ವಿಶ್ವದ ನಂ.1 ಅಮಿತ್ಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಅಗ್ರ ಶ್ರೇಯಾಂಕ
Team Udayavani, Jul 10, 2021, 7:00 AM IST
ಹೊಸದಿಲ್ಲಿ: ವಿಶ್ವದ ನಂಬರ್ ವನ್ ಬಾಕ್ಸರ್ ಅಮಿತ್ ಪಂಘಲ್ (52 ಕೆ.ಜಿ.) ಅವರಿಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಅಗ್ರ ಶ್ರೇಯಾಂಕ ಲಭಿಸಿದೆ. ವನಿತಾ ಬಾಕ್ಸರ್ ಸಿಮ್ರನ್ಜಿತ್ ಕೌರ್ (60 ಕೆ.ಜಿ.) ಅವರಿಗೆ 4ನೇ ಶ್ರೇಯಾಂಕ ನೀಡಲಾಗಿದೆ.
“ಬಾಕ್ಸಿಂಗ್ ಟಾಸ್ಕ್ಫೋರ್ಸ್’ ನೀಡಿದ ಶ್ರೇಯಾಂಕವೀಗ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಗೆ ಲಭಿಸಿದ್ದು, ಜು. 22ರಂದು ಇದನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಅಮಿತ್ ಪಂಘಲ್ ಮತ್ತು ಸಿಮ್ರನ್ಜಿತ್ ಕೌರ್ ಮಾತ್ರ ಶ್ರೇಯಾಂಕ ಪಡೆದ ಭಾರತದ ಬಾಕ್ಸರ್ಗಳಾಗಿದ್ದಾರೆ.
ಅಮಿತ್ ಪಂಘಲ್ ಏಶ್ಯಾಡ್ ಚಾಂಪಿಯನ್ ಆಗಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಪಂಘಲ್ ಮತ್ತು ಕೌರ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಒಲಿಂಪಿಕ್ಸ್ ಆಗಿದೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ 9 ಬಾಕ್ಸರ್ಗಳು ಸ್ಪರ್ಧಿಸಲಿದ್ದಾರೆ. 5 ಪುರುಷರು ಹಾಗೂ ನಾಲ್ವರು ವನಿತೆಯರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.