ಟು ಕ್ರಮ ಅಗತ್ಯ. ನಿಮ್ಮ ಒಬ್ಬರ ಪ್ರಯತ್ನದಿಂದ ಈ ಕೆಲಸ ಸಾಧ್ಯವಾಗದು. ನಿಮ್ಮ ಮಾತಿನಲ್ಲಿ ನಂಬಿಕೆ ಇಟ್ಟಿರುವ, ನಿಮ್ಮನ್ನು ಗೌರವಿಸುವ ಸ್ನೇಹಿತರ, ಹಿತೈಷಿಗಳ, ನಿಮ್ಮ ಕುಟುಂಬ ಸದಸ್ಯರ ನೆರವು ಬೇಕಾಗಬಹುದು.

ನಿಮ್ಮ ಹೃದಯ, ಮನಸ್ಸುಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು, ಆಸಕ್ತಿಪರ ಚಟುವಟಿಕೆಗಳತ್ತ ನಿಮ್ಮ ಚಿತ್ರವನ್ನು ಕೇಂದ್ರೀಕರಿಸಿದರೆ, ನಿಮ್ಮ ಬೇಸರ, ಕಿರಿಕಿರಿ ಬಳಲಿಕೆಯನ್ನು ದೂರಮಾಡಿಕೊಂಡು ಮನಸ್ಸಿನ ಸ್ಥಿತಿಸ್ಥಾಪಕತ್ವ ರೂಢಿಸಿಕೊಳ್ಳಬಹುದು.

4.ಪ್ರಾಯೋಗಿತ ವಿಧಾನ v/s ಬೌಧಿಕ ವಿಧಾನ

ನಿಮಗೆ ನೀವೇ ಬಲವಾದ ಸ್ಪರ್ಧಿ. ಪ್ರತಿಯೊಂದು ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿ ಆಗಾಗ್ಗೆ ವೃತ್ತಿಪರ ಸಭೆಗಳನ್ನು ನಡೆಸಿ. ಕೆಲಸದ ವೇಳಾಪಟ್ಟಿಯಲ್ಲಿ ಅಗತ್ಯವಾದ ಬಿಡುವು ಮಾಡಿಕೊಂಡು, ದೇಹವನ್ನು ಮಸಾಜ್/ಮಾಲೀಸು ಮಾಡಿಕೊಳ್ಳಿ. ನೀಳವಾಗಿ ಉಸಿರೆಳೆದುಕೊಳ್ಳಿ. ಈ ಕ್ರಿಯೆಗಳಿಂದ ನಿಮ್ಮ ಮನಸ್ಸು ದೇಹ ಹಗುರಾಗುತ್ತವೆ. ನಿಮ್ಮ ಆತ್ಮೀಯರಿಗೆ ಕೃತಜ್ಞತೆ ಹೇಳಿ. ನಿಮ್ಮ ಕೈ ಹಿಡಿದು ನಡೆಸುವ, ನಿಮ್ಮ ಪ್ರತಿ ಹೆಜ್ಜೆಯನ್ನು ಗಮನಿಸುವ ನಿಮಗೆ ಸಹಾಯ ಮಾಡಲು ಬಯಸುವ ಒಬ್ಬ ಅಗೋಚರ ವ್ಯಕ್ತಿ ನಿಮ್ಮ ಜೊತೆಯಲ್ಲಿದ್ದಾನೆಂದು ಭಾವಿಸಿ. ಅಡೆತಡೆಗಳಿಗೆ ಶರಣಾಗದೆ ಏಕಾಗ್ರತೆಯಿಂದ, ಇಚ್ಛಾಶಕ್ತಿಯಿಂದ ನಿಮ್ಮ ಕೆಲಸದಲ್ಲೇ ಗಮನವನ್ನು ಕೇಂದ್ರೀಕರಿಸಿದರೆ, ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ನಾವು ಕೆಲವೊಮ್ಮೆ ಮೂಲೆ ಗುಂಪಾಗುವುದು ಸಹಜ. ಆಶಾವಾದಿಗಳಾಗಿ ನಿಮ್ಮ ಮಾನಸಿಕ ಗೊಂದಲ ಕಡಿಮೆಮಾಡಿಕೊಳ್ಳಿ. ನೀವು ಕೆಟ್ಟ ಘಳಿಗೆಗಳನ್ನು ಎದುರಿಸುತ್ತಿರಬಹುದು. ಆದರೆ ನೀವು ಸಕಾರಾತ್ಮಕ ಭಾವನೆ ಹೊಂದಿದ್ದರೆ ಯಾವ ಅಡತಡೆಗಳೂ, ತೊಂದರೆಗಳೂ ಪರಿಣಾಮ ಬೀರುವುದಿಲ್ಲ. ನಿಮಗೆ ಸಹಾಯ ಪಡೆಯಲು ನೀವು ಅವರನ್ನು ಸಂಪರ್ಕಿಸಬೇಕಷ್ಟೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವ ಭಾವನೆ ನಿಮ್ಮಲ್ಲಿರಬೇಕು.

ಕೊನೆಯದಾಗಿ ಈ ಲೇಖನದ ಮುಕ್ತಾಯದ ಹಂತದಲ್ಲಿ ನಾನು ಹೇಳುವುದಿಷ್ಟೇ. ಪರಿಸರದ ಜೊತೆ ಸಂಪರ್ಕದಲ್ಲಿರಿ ಹಾಗೂ ಪೃಕೃತಿಯ ಸೀಮಿತ ಸಂಪನ್ಮೂಲಗಳನ್ನು ಗೌರವಿಸಿ. ಪ್ರಕೃತಿ ಪರಿಪೂರ್ಣವಲ್ಲ ಅಥವಾ ಪ್ರಕೃತಿಯನ್ನು ಪರಿಪೂರ್ಣಗೊಳಿಸಲು ನಿಮ್ಮಿಂದ ಸಾಧ್ಯವಿಲ್ಲ. ಪ್ರತಿಕೂಲ ಪರಿಸ್ಥಿತಿ ಎನ್ನುವುದು ಪ್ರತಿ ಕಾರ್ಯದಲ್ಲೂ ಕಂಡುಬರುವ ಒಂದು ಶಾಶ್ವತ ಸ್ಥಿತಿ. ನಾವು ಅದರ ಜೊತೆ ಹೋರಾಡುತ್ತಾ, ಪರಿಸ್ಥಿತಿಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಣಿಸಬೇಕು.

ದೇವರು ರೂಪಿಸಿರುವ ಶಿಷ್ಟಾಚಾರಕ್ಕೆ ಬದ್ಧರಾಗಿದ್ದು ನಿಮ್ಮ ಮಾನಸಿಕ ಪ್ರತಿರಕ್ಷಣ ಗುಣವನ್ನು ಬೆಳೆಸಿಕೊಳ್ಳಿ.

ಮೂಲ:ಶ್ರೀವತ್ಸ ಅನಂತರಾವ್
ಅನುವಾದ: ಸಿ.ಎನ್.ಮುಕ್ತ

ಟಾಪ್ ನ್ಯೂಸ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.