ಬಾಲ್ಯದಲ್ಲಿ ಸಾಕಷ್ಟು ತುಂಟ…ನೂತನ ಸಿಎಂ ಬೊಮ್ಮಾಯಿ ಬಗ್ಗೆ ಸಹೋದರಿ ಅನಿಸಿಕೆ

ಇದು ನಮ್ಮ ಕುಟುಂಬದಲ್ಲಿ ಮೂರನೇ ತಲಾಮಾರಿನ ರಾಜಕೀಯವಾಗಿದೆ.

Team Udayavani, Jul 28, 2021, 5:53 PM IST

ಬಾಲ್ಯದಲ್ಲಿ ಸಾಕಷ್ಟು ತುಂಟ…ನೂತನ ಸಿಎಂ ಬೊಮ್ಮಾಯಿ ಬಗ್ಗೆ ಸಹೋದರಿ ಅನಿಸಿಕೆ

ಹುಬ್ಬಳ್ಳಿ: “ಬಸಣ್ಣನನ್ನು ಅಪ್ಪಾಜಿ ರಾಜಕೀಯಕ್ಕೆ ಬರಬೇಡ ಉದ್ಯಮದಲ್ಲಿ ಮುಂದುವರಿಯುವಂತೆ ಆಗಾಗ ಹೇಳುತ್ತಿದ್ದರು. ಆದರೆ, ಬೊಮ್ಮಾಯಿ ಕುಟುಂಬದಿಂದ ಮತ್ತೂಬ್ಬರು ರಾಜಕೀಯಕ್ಕೆ ಬರಬೇಕು ಎಂಬುದು ಜನರ ಒತ್ತಾಯ, ಬೆಂಬಲಿಗರ ಆಪೇಕ್ಷೆಯಾಗಿತ್ತು. ಈ ವಿಚಾರವಾಗಿ ಮನೆಯಲ್ಲಿ ಬಹಳಷ್ಟು ಚರ್ಚೆಗಳು ಆದವು. ಆದರೆ ಜನರ ಬೇಡಿಕೆ ಗೆದ್ದು ಕೊನೆಗೆ ಬಸಣ್ಣ ರಾಜಕೀಯಕ್ಕೆ ಬಂದ. ಅಪ್ಪ ಅಲಂಕರಿಸಿದ ಸ್ಥಾನಕ್ಕೆ ನನ್ನ ತಮ್ಮ ಬಂದಿರುವುದು ಸಾಕಷ್ಟು ಸಂತಸ ಮೂಡಿಸಿದೆ’ ಇದು ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದ್ವಿತೀಯ ಸಹೋದರಿ ಉಮಾ ಪಾಟೀಲ ಅವರು ಸಹೋದರನ ರಾಜಕೀಯ ಪ್ರವೇಶ, ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಬಗೆಗಿನ ಅನಿಸಿಕೆ.

ಬಾಲ್ಯದಲ್ಲಿ ಸಾಕಷ್ಟು ತುಂಟ: ಬಾಲ್ಯದಲ್ಲಿ ಸಾಕಷ್ಟು ತುಂಟ, ಇಬ್ಬರಿಗಿಂತ ಕಿರಿಯವನಾದರೂ ಇಬ್ಬರೂ ಅಕ್ಕಂದಿರನ್ನು ಮನೆಯಲ್ಲಿ ಹೆದರಿಸುತ್ತಿದ್ದ, ಅಷ್ಟೇ ಅನ್ಯೋನ್ಯವಾಗಿ ಇರುತ್ತಿದ್ದ. ಮನೆ ದುರ್ಗದ ಬಯಲಿನಲ್ಲಿದ್ದರೂ ಅಲ್ಲಿಂದ ನಡೆದುಕೊಂಡೇ ರೋಟರಿ ಶಾಲೆಗೆ ಬರುತ್ತಿದ್ದ. ಶಾಲೆಯಲ್ಲಿ
ಯಾರೇ ರೇಗಿಸಿದರೆ ಮನೆಗೆ ಬಂದು ನನ್ನ ಮುಂದೆ ಹೇಳಿ ಮಾರನೇ ದಿನ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ನೆಹರು ಮೈದಾನ ಇವರ ಆಟದ ಸ್ಥಳವಾಗಿತ್ತು. ಹೆಚ್ಚಾಗಿ ಕ್ರಿಕೆಟ್‌ ಆಟವನ್ನೇ ಆಡುತ್ತಿದ್ದ.

ಇಷ್ಟೊಂದು ಒತ್ತಡದ ನಡುವೆಯೂ ಮಕ್ಕಳು, ಸಂಸಾರದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಈ ಭಾಗದ ರೊಟ್ಟಿ, ಕೆಂಪು ಚಟ್ನಿ, ಮಿರ್ಚಿ ಮಂಡಕ್ಕಿ, ತಿಳಿ ಸಾರು ಅಂದರೆ ಸಾಕಷ್ಟು ಇಷ್ಟ. ಬಹಳ ಮೃದು ಸ್ವಭಾವ. ತತ್‌ಕ್ಷಣ ಯಾರಿಗಾದರೂ ಬೈದರೆ ನೊಂದುಕೊಳ್ಳುತ್ತಾರೆ ಎನ್ನುವ ಮನಸ್ಥಿತಿ. ಏನನ್ನಾದರೂ ಹೇಳಬೇಕಾದರೆ ಬಹಳ ಯೋಚಿಸಿ ಮಾತನಾಡುವ ವ್ಯಕ್ತಿತ್ವ ಅವರದು. ವೀರಶೈವರು ಎಂದು ಬೆಳೆದುಕೊಂಡು ಬಂದ ಸಂಪ್ರದಾಯ ನಮ್ಮದು.ಅದನ್ನೇ ರೂಢಿಸಿಕೊಂಡಿದ್ದೇವೆ.

ನಮ್ಮ ತಾಯಿಯ ತಂದೆ ಮಲ್ಲಯ್ಯ ಹುರಳಿಕೊಪ್ಪ ಮುಂಬೈ ಸರಕಾರದಲ್ಲಿ ಶಿಗ್ಗಾವಿ-ಸವಣೂರು ಕ್ಷೇತ್ರದ ಶಾಸಕರು. ನಂತರ ನಮ್ಮ ತಂದೆ ಎಸ್‌.ಆರ್‌.ಬೊಮ್ಮಾಯಿ ಅವರು ಶಾಸಕರು, ಮುಖ್ಯಮಂತ್ರಿ. ಇವರಿಬ್ಬರ ರಾಜಕೀಯ ಜೀವನ ತಮ್ಮನ ಮೇಲೆ ಪ್ರಭಾವ ಬೀರಿದೆ. ಒಂದು ಸಮಯದಲ್ಲಿ ರಾಜಕೀಯಕ್ಕೆ ಬರಬೇಡ ಎಂದು ತಂದೆ ಹೇಳಿದರೂ ಅಂದಿನ ಪರಿಸ್ಥಿತಿ ಇಲ್ಲಿಯವರೆಗೆ ಕರೆದುಕೊಂಡು ಬಂದು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಇದು ನಮ್ಮ ಕುಟುಂಬದಲ್ಲಿ ಮೂರನೇ ತಲಾಮಾರಿನ ರಾಜಕೀಯವಾಗಿದೆ.

ನ್ಯಾಯ, ಅಭಿವೃದ್ಧಿ ಕನಸು: ನೊಂದವರಿಗೆ ನ್ಯಾಯ, ಪರಿಹಾರ ಕೊಡಿಸು, ಕೈಲಾದ ಸಹಾಯ ಮಾಡು ಎಂದು ಯಾವಾಗಲು ನಾವು ಹೇಳುತ್ತೇವೆ. ಇಂದು ಕೂಡ ಸಹೋದರ ಬಸವರಾಜನಿಗೆ ಹೇಳುವುದು ಇದನ್ನೇ. ಹಿಂದಿನಿಂದಲೂ ಉತ್ತರ ಕರ್ನಾಟಕದ ಅಭಿವೃದ್ಧಿಯಿಂದ ಹಿಂದೆ ಬಿದ್ದಿದೆ ಎನ್ನುವ ಮಾತಿದೆ. ಇದನ್ನು ತೊಲಗಿಸುವ ನಿಟ್ಟಿಲ್ಲಿ ಈ ಭಾಗದ ಅಭಿವೃದ್ಧಿಯೊಂದಿಗೆ ರಾಜ್ಯದ ಸಮಗ್ರ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡುತ್ತೇವೆ. ಅವರ ಪ್ರಮಾಣ ವಚನ ಸ್ವೀಕರಿಸುವ ಶುಭ ಸಂದರ್ಭಕ್ಕೆ ಸಂತಸ ಹಂಚಿಕೊಂಡರು.

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.