ದೇಶದ ಅಭಿವೃದ್ಧಿ ದರ ಕುಸಿಯುತ್ತಿದ್ದರೂ, ಪಕ್ಷಗಳ ಆದಾಯ ಏರುತ್ತಿರುವ ಕುರಿತು ಅಭಿಪ್ರಾಯವೇನು

Team Udayavani, Jan 12, 2020, 4:48 PM IST

ಮಣಿಪಾಲ: ದೇಶದ ಅಭಿವೃದ್ಧಿ ದರ ಕುಸಿಯುತ್ತಿದ್ದರೂ, ರಾಷ್ಟ್ರೀಯ ಪಕ್ಷಗಳ ಆದಾಯ ಗಣನೀಯವಾಗಿ ಏರುತ್ತಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.

ಸುರೇಶ್ ಡಿ ಸಿ ಸುರೇಶ್: ಉಳ್ಳವರು ದಂದೆ ಮಾಡಲು ರಾಜಕಾರಣವನ್ನ ಬಳಸಿಕೊಳ್ಳುತ್ತಿದ್ದಾರೆ. ಆಡಳಿತದ ದುರುಪಯೋಗ ಮಾಡಿಕೊಂಡು ಲಾಭ ಮಾಡುತ್ತಿದ್ದಾರೆ .ಬಂದ ಲಾಭದಲ್ಲಿ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ, ಪ್ರಚಾರಕ್ಕೆ, ಚುನಾವಣೆಗೆ,ಹಾಗೂ ಇನ್ನಿತರ ರೂಪಗಳಲ್ಲಿ ಹಣ, ಆಸ್ತಿ, ಬೆಲೆಬಾಳುವ ವಸ್ತುಗಳು ರಾಜಕಾರಣಿಗಳ,ಅವರ ಸಂಬಂದಿಕರ ಅಥವಾ ಪಕ್ಷಗಳ ಆದಾಯಗಳಾಗಿ ಪರಿವರ್ತನೆ ಆಗುತ್ತಿದೆ. ಬಡವರು ದುಡಿದ ಹಣ ಹೆಂಡಕ್ಕೆ, ಆಸ್ಪತ್ರೆಗೆ, ಆಹಾರಕ್ಕೆ, ಅಧಿಕಾರಿಗಳ ಲಂಚಕ್ಕೆ ಹೀಗೆ ಅಗತ್ಯ ಅಥವಾ ಲಂಚದ ರೀತಿ ಮತ್ತೆ ಉಳ್ಳವರ ಕೈಸೇರಿ ಬಡವರಾಗೇ ಇರುತ್ತಾರೆ. ಎಲ್ಲ ಹಣ ಉಳ್ಳವರ ಕೈಸೇರಿ ಸ್ಟೋರೇಜ್ ನಲ್ಲಿ ಉಳಿದು ಚಲಾವಣೆಗೆ ಬಾರದೆ ದೇಶ ಬಡವಾಗುತ್ತಾ ಹೋಗುತ್ತದೆ.

ಪ್ರದೀಪ್ ಕುಮಾರ್: ಪಕ್ಷಗಳು ತಮ್ಮ ವರ್ಚಸ್ಸು ತಮ್ಮ ಆದಾಯ ಮತ್ತು ಪಕ್ಷದವರ ಆದಾಯ ಎಲ್ಲವೂ ಗಣನೀಯವಾಗಿ ಏರಿಕೆ ಆಗುತ್ತೆ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವುದನ್ನು ಮರೆತ ಸರ್ಕಾರಗಳು. ನಮ್ಮ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿದ್ದಲ್ಲಿ ದೇಶದ ಆರ್ಥಿಕ ಪ್ರಗತಿಯು ಮತ್ತು ದೇಶದ ಅಭಿವೃದ್ಧಿ ಆಗುತ್ತದೆ ಆದರೆ ಈ ರಾಜಕೀಯ ಪಕ್ಷಗಳಿಗೆ ದೇಶದ ಅಭಿವೃದ್ಧಿ ಕುರಿತು ಚಿಂತೆಯಿಲ್ಲ.

ಗಾಯತ್ರಿ ರಮೇಶ್: ಪಾರ್ಟಿ ಫಂಡ್ ವಿವರಗಳು ರಾಜಕೀಯ ಪಕ್ಷಗಳಿಗೆ ಗೊತ್ತಿರುತ್ತದೆ. ಅದನ್ನು ಜನಸಾಮಾನ್ಯರಿಗೆ ಬಹಿರಂಗ ಪಡಿಸುವುದಿಲ್ಲ. ಪಾರದರ್ಶಕವಾಗಿ ಎಲ್ಲಾ ಪಕ್ಷಗಳೂ ದೇಣಿಗೆ ನೀಡಿದವರ ವಿವರ ದೇಣಿಗೆ ಮೊತ್ತವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ.

ಶಾಮಂ ಸಾ: ಟ್ಯಾಕ್ಸ್, ಜಿ ಎಸ್ ಟಿ. ಇತರೆ ಎಲ್ಲಾ ವರ್ಗದ ಹಣ ಕೊಳ್ಳೇ ಹೊಡೆಯೊದು ಈ ರಾಜಕೀಯ ಜನರೇ. ರಸ್ತೆ. ನಿರುದ್ಯೋಗ. ಬಡವರಿಗೆ ವಸತಿ. ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿ ಇವುಗಳಲ್ಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ . ಎಲ್ಲವೂ ಇವರ ಜೇಬಿಗೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ