ಆಧಾರ್‌ ತಿದ್ದುಪಡಿ ಕೇಂದ್ರಗಳನ್ನು ಗ್ರಾಮಗಳಲ್ಲೇ ತೆರೆಯಿರಿ

ಜಾಲ್ಸೂರು ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಒತ್ತಾಯ; ಮೇಲ್ಮನವಿ ಸಲ್ಲಿಸಲು ನಿರ್ಣಯ

Team Udayavani, Jun 28, 2019, 5:00 AM IST

37

ಜಾಲ್ಸೂರು ಗ್ರಾ.ಪಂ. ಪ್ರಥಮ ಹಂತದ ಗ್ರಾಮಸಭೆ ಗುರುವಾರ ಜರಗಿತು.

ಜಾಲ್ಸೂರು: ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ ಜನರು ನಿರಂತರ ಅಲೆದಾಡುತ್ತಿದ್ದಾರೆ. ಮುಂಜಾನೆ ಮೂರು ಗಂಟೆಗೆ ತಿದ್ದುಪಡಿ ಕೇಂದ್ರದಲ್ಲಿ ಸಾಲು ನಿಲ್ಲಬೇಕು. ಇದಕ್ಕೊಂದು ಪರಿಹಾರ ಕಾಣಬೇಕು, ಗ್ರಾ.ಪಂ.ನಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರ ತೆರೆಯಬೇಕು ಎಂದು ಜಾಲ್ಸೂರು ಗ್ರಾಮ ಸಭೆಯಲ್ಲಿ ಒತ್ತಾಯ ವ್ಯಕ್ತವಾಯಿತು.

ಜಾಲ್ಸೂರು ಗ್ರಾ.ಪಂ. ಪ್ರಥಮ ಹಂತದ ಗ್ರಾಮಸಭೆ ಅಧ್ಯಕ್ಷೆ ಶಶಿಕಲಾ. ಎಸ್‌. ನಾಯಕ್‌ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಆಧಾರ್‌ ತಿದ್ದುಪಡಿ ಸಮಸ್ಯೆ ಬಗ್ಗೆ ಪ್ರಸ್ತಾವಿಸಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಬಾಬು, ಸುಳ್ಯದಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರವಿದೆ. ಇಲ್ಲಿಂದ ಅಷ್ಟುದೂರಕ್ಕೆ ಹೋಗುವುದು ಕಷ್ಟ. ಹಲವು ಸಲ ನೆಟ್ವರ್ಕ್‌ ಇಲ್ಲದೆ ಸವರರ್ ಡೌನ್‌ ಆಗುತ್ತೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಆಧಾರ್‌ ತಿದ್ದುಪಡಿಗೆ ಗ್ರಾ.ಪಂ. ವಲಯದಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲವೆ? ಎಂದು ಜಯರಾಮ್‌ ಪ್ರಶ್ನಿಸಿದರು.

ಪತ್ರ ಮುಖೇನ ಮನವಿ
ಉತ್ತರಿಸಿದ ಗ್ರಾ.ಪಂ. ಕಾರ್ಯದರ್ಶಿ ಸುಬ್ಬಯ್ಯ, ಪ್ರತಿ ಗ್ರಾಮಗಳಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರ ತೆರೆಯುವುದು ಆಗುವುದಿಲ್ಲ ಎಂದರು. ಸಭೆಯಲ್ಲಿದ್ದ ಜನರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಏಕೆ ಆಗುವುದಿಲ್ಲ? ಜನರ ಗೋಳಿಗೆ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿ, ಜಾಲ್ಸೂರಿನಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರ ತೆರೆಯಬೇಕು ಎಂದು ಉತ್ತಾಯಿಸಿದರು. ಗ್ರಾ.ಪಂ. ಉಪಾಧ್ಯಕ್ಷ ದಿನೇಶ್‌ ಅಡ್ಕಾರು ಉತ್ತರಿಸಿ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ಅನುದಾನ ಹೇಗೆ?
ಕಾಳಮನೆಯ ಐದು ಕುಟುಂಬಗಳಿಗೆ ರಸ್ತೆ ನಿರ್ಮಿಸುವ ಕುರಿತು ಸುರೇಶ್‌ ಕಾಳಮನೆ ಪ್ರಶ್ನಿಸಿದರು. ಉತ್ತರಿಸಿದ ತಾ.ಪಂ. ಸದಸ್ಯ ತೀರ್ಥರಾಮ, ರಸ್ತೆಗೆ 8 ಅಡಿ ಜಾಗ ಬಿಟ್ಟುಕೊಡಲು ಒಪ್ಪಿದ್ದಾರೆ. ಜಿ.ಪಂ. ಹಾಗೂ ತಾ.ಪಂ.ಗೆ ವರದಿ ಕಳುಹಿಸುತ್ತೇವೆ. ಪರಿಶೀಲಿಸಿ ಅನು ದಾನ ಬಿಡುಗಡೆಗೊಳಿಸಲಾಗುವುದು ಎಂದರು.

ತಂದೆಯ ಹೆಸರಲ್ಲಿ ಪರವಾನಿಗೆ ಹೊಂದಿದ ಕೋವಿಯನ್ನು ಪುತ್ರನ ಹೆಸರಿಗೆ ವರ್ಗಾಯಿಸಲು ಅಡೆಚಣೆಗಳಿವೆ. ಗ್ರಾಮದ ಬಹಳಷ್ಟು ಕೋವಿಗಳು ದಾಖಲೆ ಸಮಸ್ಯೆಯಿಂದ ಠಾಣೆಯಲ್ಲೇ ಉಳಿದಿವೆ. ಇದಕ್ಕೊಂದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರವಿರಾಜ್‌ ಬಾಬುಲಡ್ಕ ಆಗ್ರಹಿಸಿದರು. ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಕಾರ್ಯದರ್ಶಿ ಸುಬ್ಬಯ್ಯ ತಿಳಿಸಿದರು.

ಆಂಗ್ಲ ಮಾಧ್ಯಮ ಆರಂಭವಾಗಲಿ
ಸರಕಾರಿ ಶಾಲೆಯಲ್ಲಿ ಒಂದನೆ ತರಗತಿಯಿಂದಲೇ ಆಂಗ್ಲ ಶಿಕ್ಷಣ ಆರಂಭಿಸಬೇಕು, ಶಿಕ್ಷಕರ ನೇಮಕಾತಿ ಮಾರ್ಚ್‌, ಎಪ್ರಿಲ್ ತಿಂಗಳಲ್ಲಿ ಕೊನೆಗೊಳ್ಳಬೇಕು. ಶಾಲೆ ಆರಂಭವಾದ 10 ದಿನಗಳಲ್ಲಿ ಶಿಕ್ಷಕರ ವರ್ಗಾವಣೆಯಾಗುತ್ತದೆ. ಇದು ಮಕ್ಕಳ ಕಲಿಕೆಗೆ ಬಾಧಿಸುತ್ತದೆ. ಇದಕ್ಕೊಂದು ಪರಿಹಾರ ಕಾಣಬೇಕೆಂದು ಜಯರಾಮ್‌ ಹೇಳಿದರು. ಉತ್ತರಿಸಿದ ನೋಡಲ್ ಅಧಿಕಾರಿ ವಸಂತ, ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಅಧಿಕಾರಿಗಳ ಗೈರು: ಗ್ರಾಮಸ್ಥರಿಂದ ತರಾಟೆ
ಗ್ರಾಮ ಸಭೆಗೆ ಇಲಾಖೆ ಅಧಿಕಾರಿಗಳ ಗೈರು ಸಭೆಯಲ್ಲಿ ಕೋಲಾಹಲ ಎಬ್ಬಿಸಿತು. ಗ್ರಾ.ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಗೈರು ಸಾಮಾನ್ಯವಾಗಿದೆ. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳುವುದು? ಅನುಪಸ್ಥಿತಿಯಲ್ಲಿ ಗ್ರಾಮ ಸಭೆಯನ್ನು ನೀವು ಏರ್ಪಡಿಸಿದ್ದೇಕೆ? ಎಂದು ಹಮೀದ್‌ ಅಡ್ಕಾರು ಪ್ರಶ್ನಿಸಿದರು.

ಮೈಕ್‌ ಸಮಸ್ಯೆ
ಗ್ರಾಮ ಸಭೆಯಲ್ಲಿ ಧ್ವನಿವರ್ಧಕದಲ್ಲಿ ದೋಷ ಕಾಣಿಸಿಕೊಂಡು, ಅಧಿಕಾರಿಗಳ ಮಾತು ಜನರಿಗೆ ಕೇಳುತ್ತಿರಲಿಲ್ಲ, ಶಬ್ದದಲ್ಲಿ ಅಸ್ಪಷ್ಟತೆ ಇದ್ದು, ಅರ್ಥವಾಗುತ್ತಿರಲಿಲ್ಲ. ಕೆಲವು ಅಧಿಕಾರಿಗಳು ಮೈಕ್‌ ಉಪಯೋಗಿಸದೆ ಮಾತಾಡಿದರು.

ನೋಡಲ್ ಅಧಿಕಾರಿಯಾಗಿ ಶಿಕ್ಷಣ ಸಂಯೋಜಕ ವಸಂತ, ಸುಳ್ಯ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಹರಬಣ್ಣ ಪೂಜೇರಿ, ಸಮಾಜ ಕಲ್ಯಾಣ ಇಲಾಖೆ ಸೂಪರಿಂಟೆಂಡೆಂಟ್ ಬಾಲಕೃಷ್ಣ, ಆರೋಗ್ಯಕರ ಮಿತ್ರ ಸಮುದಾಯ ಆರೋಗ್ಯ ಕೇಂದ್ರ ಸುಳ್ಯ ಮುರಳಿ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಉಫ‌ವಿಭಾಗದ ಕಿರಿಯ ಅಭಿಯಂತರ ಜನಾರ್ದನ, ತಾ.ಪಂ. ಸದಸ್ಯ ತೀರ್ಥರಾಮ ಬಾಳಜೆ, ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಎಸ್‌. ನಾಯಕ್‌, ಉಪಾಧ್ಯಕ್ಷ ದಿನೇಶ್‌ ಅಡ್ಕಾರು, ಗ್ರಾ.ಪಂ. ಕಾರ್ಯದರ್ಶಿ ಕೆ.ಬಿ. ಸುಬ್ಬಯ್ಯ, ಪ್ರಭಾರ ಪಿ.ಡಿ.ಒ. ಹೂವಪ್ಪ ಗೌಡ, ಅಧಿಕಾರಿಗಳು, ಶಾಲೆ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಸಿಬಂದಿ ಉಪಸ್ಥಿತರಿದ್ದರು. ಕವಿತಾ ಎನ್‌. ಹೊರತುಪಡಿಸಿ ಉಳಿದೆಲ್ಲ ಗ್ರಾ.ಪಂ. ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿ.ಪಂ. ಸದಸ್ಯರು ಕಾಣಲು ಸಿಗುತ್ತಿಲ್ಲ, ಗ್ರಾಮ ಸಭೆಗೂ ಬಂದಿಲ್ಲ. ವಾರದಲ್ಲಿ ಎರಡು ದಿನವಾದರೂ ಜಿ.ಪಂ. ಸದಸ್ಯರು ಗ್ರಾ.ಪಂ. ಕಚೇರಿಯಲ್ಲಿ ಸಿಗುವಂತಾಗಬೇಕು ಎಂದು ಶೇಖರ ಕಾಳಮನೆ ಆಗ್ರಹಿಸಿದರು.

ಸುಳ್ಯ- ಕಾಸರಗೋಡು ರಸ್ತೆಯಲ್ಲಿ ಜಾಲ್ಸೂರು ಗೇಟ್ನಿಂದ ಮುಂದೆ ದೊಡ್ಡ ತಿರುವಿದ್ದು, 15 ವರ್ಷಗಳಿಂದ ಬೇಡಿಕೆಯಿಟ್ಟಿದ್ದರೂ ಹುಸಿ ಭರವಸೆ ನೀಡುತ್ತಿದ್ದಾರೆ. ಪ್ರಯಾಣಿಕರ ಜೀವಕ್ಕೆ ಬೆಲೆ ಇಲ್ಲವೇ ಎಂದು ಶೇಖರ್‌ ಕಾಳಮನೆ ಪ್ರಶ್ನಿಸಿದರು. ಉತ್ತರಿಸಿದ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಎಸ್‌. ನಾಯಕ್‌, ಒಂದು ವಾರದೊಳಗೆ ಬ್ಯಾರಿಕೇಡ್‌ ಹಾಕಲಾಗುವುದು ಎಂದರು. ತಿರುವು ಇರುವುದರಿಂದ ಬ್ಯಾರಿಕೇಡ್‌ ಹಾಕುವುದು ಅಪಾಯ. ಹೆಚ್ಚು ಅಪಘಾತಗಳು ಸಂಭವಿಸಬಹುದು, ತಡೆಗೋಡೆ ಅಥವ ಹಂಪ್‌ ನಿರ್ಮಿಸಬೇಕೆಂದು ಜನರು ಒತ್ತಾಯಿಸಿದರು. ಗ್ರಾ.ಪಂ. ಕಾರ್ಯದರ್ಶಿ ಸುಬ್ಬಯ್ಯ ಮಾತಾಡಿ, ಹಂಪ್‌ ಹಾಕಲು ಸಾಧ್ಯವಿಲ್ಲ, ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗುವುದು ಎಂದರು.

ಜಿ.ಪಂ. ಸದಸ್ಯರನ್ನು ಪತ್ತೆಹಚ್ಚಿ

ಜಿ.ಪಂ. ಸದಸ್ಯರು ಕಾಣಲು ಸಿಗುತ್ತಿಲ್ಲ, ಗ್ರಾಮ ಸಭೆಗೂ ಬಂದಿಲ್ಲ. ವಾರದಲ್ಲಿ ಎರಡು ದಿನವಾದರೂ ಜಿ.ಪಂ. ಸದಸ್ಯರು ಗ್ರಾ.ಪಂ. ಕಚೇರಿಯಲ್ಲಿ ಸಿಗುವಂತಾಗಬೇಕು ಎಂದು ಶೇಖರ ಕಾಳಮನೆ ಆಗ್ರಹಿಸಿದರು.

ಮರಸಂಕ ತಡೆಗೋಡೆ ನಿರ್ಮಿಸಿ

ಸುಳ್ಯ- ಕಾಸರಗೋಡು ರಸ್ತೆಯಲ್ಲಿ ಜಾಲ್ಸೂರು ಗೇಟ್ನಿಂದ ಮುಂದೆ ದೊಡ್ಡ ತಿರುವಿದ್ದು, 15 ವರ್ಷಗಳಿಂದ ಬೇಡಿಕೆಯಿಟ್ಟಿದ್ದರೂ ಹುಸಿ ಭರವಸೆ ನೀಡುತ್ತಿದ್ದಾರೆ. ಪ್ರಯಾಣಿಕರ ಜೀವಕ್ಕೆ ಬೆಲೆ ಇಲ್ಲವೇ ಎಂದು ಶೇಖರ್‌ ಕಾಳಮನೆ ಪ್ರಶ್ನಿಸಿದರು. ಉತ್ತರಿಸಿದ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಎಸ್‌. ನಾಯಕ್‌, ಒಂದು ವಾರದೊಳಗೆ ಬ್ಯಾರಿಕೇಡ್‌ ಹಾಕಲಾಗುವುದು ಎಂದರು. ತಿರುವು ಇರುವುದರಿಂದ ಬ್ಯಾರಿಕೇಡ್‌ ಹಾಕುವುದು ಅಪಾಯ. ಹೆಚ್ಚು ಅಪಘಾತಗಳು ಸಂಭವಿಸಬಹುದು, ತಡೆಗೋಡೆ ಅಥವ ಹಂಪ್‌ ನಿರ್ಮಿಸಬೇಕೆಂದು ಜನರು ಒತ್ತಾಯಿಸಿದರು. ಗ್ರಾ.ಪಂ. ಕಾರ್ಯದರ್ಶಿ ಸುಬ್ಬಯ್ಯ ಮಾತಾಡಿ, ಹಂಪ್‌ ಹಾಕಲು ಸಾಧ್ಯವಿಲ್ಲ, ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗುವುದು ಎಂದರು.

ಟಾಪ್ ನ್ಯೂಸ್

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

kharge

LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ

11

Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.