ಶ್ರೀಗಂಧ ಕಳವು ಪ್ರಕರಣ: ಆರೋಪಿಗಳ ಸುಳಿವಿಲ್ಲ

Team Udayavani, Jul 15, 2019, 9:29 AM IST

ಬೆಳ್ತಂಗಡಿ: ಅರಣ್ಯ ಇಲಾಖೆ ಗೋದಾಮಿನ ಬೀಗ ಮುರಿದು 344 ಕೆ.ಜಿ. ತೂಕದ 8.60 ಲ. ರೂ. ಮೌಲ್ಯದ ಶ್ರೀಗಂಧದ ತುಂಡು ಕಳವು ಮಾಡಿರುವ ಪ್ರಕರಣದ ತನಿಖೆ ಚುರುಕಾಗಿದೆ. ಆದರೆ ಇದುವರೆಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ.

ಭದ್ರತೆಯಲ್ಲಿರಿಸಿದ್ದ ಗೋದಾಮಿಗೆ ಕನ್ನ ಹಾಕಿರುವವರು ಹಲವು ದಿನಗಳಿಂದ ಹೊಂಚು ಹಾಕಿ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

1998ರಲ್ಲೂ ಕಳವಾಗಿತು ಅಪಾರ ಶ್ರೀಗಂಧ
ಈ ಹಿಂದೆಯೂ ಇಲ್ಲಿಂದ ಕಳವು ನಡೆ ದಿತ್ತು. ಶ್ರೀಗಂಧ ಜಾಲ ಸಕ್ರಿಯವಾಗಿದ್ದ 1998ರ ಕಾಲ ಘಟ್ಟದಲ್ಲಿ ಸರಿ ಸುಮಾರು 2 ಟನ್‌ ಗೂ ಅಧಿಕ ಶ್ರೀಗಂಧ ಕಳವಾಗಿತ್ತು. ಆ ಬಳಿ ಕವೂ ಕಳವು ನಡೆದಿದ್ದು, ಈಗ ನಡೆದಿರುವುದು 5ನೇ ಪ್ರಕರಣ ಎನ್ನಲಾಗಿದೆ. ಆದರೆ ಯಾವ ಪ್ರಕರಣಕ್ಕೂ ಸಂಬಂಧಿಸಿ ಆರೋಪಿಗಳ ಪತ್ತೆಯಾಗಿರಲಿಲ್ಲ. ಕಳವಾಗಿದ್ದ ಗಂಧದ ತುಂಡುಗಳಲ್ಲಿ ಕೆಲವನ್ನು ಪತ್ತೆ ಹಚ್ಚಲಾಗಿತ್ತು. ಅನುಮಾನಾಸ್ಪದವಾಗಿ ಕಂಡು ಬಂದಿದ್ದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಪ್ರಕರಣ ಹಾಗಾಗದಿರಲಿ ಎಂಬುದು ಸಾರ್ವಜನಿಕರ ಆಶಯ.

ತನಿಖೆಗೆ ಸೂಚಿಸಲಾಗಿದೆ: ಅರಣ್ಯಾಧಿಕಾರಿ
ಪ್ರಕರಣದ ತನಿಖೆ ಕುರಿತು ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ. ಗೋದಾಮಿನಲ್ಲಿ 403 ಕೆ.ಜಿ. ಇತ್ತು. ಸದ್ಯ ಕಳವಾಗಿರುವುದು ಹೊರತುಪಡಿಸಿ ಇನ್ನು 55 ಕೆ.ಜಿ.ಯಷ್ಟು ಶ್ರೀಗಂಧ ಗೋದಾಮಿನಲ್ಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿ¨ªರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ