ಮೈಸೂರಿನಲ್ಲಿ ವೈಭವದ ಜಂಬೂ ಸವಾರಿ: ಅರ್ಜುನನಿಗೆ ಜೈಕಾರ; ಹಲವು ತಂಡಗಳ ಕಲಾಪ್ರದರ್ಶನ


Team Udayavani, Oct 5, 2022, 4:14 PM IST

ಮೈಸೂರಿನಲ್ಲಿ ವೈಭವದ ಜಂಬೂ ಸವಾರಿ: ಅರ್ಜುನನಿಗೆ ಜೈಕಾರ; ಹಲವು ತಂಡಗಳ ಕಲಾಪ್ರದರ್ಶನ

ಮೈಸೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಜಂಬೂ ಸವಾರಿ ಅರಮನೆ ಆವರಣದಲ್ಲಿ ಆರಂಭವಾಗಿದೆ. ಕಲಾ ತಂಡಗಳಿಂದ ಕೂಡಿದ್ದ ಮೆರವಣಿಗೆಯನ್ನು ಮಾಜಿ ಕ್ಯಾಪ್ಟನ್ ಅರ್ಜುನ ಮುನ್ನಡೆಸಿದ್ದಾನೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಳು ನಿಮಿಷ ಮುಂಚೆಯೇ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿರು. ಕುಟುಂಬ ವರ್ಗದವರ ಸಮೇತ ಆಗಮಿಸಿ, ಪೂಜೆ ಸಲ್ಲಿಸಿದರು. 3.62ಕ್ಕೆ ನಿಶಾನೆ ಆನೆಯಾದ ಅರ್ಜುನನು ಮೊದಲ ಹೆಜ್ಜೆ ಇಟ್ಟು, ಸೊಂಡಿಲೆತ್ತಿ ನಮಸ್ಕರಿಸಿ, ಜಂಬೂ ಸವಾರಿ ಮುನ್ನಡೆಸಿದ. ಬಲರಾಮ ದ್ವಾರದಿಂದ ನಿಶಾನೆ ಆನೆಯಾಗಿ ಅರ್ಜುನ ಅರಮನೆಯಿಂದ ಆಚೆ ಬರುತ್ತಿದ್ದಂತೆ ಲಕ್ಷಾಂತರ ಮಂದಿ ಜೋರು, ಶಿಳ್ಳೆ, ಜೈಕಾರ ಕೂಗಿ ಸ್ವಾಗತಿಸಿದರು.

ಜಂಬೂ ಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲು, ದೂರದ ಊರುಗಳಿಂದ, ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಬೆಳಗ್ಗೆ ಹತ್ತುಗಂಟೆಯಿಂದಲೇ ಬಿಸಿಲನ್ನೂ ಲೆಕ್ಕಿಸದೇ ಜಂಬೂಸವಾರಿ ವೀಕ್ಷಣೆಗೆ ಕಾಯ್ದು ಕುಳಿತಿದ್ದರು.

ಅಭಿಮನ್ಯು ಜತೆಗೆ 13 ಆನೆಗಳು, ಅಶ್ವರೋಹಿಪಡೆಗಳು, ಆನೆಗಾಡಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಇದರ ಜತೆಗೆ ಮೆರವಣಿಗೆಯಲ್ಲಿ 31 ಜಿಪಂ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ 43 ಸ್ತಬ್ಧಚಿತ್ರಗಳು ಸೇರಿ 100ಕ್ಕೂ ಜಾನಪದ ತಂಡಗಳು ಭಾಗವಹಿಸಲಿವೆ.

ಕಟ್ಟಡ, ಮರ ಹತ್ತಿ ವೀಕ್ಷಿಸಿದ ಜ‌ನ: ಜಂಬೂ ಸವಾರಿ ಸಾಗುವ ರಾಜ ಮಾರ್ಗದುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿನ ಮರ ಹಾಗೂ ಕಟ್ಟಡ ಏರಿ ಮೆರವಣಿಗೆ ವೀಕ್ಷಿಸಿದರು. ಕೆ.ಆರ್. ಸರ್ಕಲ್ ಬಳಿಯ ಲ್ಯಾನ್ಸ್ ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡದ ಮೇಲೆ ಸಾವಿರಾರು ಮಂದಿ ಕಟ್ಟಡ ಕುಸಿದು ಬೀಳುವ ಅಪಾಯವನ್ನು ಲೆಕ್ಕಿಸದೇ ಹತ್ತಿನಿಂತಿದ್ದ ದೃಶ್ಯ ಕಂಡು ಬಂದಿತು.

ದಿಕ್ಕೆಟ್ಟು ಓಡಿದ ನಾಯಿಗಳು: ಮೆರವಣಿಗೆ ಹಿನ್ನೆಲೆಯಲ್ಲಿ ರಸ್ತೆ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ರಸ್ತೆ ಮಧ್ಯ ಸಿಲುಕಿದ ನಾಲ್ಕಾರು ನಾಯಿಗಳು ಅತ್ತಿದ್ದಿಂತ ಮೆರವಣಿಗೆ ಮಧ್ಯ ಭೀತಿಯಿಂದ ಓಡಾಡಿದ ದೃಶ್ಯ ಕಂಡುಬಂದಿತು.

ಟಾಪ್ ನ್ಯೂಸ್

1-sadsdadasd

ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾನೇ : ಶಾಸಕ ಪರಣ್ಣ ಮುನವಳ್ಳಿ

kejriwal-2

ಗುಜರಾತ್ : ಬುಡಕಟ್ಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಿದ ಆಪ್

BCCI

ರೋಹಿತ್ ಶರ್ಮಾ ಇನ್ನೂ ಬಾಂಗ್ಲಾ ಟೆಸ್ಟ್ ಸರಣಿಯಿಂದ ಹೊರಬಿದ್ದಿಲ್ಲ: ಬಿಸಿಸಿಐ

BJP Symbol

ಹಿಮಾಚಲ : ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾದ ಬಂಡಾಯ

1-adsadsa

ಗಡಿ ವಿವಾದ ತೀವ್ರ : ಡಿಸೆಂಬರ್ 14 ರಂದು ಬೊಮ್ಮಾಯಿ-ಶಿಂಧೆಯೊಂದಿಗೆ ಶಾ ಭೇಟಿ ?

Aftab 1

ಪೂನಾವಾಲಾನ ನ್ಯಾಯಾಂಗ ಬಂಧನ 14 ದಿನಗಳವರೆಗೆ ವಿಸ್ತರಣೆ

15

ಕುರುಗೋಡು: ತಾಲೂಕು ಆರೋಗ್ಯಾಧಿಕಾರಿ ಬೇಜವಾಬ್ದಾರಿತನ; ಎರಡನೇ ದಿನಕ್ಕೆ ಕಾಲಿಟ್ಟ ಧರಣಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsdadasd

ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾನೇ : ಶಾಸಕ ಪರಣ್ಣ ಮುನವಳ್ಳಿ

15

ಕುರುಗೋಡು: ತಾಲೂಕು ಆರೋಗ್ಯಾಧಿಕಾರಿ ಬೇಜವಾಬ್ದಾರಿತನ; ಎರಡನೇ ದಿನಕ್ಕೆ ಕಾಲಿಟ್ಟ ಧರಣಿ

10

ರಾಜ್ಯಪಾಲ ಗೆಹ್ಲೋಟ್ ಅಂಜನಾದ್ರಿ ಭೇಟಿ; ಪೂಜೆ ನೆರವೇರಿಸುವ ಕುರಿತು ಅರ್ಚಕ-ಅಧಿಕಾರಿಗಳ ಮಧ್ಯೆ ವಾಗ್ವಾದ

7

ಶಾಲಾ ಸಮಯಕ್ಕೆ ಬಸ್ ಸೌಲಭ್ಯ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಪಿಎಫ್ಐ ಕಾರ್ಯಕರ್ತರ ಮೇಲೆ ಎನ್‌ಐಎ ದಾಳಿ

ಪಿಎಫ್ಐ ಕಾರ್ಯಕರ್ತರ ಮೇಲೆ ಎನ್‌ಐಎ ದಾಳಿ

MUST WATCH

udayavani youtube

ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಗೆ ಮಸಿ ಬಳಿಯಲು ಯತ್ನ, ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

ಹೊಸ ಸೇರ್ಪಡೆ

1-sadsdadasd

ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾನೇ : ಶಾಸಕ ಪರಣ್ಣ ಮುನವಳ್ಳಿ

kejriwal-2

ಗುಜರಾತ್ : ಬುಡಕಟ್ಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಿದ ಆಪ್

BCCI

ರೋಹಿತ್ ಶರ್ಮಾ ಇನ್ನೂ ಬಾಂಗ್ಲಾ ಟೆಸ್ಟ್ ಸರಣಿಯಿಂದ ಹೊರಬಿದ್ದಿಲ್ಲ: ಬಿಸಿಸಿಐ

BJP Symbol

ಹಿಮಾಚಲ : ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾದ ಬಂಡಾಯ

1-adsadsa

ಗಡಿ ವಿವಾದ ತೀವ್ರ : ಡಿಸೆಂಬರ್ 14 ರಂದು ಬೊಮ್ಮಾಯಿ-ಶಿಂಧೆಯೊಂದಿಗೆ ಶಾ ಭೇಟಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.