ಮಹಾ ಪ್ರವಾಹ: ಬೆಳಗಾವಿಯಲ್ಲಿ 20 ಗಂಟೆಯ ನಂತರ ದಂಪತಿ ರಕ್ಷಣೆ

Team Udayavani, Aug 8, 2019, 12:40 PM IST

ಬೆಳಗಾವಿ: ಬೆಳಗಾವಿ- ಗೋಕಾಕ ಮಾರ್ಗದಲ್ಲಿ ತುಂಬಿ ಹರಿಯುತ್ತಿರುವ ಬಳ್ಳಾರಿ ನಾಲಾ ಪ್ರವಾಹದಲ್ಲಿ ಸುಮಾರು 20 ಗಂಟೆಯಿಂದ ಸಿಲುಕಿದ್ದ ದಂಪತಿಯನ್ನು ಕಡೆಗೂ ರಕ್ಷಣೆ ಮಾಡಲಾಗಿದೆ.

ಸತತವಾಗಿ ಕಾರ್ಯಾಚರಣೆ ನಡೆಸಿದರೂ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ.

ತಾಲೂಕಿನ ಕಬಲಾಪುರ ಗ್ರಾಮದ ಬಳಿ ಸಿಲುಕಿಕೊಡ ದಂಪತಿಯ ಸ್ಥಿತಿ ಚಿಂತಾಜನಕವಾಗಿದೆ. ರೈತ ಕಾಡಪ್ಪ ಹಾಗೂ ಪತ್ನಿ ರತ್ನವ್ವ ತೋಟದ ಮನೆಯಲ್ಲಿದ್ದಾಗ ಪ್ರವಾಹ ಬಂದಿತ್ತು.‌ ಮೂರು ದಿನಗಳಿಂದಲೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದರೂ ವಿಫಲವಾಗುತ್ತಿದ್ದು, ಕಡೆಗೂ ಗುರುವಾರ ಮಧ್ಯಾಹ್ನ ರಕ್ಷಣೆ ಮಾಡಲಾಗಿದೆ.

ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದರು. ಕಾರ್ಯಾಚರಣೆ ವೇಗ ಪಡೆದುಕೊಂಡಿದೆ. ಬೆಳಗಾವಿಯಲ್ಲಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದ್ದು, ದಂಪತಿ ರಕ್ಷಣೆ ಕುರಿತು ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ