ಕಡ್ಡಾಯ ಕೋವಿಡ್ ಲಸಿಕೆ; ನ್ಯೂಜಿಲ್ಯಾಂಡ್ನಲ್ಲಿ ಭಾರೀ ಪ್ರತಿಭಟನೆ
Team Udayavani, Mar 3, 2022, 6:45 AM IST
ವೆಲ್ಲಿಂಗ್ಟನ್: ಕೊರೊನಾ ವಿರುದ್ಧ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನ್ಯೂಜಿಲ್ಯಾಂಡ್ ಸರಕಾರದ ನಿಯಮ ಜನರನ್ನು ರೊಚ್ಚಿಗೇಳುವಂತೆ ಮಾಡಿದೆ.
ಪೊಲೀಸರ ಜತೆಗೆ ಪ್ರತಿಭಟನ ಕಾರರು ಘರ್ಷಣೆಗೆ ಇಳಿದಿದ್ದಾರೆ ಮತ್ತು ಟೆಂಟ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ 23 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಏಕಾಏಕಿ ಬಿರುಸುಗೊಂಡಿದೆ.
ಪೊಲೀಸರು ಪ್ರತಿಭಟನಾಕಾರರ ಟೆಂಟ್ಗಳನ್ನು ತೆರವುಗೊಳಿಸುವ ಪ್ರಯತ್ನದಿಂದ ಜನರು ರೊಚ್ಚಿಗೆದ್ದರು. ಅವರು ಟೆಂಟ್ಗಳಿಗೆ ಬೆಂಕಿ ಹಚ್ಚಿದ್ದಾರಲ್ಲದೆ, ಘರ್ಷಣೆಗೂ ಇಳಿದಿದ್ದಾರೆ. ಅವರನ್ನು ಚದುರಿಸುವ ನಿಟ್ಟಿನಲ್ಲಿ ಪೊಲೀಸರು ರಬ್ಬರ್ ಬುಲೆಟ್ ಪ್ರಯೋಗಿಸಿದ್ದಾರೆ.
ಎಲ್ಲದಕ್ಕಿಂತ ಹೆಚ್ಚಾಗಿ 5 ಲಕ್ಷ ಡಾಲರ್ (2.56 ಕೋಟಿ ರೂ.) ಮೊತ್ತದಲ್ಲಿ ನಿರ್ಮಿಸಲಾಗಿರುವ ಸಂಸತ್ ಭವನದ ಒಂದು ಭಾಗ ಕೂಡ ಪ್ರತಿಭಟ ನಕಾರರ ಆಕ್ರೋಶಕ್ಕೆ ಆಹುತಿಯಾಗಿದೆ. ಅದರ ಫೋಟೋ ಮತ್ತು ವೀಡಿಯೋ ವೈರಲ್ ಆಗಿದೆ. ಅಲ್ಲಿ ಪ್ರತಿಭಟ ನಕಾರರು ದಾಂಧಲೆ ನಡೆಸಿ, ಬೆಂಕಿ ಹಚ್ಚಿದ್ದಾರೆ. ವೆಲ್ಲಿಂಗ್ಟನ್ನಿಂದ ಇತರ ಭಾಗ ಗಳಿಗೆ ತೆರಳುವ ರೈಲುಗಳನ್ನು ರದ್ದು ಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ