ಚಿನ್ನ ವ್ಯಾಪಾರಿಗಳನ್ನು ಅಡ್ಡಗಟ್ಟಿ 2.11 ಕೋಟಿ ರೂ. ದರೋಡೆ, ಪೊಲೀಸರಿಂದ ಶೋಧ ಕಾರ್ಯ
Team Udayavani, Oct 5, 2022, 4:06 PM IST
ಯಲ್ಲಾಪುರ : ಚಿನ್ನ ಖರೀದಿಗೆಂದು ಹೊರಟಿದ್ದವರನ್ನು ತಾಲೂಕಿನ ಅರಬೈಲ್ ಘಟ್ಟದಲ್ಲಿ ಅಡ್ಡಗಟ್ಟಿ ಹಣ ದೋಚಿದ ಘಟನೆ ಅ.1 ರಂದು ತಡರಾತ್ರಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿಯ ಚಿನ್ನದ ವ್ಯಾಪಾರಿಗಳು ಈ ಮಾರ್ಗವಾಗಿ ಚಿನ್ನ ಖರೀದಿಗೆ ಕೇರಳಕ್ಕೆ ತೆರಳುತ್ತಿದ್ದರು. ಅರಬೈಲ್ ಘಟ್ಟ ಪ್ರದೇಶದಲ್ಲಿ ತೆರಳುತ್ತಿರುವಾಗ ಎರಡು ಮೂರು ವಾಹನದಲ್ಲಿ ಬಂದ ಎಂಟು ಹತ್ತು ಮಂದಿ ದರೋಡೆಕೋರರ ತಂಡ ಇವರ ಕಾರನ್ನು ಅಡ್ಡಗಟ್ಟಿ ಥಳಿಸಿ ಅವರ ಬಳಿ ಇದ್ದ 2.11 ಕೋಟಿ ರೂ ಲಪಟಾಯಿಸಿ ಪರಾರಿಯಾಗಿದ್ದಾರೆ.
ಘಟನೆಯ ದಿನದಂದು ಪೋಲಿಸ್ ದೂರು ನೀಡಿರಲಿಲ್ಲ. ಅ 5. ರಂದು ನಿಲೇಶ ಪಾಂಡುರಂಗ ನಾಯ್ಕ್ ಪೋಲಿಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ದರೋಡೆಕೋರರು ಇವರನ್ನು ಹಿಂಬಾಲಿಸಿ ಬಂದಿದ್ದು ಅನುಭವಸ್ತ ದರೋಡೆಕೋರರೆ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಮತ್ತು ಸ್ಥಾನಿಕವಾಗಿಯೂ ದರೋಡೆಕೋರರಿಗೆ ಶಾಮಿಲಾಗಿ ಸಹಾಯ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ಇನ್ನಷ್ಟು ವಿವರಗಳು ತಿಳಿದುಬರಬೇಕಿದೆ. ಪ್ರಕರಣ ಭೇಧಿಸಲು ಸಿಒಐ ಸುರೇಶ ಯೆಳ್ಳೂರ ನೇತ್ರತ್ವದ ತಂಡ ಕಾರ್ಯಾಚರಣೆಗೆ ಇಳಿದಿದೆ.
ಇದನ್ನೂ ಓದಿ :ಉಚ್ಚಿಲ ದಸರಾ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ
ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್ಗಳ ತೆರವಿಗೆ ಮುಂದಾದ ಅಧಿಕಾರಿಗಳು
ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರ ಪಠಣ
ಶಿವಾಜಿ, ಬಸವೇಶ್ವರ, ಬುದ್ಧ, ಗಾಂಧೀಜಿಯನ್ನೇ ಬಿಡದವರು ನನ್ನನ್ನು ಬಿಡುತ್ತಾರಾ: ಕುಮಾರಸ್ವಾಮಿ
ಕಲಿಕೆಯ “ಜಂಬೋ” ಅವಕಾಶ: ಪೋದಾರ್ ಲರ್ನ್ ಸ್ಕೂಲ್