ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಏಕಾಗ್ರತೆ ಕೊರತೆ ದಿನವಿಡೀ ಮೊಬೈಲ್‌ ಕೈಯಲ್ಲಿರುವುದರಿಂದ ಊಟ, ನಿದ್ದೆಯೂ ತಪ್ಪುತ್ತದೆ.

Team Udayavani, Oct 26, 2020, 5:31 PM IST

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

Representative Image

ಆನ್‌ಲೈನ್‌ ಕಲಿಕೆಯ ಅನಿವಾರ್ಯಕ್ಕೆ ಕಟ್ಟುಬಿದ್ದು ಪೋಷಕರು ಮಕ್ಕಳಿಗೆ ತಮ್ಮದೇ ಮೊಬೈಲ್‌ ಇಲ್ಲವೇ ಹೊಸ ಮೊಬೈಲ್‌ ಖರೀದಿಸಿ ನೀಡಿದ್ದಾರೆ. ಮಕ್ಕಳು ಅಪರೂಪಕ್ಕೊಮ್ಮೆ ತಮ್ಮ ಕೈಗೆ ಸ್ಮಾರ್ಟ್ ಫೋನ್‌ ಸಿಕ್ಕಿದಾಗಲೂ ಗೇಮಿಂಗ್‌ ಆ್ಯಪ್‌ಗ್ಳ ಕಡೆಗೆ ಕಣ್ಣು ಹಾಯಿಸದೇ ಬಿಡುವುದಿಲ್ಲ ಎಂಬ ಸತ್ಯ ಹೆತ್ತವರಿಗೂ ತಿಳಿದಿರುವಂಥದ್ದೆ. ಹೀಗಿರುವಾಗ ಆನ್‌ಲೈನ್‌ ಕಲಿಕೆಗಾಗಿ ಸ್ವಂತ ಮೊಬೈಲ್‌ ಹೊಂದಿದ ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರಿಗೆ ಆತಂಕ ಇಲ್ಲದಾದೀತೇ? ಕಲಿಕೆಗಾಗಿ ನೀಡಿದ ಮೊಬೈಲ್‌ ಚಟವಾಗಿ ಬೆಳೆಯಬಹುದೆಂಬ ಭಯ ಸಹಜ. ಅದು ಚಟವಾಗಿ ಬೆಳೆದರೆ ಆಗುವ ಪರಿಣಾಮಗಳೇನು, ಚಟವಾಗದಿರಲು ಹೆತ್ತವರು ವಹಿಸಬೇಕಾದ  ಮುನ್ನೆಚ್ಚರಿಕೆಗಳೇನು ಎಂಬ ಬಗ್ಗೆ ಮನೋವೈದ್ಯೆ ಡಾ| ಪ್ರೀತಿ ಶಾನುಭಾಗ್‌ ವಿವರಿಸಿದ್ದಾರೆ.

*ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಮಕ್ಕಳಿಗಾಗಿಯೇ ಎರಡು *ಮೊಬೈಲ್‌ ಬೇಕೆಂಬ ಅನಿವಾರ್ಯವನ್ನು ಆನ್‌ ಲೈನ್‌ ತರಗತಿ ತಂದಿಟ್ಟಿದೆ. ಹೆತ್ತವರು ಕೆಲಸಕ್ಕೆ ಹೋಗುವವರಾದರೆ ಅವರ ಮೊಬೈಲ್‌ ಅವರ ಬಳಿಯೇ ಇರಬೇಕು. ಮಕ್ಕಳಿಬ್ಬರಿಗೂ ಒಂದೇ ಸಮಯಕ್ಕೆ ತರಗತಿ ಇದ್ದರೆ ಒಂದೇ ಮೊಬೈಲ್‌ನಿಂದ ಇಬ್ಬರೂ ನಿಭಾಯಿಸಲಾಗುವುದಿಲ್ಲ. ನಿಭಾಯಿಸುವ ಅವಕಾಶವಿದ್ದರೂ ಪ್ರತ್ಯೇಕ ಬೇಕೆಂಬ ಕಚ್ಚಾಟ ಆರಂಭವಾಗುತ್ತದೆ.

*ಹೆತ್ತವರು ಉದ್ಯೋಗಿಗಳಾಗಿದ್ದಲ್ಲಿ ಮಕ್ಕಳ ಮೇಲೆ 24×7 ನಿಗಾ ಇರಿಸುವುದಕ್ಕೆ ಆಗುವುದಿಲ್ಲ. ಮನೆಯಲ್ಲೇ ಇರುವವರಾದರೂ ಹೆಚ್ಚಿನ ಹೆತ್ತವರಿಗೆ ಈಗಿನ ಸ್ಮಾರ್ಟ್‌ಫೋನ್‌ ಬಳಕೆ ಬಗ್ಗೆ ಅಷ್ಟಾಗಿ ಜ್ಞಾನ ಇರುವುದಿಲ್ಲ. ಎರಡೂ ವಿಧದ ಹೆತ್ತವರಿಗೂ ಮಕ್ಕಳು ಆನ್‌ಲೈನ್‌ ತರಗತಿ ಹೊರತುಪಡಿಸಿ ಮೊಬೈಲ್‌ನಲ್ಲಿ ಇನ್ನೇನು ಹುಡುಕುತ್ತಿದ್ದಾರೆ ಎಂಬುದು ತಿಳಿಯುವುದಿಲ್ಲ. ಹೆತ್ತವರ ಈ ಪರಿಸ್ಥಿತಿಯನ್ನು ಮಕ್ಕಳು ಬಳಸಿ ಮೊಬೈಲ್‌ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಅಗತ್ಯಕ್ಕಿಂತ ಜಾಸ್ತಿ ಮೊಬೈಲ್‌ ನೋಡುವುದರಿಂದ ಮಾನಸಿಕ ಮತ್ತು ದೈಹಿಕ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ:Watch: ಜಮ್ಮು-ಕಾಶ್ಮೀರ-PDP ಕಚೇರಿಗೆ ನುಗ್ಗಿ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಕಾರ್ಯಕರ್ತರು

ಮೊಬೈಲ್‌ ಚಟ: ಸಮಸ್ಯೆಗಳೇನು?
*ಆನ್‌ಲೈನ್‌ ವೀಡಿಯೋ ಗೇಮ್‌ ಚಟ ಇದರಲ್ಲಿ ಸಿಗುವ ಪಾಯಿಂಟ್‌ಗಳು ಮಕ್ಕಳನ್ನು ಸೆಳೆಯುತ್ತವೆ. ಪರಿಣಾಮ ಸಾಮಾಜಿಕವಾಗಿ ಬೆರೆಯುವಿಕೆಯ ಆಸಕ್ತಿ, ಮಾತೂ ಕಡಿಮೆಯಾಗಿ ಮಕ್ಕಳು ಸದಾ ಮೊಬೈಲ್‌ನಲ್ಲೇ ಇರುತ್ತಾರೆ.

*ಸಾಮಾಜಿಕ ತಾಣಗಳ ಮೂಲಕ ಖನ್ನತೆ ಸ್ನೇಹಿತರು ಹಾಕಿರುವ ಫೋಟೋಗಳನ್ನು ಫೇಸ್‌ಬುಕ್‌, ಇನ್‌ ಸ್ಟಾಗ್ರಾಮ್‌ಗಳಲ್ಲಿ ನೋಡುವ ಮಕ್ಕಳು ನನಗೆ ಜೀವನದಲ್ಲಿ ಅಂತಹ ಖುಷಿಗಳಿಲ್ಲ ಎಂದು ಮರುಗಿ ಖನ್ನತೆಗೆ ಒಳಗಾಗುತ್ತಾರೆ.

*ಏಕಾಗ್ರತೆ ಕೊರತೆ ದಿನವಿಡೀ ಮೊಬೈಲ್‌ ಕೈಯಲ್ಲಿರುವುದರಿಂದ ಊಟ, ನಿದ್ದೆಯೂ ತಪ್ಪುತ್ತದೆ. ಜತಗೆ ಏಕಾಗ್ರತೆಯ ಕೊರತೆ, ಚಿಕ್ಕ ಮಕ್ಕಳಲ್ಲಿ ಗಮನದ ಕೊರತೆ ಜಾಸ್ತಿಯಾಗುತ್ತದೆ.

ಪೋಷಕರು ಏನು ಮಾಡಬೇಕು?
*ಮಕ್ಕಳಿಗೆ ಆಫ್‌ಲೈನ್‌ ತರಗತಿಗಳು ಕೂಡ ಇರುತ್ತವೆ. ಹೆತ್ತವರು ಮಕ್ಕಳೊಂದಿಗೆ ಕುಳಿತು ಸ್ಕ್ರೀನ್‌ ಟೈಂ ಮತ್ತು ನಾನ್‌- ಸ್ಕ್ರೀನ್‌ ಟೈಂ ವೇಳಾಪಟ್ಟಿ ರಚಿಸಬೇಕು. ಶಿಕ್ಷಕರು ಆನ್‌ಲೈನ್‌ಗೆ ಬರುವ ಸಂದರ್ಭಕ್ಕೆ ಮಾತ್ರ ಆನ್‌ಲೈನ್‌, ಉಳಿದಂತೆ ಆಫ್‌ಲೈನ್‌ ಶಿಕ್ಷಣದಡಿ ಹೋಂ ವರ್ಕ್ ‌ಗಳನ್ನು ಮಾಡಿಸಬೇಕು.

*ಸಾಧ್ಯವಾದರೆ ಇಬ್ಬರು ಮಕ್ಕಳಿಗೆ ಒಂದೇ ಮೊಬೈಲ್‌ ನೀಡಿ. ಇದರಿಂದ ಸುದೀರ್ಘ‌ ಕಾಲ ಓರ್ವನೇ ಮೊಬೈಲ್‌ ಕೈಯಲ್ಲಿ ಹಿಡಿದುಕೊಳ್ಳುವುದು ತಪ್ಪುತ್ತದೆ

*ಹೆತ್ತವರು ಮನೆಯಲ್ಲಿದ್ದಷ್ಟೂ ಹೊತ್ತು ಆಟ, ಇತರ ಹವ್ಯಾಸಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಆಗ ಸಹಜವಾಗಿ ಮಕ್ಕಳು ಆಟದ ಕಡೆಗೆ ಆಸಕ್ತಿ ತೋರಿಸುತ್ತಾರೆ.

*ಮಕ್ಕಳು ಆನ್‌ಲೈನ್‌ ಕಲಿಕೆ ಹೊರತಾಗಿ ಮೊಬೈಲ್‌ ಬಳಸುವಾಗ ಮಕ್ಕಳನ್ನು ಅನುಮಾನದ ದೃಷ್ಟಿಯಿಂದ ನೋಡದೆ, ಆದಷ್ಟು ಪ್ರೀತಿಯಿಂದ ತಿದ್ದಲು ಪ್ರಯತ್ನಿಸಬೇಕು.

ಮಕ್ಕಳು ಮೊಬೈಲ್‌ನಲ್ಲಿ ಆಡುವುದು ಹೊಸತಲ್ಲ. ಆದರೆ ಶಾಲೆಗೆ ಹೋಗುತ್ತಿದ್ದಾಗ ಹೆಚ್ಚು ಹೊತ್ತು ಮೊಬೈಲ್‌ ಸಿಗುತ್ತಿರಲಿಲ್ಲ. ಸಿಕ್ಕರೂ ಹೆತ್ತವರೂ ಜತೆ ಇರುತ್ತಿದ್ದರು. ಪ್ರಸ್ತುತ ಆನ್‌ಲೈನ್‌ ಶಿಕ್ಷಣದಿಂದಾಗಿ ಮಕ್ಕಳಿಗೆ ಮೊಬೈಲ್‌ ವರದಾನವಾದಂತಾಗಿದೆ. ಹೆತ್ತವರು ಉದ್ಯೋಗಕ್ಕೆ ತೆರಳಿದರೆ ಮಕ್ಕಳ ಕಡೆಗೆ ಗಮನಹರಿಸಲು ಸಾಧ್ಯ ವಾಗುವುದಿಲ್ಲ. ಜಾಸ್ತಿ ಮೊಬೈಲ್‌ ವೀಕ್ಷಣೆ ಮಾಡಿದರೆ ಚಟವಾಗಿ ಬೆಳೆಯುವ ಸಾಧ್ಯತೆ ಇದೆ. ಹೀಗಾಗಿ ಹೆತ್ತವರು ಆದಷ್ಟು ಮಕ್ಕಳನ್ನು ಇತರ ಹವ್ಯಾಸಗಳತ್ತ ಅವರನ್ನು ಸೆಳೆಯಲು ಪ್ರಯತ್ನಿಸಬೇಕು.
-ಡಾ| ಪ್ರೀತಿ ಶಾನುಭಾಗ್‌, ಮನೋವೈದ್ಯರು, ಮಂಗಳೂರು

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.