ದಾವಣಗೆರೆ ಜಿಲ್ಲೆಯ 41ಜನರಲ್ಲಿ ಕೋವಿಡ್ ಪಾಸಿಟಿವ್! ಇಬ್ಬರು ಸಾವು
Team Udayavani, Aug 3, 2020, 8:10 PM IST
ದಾವಣಗೆರೆ : ಜಿಲ್ಲೆಯಲ್ಲಿ ಸೋಮವಾರ 41ಜನರಲ್ಲಿ ಸೋಂಕು ದೃಢಪಟ್ಟಿದ್ದು ಸೋಂಕಿಗೆ ಇಬ್ಬರು ಸಾವನ್ನಪ್ಪಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 79 ವರ್ಷದ ವೃದ್ಧ (ರೋಗಿ ನಂಬರ್ 138019), 50 ವರ್ಷದ ವೃದ್ಧ (ರೋಗಿ ನಂಬರ್ 96350) ಸಾವನ್ನಪ್ಪಿದವರು. ಇಬ್ಬರ ಸಾವಿನಿಂದ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 57 ಆಗಿದೆ.
ಜಿಲ್ಲೆಯಲ್ಲಿ 41ಜನರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಮಾಣ ಈಗ 2428. ಕೋವಿಡ್ ನಿಂದ ಗುಣಮುಖರಾದ 90 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 1670 ಜನರು ಬಿಡುಗಡೆಯಾದಂತಾಗಿದೆ. 810 ಸಕ್ರಿಯ ಪ್ರಕರಣಗಳಿವೆ.