ಮುಂದಿನ ವರ್ಷದಿಂದ 6 ತಂಡಗಳ ವನಿತಾ ಐಪಿಎಲ್
Team Udayavani, Mar 25, 2022, 11:00 PM IST
ಮುಂಬಯಿ: ಮುಂದಿನ ವರ್ಷದಿಂದ 6 ತಂಡಗಳ ನಡುವಿನ ವನಿತಾ ಐಪಿಎಲ್ ಪಂದ್ಯಾವಳಿ ನಡೆಯಲಿದೆ.
ಶುಕ್ರವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಬಿಸಿಸಿಐ ಇದನ್ನು ಘೋಷಿಸಿದೆ. ಈ ವರ್ಷ ಮಾಮೂಲಿನಂತೆ 3 ತಂಡಗಳ ನಡುವೆ ಕಿರು ಸರಣಿ ನಡೆಯಲಿದೆ.
ಈಗಿನ ಫ್ರಾಂಚೈಸಿಗಳಲ್ಲಿ ಯಾರಾದರೂ ವನಿತಾ ಫ್ರಾಂಚೈಸಿಯನ್ನೂ ಖರೀದಿಸುವುದಿದ್ದರೆ ಮುಂದೆ ಬರಬಹುದು. ಅನಂತರವೇ ಬೇರೆಯವರನ್ನು ಸಂಪರ್ಕಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.
ಇದನ್ನೂ ಓದಿ:ಲಾಹೋರ್ ಟೆಸ್ಟ್: ಆಸ್ಟ್ರೇಲಿಯಕ್ಕೆ 1-0 ಟೆಸ್ಟ್ ಸರಣಿ