ಬೆಂಗಳೂರಿನಲ್ಲಿ 33 ಲಕ್ಷ ರೂ. ಖೋಟಾ ನೊಟು ಜಪ್ತಿ: ವಿದೇಶಿಗ ಅರೆಸ್ಟ್
Team Udayavani, Jul 13, 2019, 1:12 PM IST
ಬೆಂಗಳೂರು: ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಖೋಟಾ ನೋಟು ಜಾಲವನ್ನು ಬೇಧಿಸಿದ್ದಾರೆ.
ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಕ್ಯಾಮರೋನ್ ದೇಶದ ಪ್ರಜೆಯನು ಬಂಧಿಸಿದ್ದಾರೆ.
ಆರೋಪಿಯಿಂದ 2000 ರೂ. ಮುಖಬೆಲೆ 33 ಲಕ್ಷ ರೂ. ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.
ಈ ಜಾಲದಲ್ಲಿ ಇನ್ನೂ ಕೆಲವರು ತೊಡಗಿಸಿಕೊಂಡಿರುವ ಸಾಧ್ಯತೆ ಹಿನ್ನಲೆಯಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.