ಅಲೋಪತಿಗೆ ಅವಹೇಳನ: ಯೋಗಗುರು ಬಾಬಾ ರಾಮ್ದೇವ್ ವಿರುದ್ಧ ಕ್ರಮಕ್ಕೆ ಆಗ್ರಹ
Team Udayavani, May 22, 2021, 8:14 PM IST
ನವದೆಹಲಿ: ಆಧುನಿಕ ವೈದ್ಯಪದ್ಧತಿ ಅಲೋಪತಿಯನ್ನು ಅವಹೇಳನ ಮಾಡಿರುವ ಯೋಗಗುರು ಬಾಬಾ ರಾಮ್ದೇವ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ; ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಗ್ರಹಿಸಿದೆ.
ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎನ್ನುವುದು ಐಎಂಎ ಬೇಡಿಕೆ. ರಾಮ್ದೇವ್ ಮಾತನಾಡಿದ್ದ ವಿಡಿಯೋವೊಂದು ಬಹಳ ವೈರಲ್ ಆಗಿದೆ. ಅದರಲ್ಲಿ “ಆಧುನಿಕ ಅಲೋಪತಿಯೆನ್ನುವುದು ಮುಟ್ಟಾಳ ಮತ್ತು ದಿವಾಳಿ ವಿಜ್ಞಾನ’ ಎಂದು ರಾಮ್ದೇವ್ ಹೇಳಿದ್ದಾರೆ. ಈ ಮಾತನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಒಂದೋ ಒಪ್ಪಿಕೊಳ್ಳಬೇಕು ಅಥವಾ ರಾಮ್ದೇವ್ ವಿರುದ್ಧ ಕ್ರಮತೆಗೆದುಕೊಳ್ಳಬೇಕು.
ಇಲ್ಲವಾದರೆ ನಾವು ಕಾನೂನುಕ್ರಮದ ಮೊರೆ ಹೋಗುತ್ತೇವೆ ಎಂದು ಐಎಂಎ ಹೇಳಿದೆ.
ಇದನ್ನೂ ಓದಿ :ಶಿವಮೊಗ್ಗ : ಚಾನಲ್ ಗೆ ಹಾರಿ ಕೋವಿಡ್ ಸೋಂಕಿತ ವ್ಯಕ್ತಿ ಆತ್ಮಹತ್ಯೆ